For Quick Alerts
  ALLOW NOTIFICATIONS  
  For Daily Alerts

  ಆರಂಭಕ್ಕೂ ಮುನ್ನವೇ ನಿಂತು ಹೋಯ್ತು ವಿಜಯ್ 66ನೇ ಸಿನಿಮಾ?

  |

  'ಮಾಸ್ಟರ್' ಸಿನಿಮಾದ ಯಶಸ್ಸಿನ ಬಳಿಕ ಹೊಸ ಚಿತ್ರ ಆರಂಭಿಸಿರುವ ತಮಿಳು ನಟ ವಿಜಯ್ ಅದಾಗಲೇ ಚಿತ್ರೀಕರಣ ಮಾಡ್ತಿದ್ದಾರೆ. ಈ ಸಿನಿಮಾಗೆ ವಿಜಯ್ 65 ರಂದು ಹೆಸರಿಟ್ಟು ಶೂಟಿಂಗ್ ಮುಂದುವರಿಸಲಾಗುತ್ತಿದೆ. ಈ ನಡುವೆ ವಿಜಯ್ 65ನೇ ಸಿನಿಮಾಗೆ ಸಹ ವಿಜಯ್ ಚಾಲನೆ ಕೊಟ್ಟಿದ್ದರು.

  ತೆಲುಗಿನ ಸಕ್ಸಸ್‌ಫುಲ್ ನಿರ್ದೇಶಕ, 'ಮಹರ್ಷಿ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ವಂಶಿ ಪೈದಿಪಲ್ಲಿ ಜೊತೆ ವಿಜಯ್ 66ನೇ ಪ್ರಾಜೆಕ್ಟ್ ಮಾಡಲು ನಿರ್ಧರಿಸಿದ್ದರು. ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹಾಕಲು ಮುಂದೆ ಬಂದಿದ್ದರು. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜಿಸಿದ್ದರು. ಆದರೆ, ಈ ಸಿನಿಮಾ ಅಧಿಕೃತವಾಗಿ ಆರಂಭವಾಗುವುದಕ್ಕು ಮುನ್ನವೇ ನಿಂತು ಹೋಗಿದೆ ಎಂಬ ವಿಷಯ ಕೇಳಿ ಬರ್ತಿದೆ. ಅಷ್ಟಕ್ಕೂ, ವಿಜಯ್ 66 ಚಿತ್ರಕ್ಕೆ ಎದುರಾದ ಸಂಕಷ್ಟ ಏನು? ಏಕೆ ನಿಲ್ಲಿಸಲು ತೀರ್ಮಾನಿಸಲಾಗಿದೆ? ಮುಂದೆ ಓದಿ...

  ಕೋವಿಡ್ ಮುಗಿದ ಮೇಲೆ ಘೋಷಣೆ?

  ಕೋವಿಡ್ ಮುಗಿದ ಮೇಲೆ ಘೋಷಣೆ?

  ವಿಜಯ್-ವಂಶಿ ಪೈದಿಪಲ್ಲಿ ಹಾಗೂ ದಿಲ್ ರಾಜು ಕಾಂಬಿನೇಷನ್‌ನಲ್ಲಿ ಪ್ಲಾನ್ ಮಾಡಲಾಗಿದ್ದ ಪ್ರಾಜೆಕ್ಟ್‌ ಕುರಿತು ಅಧಿಕೃತ ಘೋಷಣೆಗೆ ತಯಾರಿ ನಡೆಸಲಾಗಿತ್ತು. ಕೋವಿಡ್ ಎರಡನೇ ಅಲೆಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು, ಸಹಜ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪ್ರಕಟಿಸಲು ನಿರ್ಧರಿಸಿದ್ದರು. ಆದ್ರೀಗ, ಸಿನಿಮಾವೇ ನಿಂತು ಹೋಗಿರುವ ವಿಚಾರ ವರದಿಯಾಗಿದೆ.

  ಸ್ಟಾರ್ ನಿರ್ದೇಶಕ-ಸ್ಟಾರ್ ನಟನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ?ಸ್ಟಾರ್ ನಿರ್ದೇಶಕ-ಸ್ಟಾರ್ ನಟನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿ?

  ವಂಶಿ ಸ್ಕ್ರಿಪ್ಟ್‌ ಇಷ್ಟ ಆಗಿಲ್ಲ

  ವಂಶಿ ಸ್ಕ್ರಿಪ್ಟ್‌ ಇಷ್ಟ ಆಗಿಲ್ಲ

  ತಮಿಳು-ತೆಲುಗು ಭಾಷೆಯಲ್ಲಿ ಸಿದ್ದವಾಗಬೇಕಿರುವ ವಂಶಿ ಪೈದಿಪಲ್ಲಿ ಸ್ಕ್ರಿಪ್ಟ್ ಬಗ್ಗೆ ವಿಜಯ್ ಖುಷಿಯಾಗಿಲ್ಲ. ಈ ಕಥೆ ಇನ್ನು ಆರಂಭಿಕ ಹಂತದಲ್ಲಿದೆ, ಇದನ್ನು ಡೆವಲಪ್ ಮಾಡಬೇಕು ಎಂದು ನಿರ್ಧರಿಸಿ ಸದ್ಯಕ್ಕೆ ಈ ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  ಬೇರೊಬ್ಬ ನಿರ್ದೇಶಕನ ಹುಡುಕಾಟ

  ಬೇರೊಬ್ಬ ನಿರ್ದೇಶಕನ ಹುಡುಕಾಟ

  ವಂಶಿ ಜೊತೆಗಿನ ಚಿತ್ರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿರುವ ವಿಜಯ್ ಹೊಸ ಪ್ರಾಜೆಕ್ಟ್ ಹುಡುಕಾಟದಲ್ಲಿದ್ದಾರೆ. ಸಮಯ ವ್ಯರ್ಥ ಮಾಡುವುದು ಬೇಡ ಎಂದು ಚಿಂತಿಸಿ ಬೇರೊಬ್ಬ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಮತ್ತೊಂದೆಡೆ ನಿರ್ದೇಶಕ ವಂಶಿ ಕಾದು ವಿಜಯ್‌ಗೆ ಸಿನಿಮಾ ಮಾಡ್ತಾರಾ ಅಥವಾ ಬೇರೊಬ್ಬ ನಟನೊಂದಿಗೆ ಮುಂದೆ ಸಾಗ್ತಾರಾ ಕಾದು ನೋಡಬೇಕಿದೆ.

  ವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತುವಿಜಯ್ ರಿಜೆಕ್ಟ್ ಮಾಡಿದ್ದ 6 ಚಿತ್ರಗಳೂ ಸೂಪರ್ ಹಿಟ್ ಆಯ್ತು

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  ವಿಜಯ್ 65 ಕುರಿತು

  ವಿಜಯ್ 65 ಕುರಿತು

  ಸನ್ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ತಯಾರಾಗುತ್ತಿರುವ ವಿಜಯ್ 65ನೇ ಸಿನಿಮಾ ಜಾರ್ಜಿಯಾದಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಈಗ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು ಮುಂದಿನ ಶೂಟಿಂಗ್‌ಗೆ ಪ್ಲಾನ್ ಮಾಡುತ್ತಿದ್ದಾರೆ. 'ಕೋಲಮಾವು ಕೋಕಿಲಾ' ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.

  English summary
  Vijay 66 Film Update: Ilayathalapathy decided to drop movie with vamsi paidipally for sometime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X