ವಿಜಯ್ ಜಾತಿ ಬಗ್ಗೆ ತಂದೆ ಚಂದ್ರಶೇಖರ್ ಹೇಳಿದ್ದು ಹೀಗೆ

By ಫಿಲ್ಮಿಬೀಟ್ ಡೆಸ್ಕ್

ತಮಿಳಿನ ಖ್ಯಾತ ನಟ ವಿಜಯ್‌ ಜಾತಿ ಹಾಗೂ ಧರ್ಮದ ಬಗ್ಗೆ ಆಗಾಗ್ಗೆ ಚರ್ಚೆಗಳು, ದ್ವೇಷಕಾರಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

2017ರಲ್ಲಿ ಬಿಡುಗಡೆ ಆದ 'ಮರ್ಸೆಲ್' ಸಿನಿಮಾ ವಿವಾದ ಎಬ್ಬಿಸಿದಾಗಂತೂ ವಿಜಯ್ ಧರ್ಮದ ಚರ್ಚೆ ಬಹು ಜೋರಾಗಿ ನಡೆಯಿತು. ತಮಿಳುನಾಡು ಬಿಜೆಪಿ ಪ್ರಮುಖ ಮುಖಂಡರೊಬ್ಬರು ವಿಜಯ್‌ರ ಚುನಾವಣಾ ಗುರುತಿನ ಚೀಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ವಿಜಯ್ ಒಬ್ಬ ಕ್ರಿಶ್ಚಿಯನ್' ಎಂದು ಹಾಗಾಗಿಯೇ ಹಿಂದುಪರ ಪಕ್ಷಗಳು, ವ್ಯಕ್ತಿಗಳ ಮೇಲೆ ಅವರಿಗೆ ದ್ವೇಷವೆಂಬುದನ್ನು ಸೂಚ್ಯವಾಗಿ ಹೇಳಿದ್ದರು. ಇದಕ್ಕೆ ಭಾರಿ ವಿರೋಧವೂ ವ್ಯಕ್ತವಾಗಿತ್ತು.

ಇದೀಗ ನಟ ವಿಜಯ್‌ರ ತಂದೆ ಎಸ್.ಎ.ಚಂದ್ರಶೇಖರ್, ವಿಜಯ್‌ರ ಧರ್ಮ ಮತ್ತು ಜಾತಿಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದ ತಮಿಳಿನ 'ಸಾಯಮ್‌' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿದ ಮಾತನಾಡಿರುವ ವಿಜಯ್ ತಂದೆ ಚಂದ್ರಶೇಖರ್, ''ವಿಜಯ್ ಶಾಲೆ ದಾಖಲಾತಿಗಳಲ್ಲಿ ಜಾತಿ ಮತ್ತು ಧರ್ಮದ ಕಾಲಂಗಳಲ್ಲಿ ತಮಿಳನ್ ಎಂದು ಬರೆಸಿದ್ದೆ. ಅದೇ ದಾಖಲೆಗಳು ವಿಜಯ್‌ ಶಿಕ್ಷಣ ಮುಗಿಯುವವರೆಗೂ ಇತ್ತು'' ಎಂದಿದ್ದಾರೆ. ಆ ಮೂಲಕ ವಿಜಯ್ ಜಾತಿ ಮತ್ತು ಧರ್ಮಾತೀತ ಆದರ್ಶವುಳ್ಳವರು ಎಂದು ಹೇಳಿದ್ದಾರೆ.

ಶಾಲೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು: ಚಂದ್ರಶೇಖರ್

ಶಾಲೆಯವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು: ಚಂದ್ರಶೇಖರ್

''ನಾನು ತಮಿಳನ್ ಎಂದು ಜಾತಿ ಮತ್ತು ಧರ್ಮದ ಕಾಲಂನಲ್ಲಿ ನಮೂದಿಸಿದಾಗ ಶಾಲೆಯವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ನಾನು ಅವರಿಗೆ ಮನದಟ್ಟು ಮಾಡಲು ಯುತ್ನಿಸಿದೆ. ಕೊನೆಗೆ ನೀವು ಇದನ್ನು ಒಪ್ಪಿಕೊಳ್ಳದೇ ಇದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ಮಾಡಿಸುತ್ತೇನೆ ಎಂದು ಹೆಸರಿಸಿದೆ ಆಗ ಶಾಲೆಯವರು ಒಪ್ಪಿಕೊಂಡು ವಿಜಯ್‌ ಅನ್ನು ಶಾಲೆಗೆ ದಾಖಲಿಸಿಕೊಂಡರು'' ಎಂದಿದ್ದಾರೆ ಚಂದ್ರಶೇಖರ್.

''ಶಾಲೆಗಳು ಮಕ್ಕಳ ಜಾತಿ ಧರ್ಮ ಕೇಳುವುದು ಬಿಡಬೇಕು''

''ಶಾಲೆಗಳು ಮಕ್ಕಳ ಜಾತಿ ಧರ್ಮ ಕೇಳುವುದು ಬಿಡಬೇಕು''

ಮುಂದುವರೆದು ಮಾತನಾಡಿರುವ ವಿಜಯ್ ತಂದೆ, ''ಶಾಲೆಗಳು ಮಕ್ಕಳ ಜಾತಿ, ಧರ್ಮವನ್ನು ಕೇಳುವುದನ್ನು ಬಿಡಬೇಕು. ಹಾಗೊಮ್ಮೆ ಶಾಲೆಗಳಲ್ಲಿ ಜಾತಿ, ಧರ್ಮವನ್ನು ಕೇಳುವುದು ಬಿಟ್ಟರೆ ಇಪ್ಪತ್ತು ವರ್ಷದಲ್ಲಿ ಸಂಪೂರ್ಣ ಜಾತಿ ವ್ಯವಸ್ಥೆಯೇ ನಾಶವಾಗಿ ಹೋಗುತ್ತದೆ'' ಎಂದಿದ್ದಾರೆ. ತಮಿಳಿನ 'ಸಾಯಮ್' ಸಿನಿಮಾವು ಶಾಲೆಗಳಲ್ಲಿ ಮಕ್ಕಳು ಜಾತಿ ಕಾರಣಕ್ಕೆ ಅನುಭವಿಸುವ ಮುಜುಗರಗಳನ್ನು, ಸಮಸ್ಯೆಗಳನ್ನು ಒಳಗೊಂಡಿದೆ.

ವಿಜಯ್-ಚಂದ್ರಶೇಖರ್ ಸಂಬಂಧ ಅಷ್ಟೇನು ಚೆನ್ನಾಗಿಲ್ಲ

ವಿಜಯ್-ಚಂದ್ರಶೇಖರ್ ಸಂಬಂಧ ಅಷ್ಟೇನು ಚೆನ್ನಾಗಿಲ್ಲ

ನಟ ವಿಜಯ್‌ ಹಾಗೂ ತಂದೆ ಚಂದ್ರಶೇಖರ್ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ಈ ಹಿಂದೆ ವಿಜಯ್‌ ಹೆಸರಲ್ಲಿ ಚಂದ್ರಶೇಖರ್ ರಾಜಕೀಯ ಪಕ್ಷವೊಂದನ್ನು ಘೋಷಿಸಿದ್ದರು. ತಂದೆಯ ನಡೆಯಿಂದ ಸಿಟ್ಟಾದ ವಿಜಯ್, ಪಕ್ಷಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿಕೆ ಬಿಡುಗಡೆ ಮಾಡಿದರು. ಅದಕ್ಕೂ ಮುನ್ನವೂ ಅಪ್ಪ-ಮಗನ ನಡುವೆ ಕೆಲವು ಗೊಂದಲಗಳು ಎದ್ದಿದ್ದವು. ''ನನ್ನ ಮತ್ತು ಮಗನನ್ನು ಬೇರೆ ಮಾಡಲು ಕೆಲವರು ಯತ್ನಿಸತ್ತಿದ್ದಾರೆ'' ಎಂದು ಚಂದ್ರಶೇಖರ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು.

'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ. ನಟ ವಿಜಯ್‌ ಪ್ರಸ್ತುತ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ. ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೊ, ವಿಟಿವಿ ಗಣೇಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್. ಸಂಗೀತ ನೀಡುತ್ತಿರುವುದು ಅನಿರುದ್ಧ ರವಿಚಂದ್ರನ್.

More from Filmibeat

English summary
Actor Vijay's father Chandrashekhar talked about Vijay's caste and religion. He said I wrote Thamizhan in caste and religion column of Vijay's school admission form.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X