ಹೆಚ್ಚೇನು ವಯಸ್ಸಾಗಿಲ್ಲ ; ವಿಜಯ್ ಮಕ್ಕಳಿಗೆ ತ್ರಿಶಾ ಜನ್ಮ ಕೊಡ್ತಾರೆ, ಅವರೇ ಮುಂದಿನ ಉತ್ತರಾಧಿಕಾರಿ ಆಗ್ತಾರೆ
ದಾಂಪತ್ಯ ಕಲಹದಿಂದ ಈ ಚುನಾವಣೆಯಲ್ಲಿ ವಿಜಯ್‌ಗೆ ಹಿನ್ನೆಡೆಯಾಗಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ .. ಲೆಕ್ಕ ತಪ್ಪಿತು. ಮುಖ್ಯಮಂತ್ರಿಯ ಗದ್ದುಗೆ ವಿಜಯ್‌ಗೆ ಒಲಿಯಿತು. ಇನ್ನು ಗೆದ್ದಿದ್ದು ವಿಜಯ್ ಆದರೂ ಸಂಭ್ರಮ ಕಂಡು ಬರುತ್ತಿರುವುದು ತ್ರಿಶಾ ಮೊಗದಲ್ಲಿ. ನಿಜಾ, ಇಬ್ಬರು ಅತ್ಯಾಪ್ತ ಸ್ನೇಹಿತರಾಗಿರಬಹುದು. ಗೆಳೆಯ ಗೆದ್ದ ಖುಷಿಯಲ್ಲಿ ತ್ರಿಶಾ ಇರಬಹುದು.
ಆದರೆ ಇವರ ಸಂಬಂಧದ ಮೇಲೆ ಇವತ್ತು ಕೂಡ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇದೆ. ಈ ಪ್ರಶ್ನೆಗೆ ಅಧಿಕೃತ ಉತ್ತರ ಸಿಗುವವರೆಗೆ ಅಂತೆ-ಕಂತೆಯ ಸಂತೆಯಲ್ಲಿ ವಿಜಯ್ ಮತ್ತು ತ್ರಿಶಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಮಾತನಾಡಿಕೊಳ್ಳುತ್ತಿದ್ದಾರೆ. ಸಂಗೀತಾ ಮತ್ತು ವಿಜಯ್ ಅವರ 27 ವರ್ಷದ ದಾಂಪತ್ಯ ಮುರಿದು ಬೀಳಲು ತ್ರಿಶಾನೇ ನೇರ ಕಾರಣ ಎಂದು ಹಲವರು ಆರೋಪವನ್ನು ಕೂಡ ಹೊರಿಸಿದ್ಧಾರೆ.

ಇನ್ನೂ ಇವರಿಬ್ಬರ ನಡುವಿನ ಆತ್ಮೀಯತೆ ಈಗ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯದ ಪಡಸಾಲೆಯವರೆಗೂ ವಿಸ್ತಾರಗೊಂಡಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ವಿಜಯ್ ಅವರ ಹಿಂದೆ ಹಿಂದೆಯೇ ತ್ರಿಶಾ ಕೂಡ ರಾಜಕೀಯದ ರಣರಂಗಕ್ಕೆ ಧುಮುಕುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಸುದ್ದಿ ನಿಜವಾಗುತ್ತಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯ ತ್ರಿಶಾ ಮತ್ತು ವಿಜಯ್ ಅವರಿಗೆ ಮುಂಬರುವ ದಿನಗಳಲ್ಲಿ ಮಕ್ಕಳಾಗಬಹುದು ಎಂದು ಶಾಂತಿವಿಳ ದಿನೇಶ್ ಹೇಳಿದ್ದಾರೆ.
ಹೌದು, ಶಾಂತಿವಿಲ ದಿನೇಶ್.. ಮಲಯಾಳಂನ ನಿರ್ದೇಶಕ. ಸರಿಯಾಗಿ 21 ವರ್ಷದ ಹಿಂದೆ ''ಬಂಗ್ಲಾವಿಲ್ ಔತಾ'' ಎಂಬ ಚಿತ್ರವನ್ನು ನಿರ್ದೇಶಿಸಿದ್ದವರು ಇವರು. ಇದೇ ಮೊದಲು ಇದೆ ಕೊನೆ. ಆ ನಂತರ ಬೇರೆ ಯಾವ ಚಿತ್ರವನ್ನು ನಿರ್ದೇಶನ ಮಾಡದ ಶಾಂತಿವಿಲ ದಿನೇಶ್ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಪಿ.ಆರ್.ಓ ಆಗಿ ಕೆಲಸ ಕೂಡ ಮಾಡಿದ್ದಾರೆ.
ಇನ್ನು ಇತ್ತೀಚೆನ ವರ್ಷಗಳಲ್ಲಿ ಇವರು ಸದ್ದು ಮಾಡುತ್ತಿರುವುದು ತಮ್ಮ ಯೂಟ್ಯೂಬ್ ಮೂಲಕ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕುಳಿತು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಶಾಂತಿವಿಲ ದಿನೇಶ್ ಸದ್ಯ ವಿಜಯ್ ಮತ್ತು ತ್ರಿಶಾ ಸಂಬಂಧದ ಕುರಿತು ಮಾತನಾಡಿದ್ಧಾರೆ. ಈ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ''ಲೈಟ್ಸ್, ಕ್ಯಾಮರಾ, ಆಕ್ಷನ್''ನಲ್ಲಿ ಈ ಕುರಿತು ಮಾತನಾಡಿರುವ ಶಾಂತಿವಿಲ ದಿನೇಶ್, ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯದಲ್ಲಿ ಅಷ್ಟೊಂದು ಜನಸಂದಣಿಯ ನಡುವೆ ಪೊಲೀಸರು ತ್ರಿಶಾ ಅವರನ್ನು ಒಳಗಡೆ ಕಳಿಸಿದರು, ಬಹುಶಃ ಪೋಲಿಸರಿಗೆ ತ್ರಿಶಾ ಪರಿಚಿತರಾಗಿದ್ದರಿಂದ ಹೀಗಾಗಿರಬಹುದು ಎಂದಿದ್ದಾರೆ. ಜಯಲಲಿತಾ ಅವರಂತೆಯೇ ವಿಜಯ್ ಪಕ್ಷದಲ್ಲಿ ತ್ರಿಶಾ ಮುಂದಿನ ಅಧಿಕಾರಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು ತಮಿಳುನಾಡು ಅನೇಕ ಪ್ರಸಿದ್ದ ವ್ಯಕ್ತಿಗಳ ಪಾಲಿಗೆ ಅನೇಕ ಪತ್ನಿಯರು ಇರುವ ನಾಡು ಎಂದು ಹೇಳಿರುವ ಶಾಂತಿವಿಲ ದಿನೇಶ್, ಕಮಲ್ ಹಾಸನ್.. ಕವಿ ಕಣ್ಣದಾಸನ್.. ಕರುಣಾನಿಧಿ.. ಎಂಜಿಆರ್.. ಅವರ ಉದಾಹರಣೆಗಳನ್ನು ನೀಡಿದ್ದಾರೆ. ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲೇ ವಿಜಯ್ ಕೂಡ ಸಾಗುತ್ತಿದ್ಧಾರೆ ಎಂದಿದ್ಧಾರೆ.
ಇನ್ನೂ ಹಿಂದೆ ಸುದ್ದಿಯಾದಂತೆ ವಿಜಯ್ ಚಿತ್ರವೊಂದಕ್ಕೆ 200 ಕೋಟಿ ಸಂಭಾವನೆ ಪಡೆಯುವ ಸ್ಟಾರ್. ಈ ಕುರಿತು ಕೂಡ ಮಾತನಾಡಿರುವ ಶಾಂತಿವಿಲ ದಿನೇಶ್ ನಾಲ್ಕು ಸಿನಿಮಾಗಳಿಗೆ ₹1000 ಕೋಟಿ ಸಂಭಾವನೆ ಪಡೆಯುವುದಾಗಿ ಹೇಳಿರುವ ವಿಜಯ್, ₹200 ಕೋಟಿ ನೀಡಿ ಸಂಗೀತ ಮತ್ತು ಮಕ್ಕಳನ್ನು ದೂರವಿಡುವ ಪ್ರಯತ್ನ ಮಾಡಬಹುದು ಎಂದಿದ್ಧಾರೆ.
ಇದೇ ಸಮಯದಲ್ಲಿ ವಿಜಯ್ ಮತ್ತು ತ್ರಿಶಾ ಸಂಬಂಧ ಮತ್ತು ಮದುವೆಯ ಕುರಿತು ಕೂಡ ಮಾತನಾಡಿರುವ ಶಾಂತಿವಿಲ ದಿನೇಶ್, ವಿಜಯ್‌ಗೆ 52 ವರ್ಷ, ತ್ರಿಶಾಗೆ 43 ವರ್ಷ, ಇಬ್ಬರ ನಡುವೆ ಅಂತಹ ಅಂತರವೇನು ಇಲ್ಲ, ಇಬ್ಬರಿಗೂ ಹೆಚ್ಚಿನ ವಯಸ್ಸು ಆಗಿಲ್ಲ, ಹೀಗಾಗಿ ತ್ರಿಶಾ ಅವರಿಂದ ವಿಜಯ್ ಮಕ್ಕಳನ್ನು ಪಡೆಯುತ್ತಾರೆ, ಆ ಮಕ್ಕಳನ್ನು ಟಿವಿಕೆಯ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇಷ್ಟೇ ಅಲ್ಲದೇ ವಿಜಯ್ ಮತ್ತು ತ್ರಿಶಾ ಅವರಿಗೆ ಮಕ್ಕಳಾದ ನಂತರ ತಮಿಳುನಾಡಿನ ಜನ ಸಂಭ್ರಮ ಪಡುತ್ತಾರೆ, ಆ ಮಕ್ಕಳು ಉತ್ತರಾಧಿಕಾರಿಗಳಾಗಿ ಟಿವಿಕೆ ಗದ್ದುಗೆ ಏರಿದ ನಂತರ ಸಂತೋಷದಿಂದ ತಮಿಳುನಾಡಿನ ಜನ ಅವರನ್ನು ಕೂಡ ಸ್ವಾಗತಿಸುತ್ತಾರೆ ಎಂದಿದ್ದಾರೆ. ಸದ್ಯ ಶಾಂತಿವಿಲ ದಿನೇಶ್ ಅವರ ಈ ಹೇಳಿಕೆ ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.


Click it and Unblock the Notifications