Bussy Anand: ವಿಎಂಐ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಆಸ್ಪತ್ರೆಗೆ ದಾಖಲು, ಓಡೋಡಿ ಬಂದ ನಟ ದಳಪತಿ ವಿಜಯ್
ನಟ ದಳಪತಿ ವಿಜಯ್ ಅವರ ವಿಜಯ್ ಮಕ್ಕಳ್ ಇಯಕ್ಕಂ ಅವರ (ವಿಎಂಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಆರೋಗ್ಯದಲ್ಲಿ ಏರುಪೇರಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ವಿಜಯ್ ಅವರನ್ನು ಖುದ್ದು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರದ ಸಕ್ಸಸ್ ಮೀಟ್ ಚೆನ್ನೈನಲ್ಲಿ ನಡೆದು ಒಂದೆರಡು ದಿನಗಳಾಗಿವೆ. ಕಾರ್ಯಕ್ರಮದ ಕೆಲವು ದಿನಗಳ ನಂತರ, ಬಸ್ಸಿ ಆನಂದ್ ಆರೋಗ್ಯದಲ್ಲಿ ಏರುಪೇರಾಗಿದೆ. ವರದಿಯ ಪ್ರಕಾರ, ತೀವ್ರ ನಿಶ್ಯಕ್ತಿಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಳಪತಿ ವಿಜಯ್ ಆಸ್ಪತ್ರೆಗೆ ಹೋಗಿ ಬಸ್ಸಿ ಆನಂದ್ ಅವರನ್ನು ಭೇಟಿ ಮಾಡಿದ್ದಾರೆ.

ದಳಪತಿ ವಿಜಯ್ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಬಸ್ಸಿ ಆನಂದ್ ಅವರ ವಿಜಯ್ ಮಕ್ಕಳ್ ಇಯಕ್ಕಂ ಆ ಕೆಲಸದಲ್ಲಿ ತೊಡಗಿದೆ. ಬಸ್ಸಿ ಆನಂದ್ ಅವರ ವಿಶ್ವಾಸಾರ್ಹ ಸಹಾಯಕರಾಗಿದ್ದು, ಇದರಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಗಳಿಂದ ತಮಿಳುನಾಡಿನಾದ್ಯಂತ ಸಭೆಗಳನ್ನು ಆಯೋಜಿಸುತ್ತಿದ್ದಾರೆ.
'ಲಿಯೋ' ಚಿತ್ರದ ಸಕ್ಸಸ್ ಮೀಟ್ ಬಳಿಕ, ಬಸ್ಸಿ ಆನಂದ್ ತೀವ್ರ ಸುಸ್ತಾಗಿದ್ದರು ಹೀಗಾಗಿ ಚೆನ್ನೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ವರದಿಗಳ ಪ್ರಕಾರ, ಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವಿಜಯ್ ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿದ್ದರು.
ನಟ ದಳಪತಿ ವಿಜಯ್ ಅವರು ಇತ್ತೀಚೆಗೆ ಬಿಡುಗಡೆಯಾದ 'ಲಿಯೋ' ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ವಿಶ್ವದಾದ್ಯಂತ 600 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರ ಬಳಿಕ ವೆಂಕಟ್ ಪ್ರಭು ನಿರ್ದೇಶಿಸಲಿರುವ 'ತಲಪತಿ 68' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ 2024 ರಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಘೋಷಿಸುತ್ತಾರೆ. 2026 ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.


Click it and Unblock the Notifications











