ವಿಜಯ್ ತಂದೆ ಎಸ್. ಎ. ಚಂದ್ರಶೇಖರ್ ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ ಗೊತ್ತಾ?

ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶಿಸಿ ಗೆದ್ದಿದ್ದಾರೆ. ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಂಚಲನ ಸೃಷ್ಟಿಸಿ ತಮಿಳುನಾಡು ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ. ವಿಜಯ್ ತಂದೆ ಎಸ್. ಎ. ಚಂದ್ರಶೇಖರ್ ಖ್ಯಾತ ಫಿಲ್ಮ್ ಮೇಕರ್. ನಿರ್ದೇಶಕರಾಗಿ ನಿರ್ಮಾಪಕರಾಗಿ ಸಾಕಷ್ಟು ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಚಿತ್ರಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ.

ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸೇರಿ 70ಕ್ಕೂ ಚಿತ್ರಗಳನ್ನು ಎಸ್. ಎ. ಚಂದ್ರಶೇಖರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರಾಗಿದ್ದಾರೆ. 1973ರಲ್ಲಿ ಗಾಯಕಿ ಶೋಭಾ ಎಂಬುವವರನ್ನು ಅವರು ಮದುವೆ ಆಗಿದ್ದರು. ವಿಜಯ್ ಸೇರಿ ದಂಪತಿಗೆ ಇಬ್ಬರು ಮಕ್ಕಳು. ಇತ್ತೀಚಿನ ವರ್ಷಗಳಲ್ಲಿ ವಿಜಯ್ ಪೋಷಕರು ರಾಜಕೀರಂಗದತ್ತ ಮುಖ ಮಾಡಿದ್ದಾರೆ.

Vijay s Father S A Chandrasekhar s Kannada Film Journey The Director Behind Several Action Hits

ಕೆಲ ವರ್ಷಗಳಿಂದ ವಿಜಯ್ ಹಾಗೂ ಪೋಷಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇತ್ತೀಚೆಗೆ ಅದನ್ನೆಲ್ಲಾ ಮರೆತು ಒಂದಾಗಿದ್ದಾರೆ. ವಿಜಯ್ ಅಭಿಮಾನಿ ಸಂಘವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಎಸ್. ಎ. ಚಂದ್ರಶೇಖರ್ ದಂಪತಿ ಬಯಸಿದ್ದರು. ಅದಕ್ಕೆ ವಿಜಯ್ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವುದಕ್ಕೆ ಇಡೀ ಕುಟುಂಬ ಕುಣಿದು, ವಿಜಯ್ ಊದಿ ಸಂಭ್ರಮಿಸಿದೆ. ಅದಕ್ಕೆ ಸಂಬಂಧಿಸಿ ವಿಡಿಯೋ ವೈರಲ್ ಆಗ್ತಿದೆ.

1978ರಲ್ಲಿ 'ಅವಲ್ ಒರು ಪಚೈ ಕುಳಾಂಧೈ' ಸಿನಿಮಾ ಮೂಲಕ ಎಸ್. ಎ. ಚಂದ್ರಶೇಖರ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 1981ರಲ್ಲಿ 'ಸತ್ತಂ ಒರು ಇರುತ್ತರೈ' ಎಂಬ ಚಿತ್ರ ನಿರ್ದೇಶಿಸಿ ಸಕ್ಸಸ್ ಕಂಡಿದ್ದರು. ಭರ್ಜರಿ ಯಶಸ್ಸು ಸಾಧಿಸಿದ್ದ ಈ ಚಿತ್ರವನ್ನು 'ನ್ಯಾಯ ಎಲ್ಲಿದೆ' ಹೆಸರಿನಲ್ಲಿ ಕನ್ನಡಕ್ಕೆ ರೀಮೆಕ್ ಮಾಡಿದ್ದರು. ಶಂಕರ್ ನಾಗ್, ಆರತಿ ಚಿತ್ರದಲ್ಲಿ ನಟಿಸಿದ್ದರು. ಈ ಮೂಲಕ ಟಿವಿಕೆ ವಿಜಯ್ ತಂದೆ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.

1983ರಲ್ಲಿ ತಮಿಳಿನ 'ಮೂಂಡ್ರು ಮುಗಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಗೆದ್ದ ಬಳಿಕ ಕನ್ನಡದಲ್ಲಿ (ಗೆದ್ದ ಮಗ) ರೀಮೆಕ್ ಮಾಡಿದ್ದರು. ಬಳಿಕ 'ಗೆಲವು ನನ್ನದೇ' ಎನ್ನುವ ಮತ್ತೊಂದು ಕನ್ನಡ ಸಿನಿಮಾ ಕಟ್ಟಿಕೊಟ್ಟಿದ್ದರು. 'ಹಸಿದ ಹೆಬ್ಬುಲಿ' ಹಾಗೂ 'ಸಿಂಹ ಘರ್ಜನೆ' ಎಸ್. ಎ. ಚಂದ್ರಶೇಖರ್ ನಿರ್ದೇಶಿಸಿದ ಮತ್ತೆರಡು ಕನ್ನಡ ಚಿತ್ರಗಳು.

ತಂದೆ ಖ್ಯಾತ ನಿರ್ದೇಶಕರು, ನಿರ್ದೇಶಕರು ಆಗಿದ್ದರಿಂದ ವಿಜಯ್ ಚಿತ್ರರಂಗ ಪ್ರವೇಶ ಕಷ್ಟವಾಗಲಿಲ್ಲ. ಬಾಲನಟನಾಗಿದ್ದಾಗಲೇ ಬಣ್ಣ ಹಚ್ಚಲು ಆರಂಭಿಸಿದ್ದರು. ಬಳಿಕ ಹೀರೊ ಆಗಿದ್ದರು. 'ನಾಲೈಯ ತೀರ್ಪು' ವಿಜಯ್ ಲೀಡ್ ರೋಲ್‌ನಲ್ಲಿ ನಟಿಸಿದ ಮೊದಲ ಸಿನಿಮಾ. ಸ್ವತಃ ಎಸ್. ಎ. ಚಂದ್ರಶೇಖರ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು.

ಆರಂಭದಲ್ಲಿ ತಮ್ಮ ಲುಕ್ಸ್ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದರು. ನೆಪೊ ಕಿಡ್ ಎನ್ನುವ ಮೂದಲಿಕೆ ಎದುರಿಸಿದ್ದರು. ಮೊದ ಮೊದಲು ಲವರ್ ಬಾಯ್ ಆಗಿಯೇ ವಿಜಯ್ ಸಿನಿಮಾಗಳಲ್ಲಿ ವಿಜಯ್ ನಟಿಸುತ್ತಿದ್ದರು. 'ಗಿಲ್ಲಿ' ಚಿತ್ರ ಮಾಸ್ ಹೀರೊ ಆಗಿ ವಿಜಯ್‌ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದಾರೆ.

ತಮಿಳುನಾಡಿನಲ್ಲೇ ವಿಜಯ್ ಸಿನಿಮಾಗಳು 300 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ಹಾಗಾಗಿ ಅವರ ಸಂಭಾವನೆ ಹೆಚ್ಚಾಗುತ್ತಾ ಹೋಗಿತ್ತು. 'GOAT' ಚಿತ್ರಕ್ಕೆ ಹೆಚ್ಚು ಕಮ್ಮಿ 200 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. 'ಜನ ನಾಯಗನ್' ಚಿತ್ರಕ್ಕಾಗಿ 250 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.

Read more about: vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X