ಅಜಿತ್ 'ತುನಿವು' ಮುಂದೆ ಸೋತ ವಿಜಯ್ 'ವಾರಿಸು' ಟ್ರೈಲರ್; ಬೀಸ್ಟ್ ಇಂದಿಗೂ ನಂಬರ್ 1!

Vijay Varisu trailer failed to beat Ajith Kumar Thunivu trailer views in 24 hours

ಈ ಬಾರಿಯ ಸಂಕ್ರಾಂತಿಗೆ ಕಾಲಿವುಡ್‌ನಲ್ಲಿ ಇಬ್ಬರು ಪ್ರಮುಖ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ. ದಳಪತಿ ವಿಜಯ್ ನಟನೆಯ 'ವಾರಿಸು' ಹಾಗೂ ಅಜಿತ್ ಕುಮಾರ್ ನಟನೆಯ 'ತುನಿವು' ಚಿತ್ರಗಳು ಒಂದೇ ದಿನ ( ಜನವರಿ 11 ) ಬಿಡುಗಡೆಯಾಗಲಿವೆ. ಸಂಕ್ರಾಂತಿಗೆ ಸಾಲು ಸಾಲು ರಜೆಗಳು ಇರುವ ಕಾರಣ ಈ ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಜಿದ್ದಾಜಿದ್ದಿ ಏರ್ಪಡಲಿದ್ದು, ಪೊಂಗಲ್ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಸಿನಿ ರಸಿಕರಲ್ಲಿ ಹೆಚ್ಚಾಗಿದೆ.

ಇನ್ನು ಎರಡೂ ಚಿತ್ರಗಳ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿವೆ. ಸತ್ಯ ಹೇಳಬೇಕೆಂದರೆ ಅಭಿಮಾನಿಗಳನ್ನು ಹೊರತುಪಡಿಸಿ ಸಾಮಾನ್ಯ ಸಿನಿ ರಸಿಕರು ಈ ಎರಡೂ ಚಿತ್ರಗಳ ಟ್ರೈಲರ್‌ಗಳೂ ಅಷ್ಟಕ್ಕಷ್ಟೆ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಹಾಗೂ ಎರಡರ ನಡುವೆ ಹೋಲಿಸಿದರೆ ವಾರಿಸು ಚಿತ್ರದ ಟ್ರೈಲರ್‌ಗಿಂತ ತುನಿವು ಚಿತ್ರದ ಟ್ರೈಲರ್ ಪರವಾಗಿಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಎರಡೂ ಚಿತ್ರಗಳು ಬೀಸ್ಟ್ ಚಿತ್ರದ ಟ್ರೈಲರ್ ಮೊದಲ 24 ಗಂಟೆಗಳಲ್ಲಿ ಕಂಡಿದ್ದ ವೀಕ್ಷಣೆಗಳನ್ನು ಹಿಂದಿಕ್ಕಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಎರಡೂ ಚಿತ್ರಗಳ ಟ್ರೈಲರ್‌ಗಳೂ ಸಹ ಈ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಮೊದಲಿಗೆ ಬಿಡುಗಡೆಗೊಂಡ ತುನಿವು ಟ್ರೈಲರ್ ಮೊದಲ 24 ಗಂಟೆಗಳಲ್ಲಿ 24.96 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಕ್ಷಿಣ ಭಾರತದ ಟ್ರೈಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು.

ಇತ್ತ ನಂತರ ತೀವ್ರ ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ವಾರಿಸು ಚಿತ್ರದ ಟ್ರೈಲರ್ ಅಗ್ರಸ್ಥಾನ ಪಡೆದುಕೊಳ್ಳಲಿದೆ ಎಂದೇ ಊಹಿಸಲಾಗಿತ್ತು. ಆದರೆ ವಾರಿಸು ಚಿತ್ರದ ಟ್ರೈಲರ್ 24 ಗಂಟೆಗಳಲ್ಲಿ 23.05 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಕ್ಷಿಣ ಭಾರತದ ಟ್ರೈಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

More from Filmibeat

English summary
Vijay Varisu trailer failed to beat Ajith Kumar Thunivu trailer views in 24 hours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X