Jailer Vs Leo: "ಜೈಲರ್' ದಾಖಲೆ 'ಲಿಯೋ' ಮುರಿದರೆ ನನ್ನ ಮೀಸೆ ಬೋಳಿಸಿಕೊಳ್ತೀನಿ": ತಮಿಳು ನಟ ಓಪನ್ ಚಾಲೆಂಜ್

ಕಾಲಿವುಡ್‌ವುಡ್‌ನಲ್ಲಿ ಸೂಪರ್ ಸ್ಟಾರ್ ಯಾರು ಎನ್ನುವ ಚರ್ಚೆ ಇನ್ನು ಕಮ್ಮಿ ಆಗಿಲ್ಲ. 'ಜೈಲರ್' ಸಿನಿಮಾ ಮೂಲಕ ರಜನಿಕಾಂತ್ ಬಾಕ್ಸಾಫೀಸ್‌ನಲ್ಲಿ ತಮ್ಮ ತಾಕತ್ತು ಏನು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಸಿನಿಮಾ 600 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಜೋಡಿಯ 'ಲಿಯೋ' ರಿಲೀಸ್‌ಗೆ ರೆಡಿಯಾಗ್ತಿದೆ.

ಸಂಭಾವನೆ ಹಾಗೂ ಸಿನಿಮಾಗಳ ಕಲೆಕ್ಷನ್ ವಿಚಾರದಲ್ಲಿ ದಳಪತಿ ಈಗ ಕಾಲಿವುಡ್‌ನ ನಂಬರ್ ವನ್ ನಟ ಎನ್ನುವ ಚರ್ಚೆ ಶುರುವಾಗಿದೆ. ಮುಂದಿನ ಸೂಪರ್ ಸ್ಟಾರ್ ವಿಜಯ್ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇದನ್ನು ಒಪ್ಪುವುದಕ್ಕೆ ಯಾರು ಸಿದ್ಧರಿಲ್ಲ. ಅವತ್ತಿಗೂ ಇವತ್ತಿಗೂ ಯಾವತ್ತಿಗೂ ರಜನಿಕಾಂತ್ ಒಬ್ಬರೇ ಸೂಪರ್ ಸ್ಟಾರ್ ಎನ್ನುವ ಕೂಗು ಹೆಚ್ಚಾಗಿದೆ. ಚಿತ್ರರಂಗದ ಮಂದಿ ಕೂಡ ಇದೇ ಮಾತು ಹೇಳುತ್ತಿದ್ದಾರೆ.

Vijays Leo wont Beat Rajinikanths Jailer at the Boxoffice says Meesai Rajendran

'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲಿ ರಜನಿಕಾಂತ್ ಮಾತನಾಡುತ್ತ ಸೂಪರ್ ಸ್ಟಾರ್ ಬಿರುದಿನ ಬಗ್ಗೆ ಮಾತನಾಡಿದ್ದರು. ಗರುಡ ಹಾಗೂ ಕಾಗೆಯ ಕಥೆ ಹೇಳಿದ್ದರು. ಇದನ್ನು ಕೇಳಿದ ಕೆಲವರು ತಲೈವಾ ಪರೋಕ್ಷವಾಗಿ ದಳಪತಿ ವಿಜಯ್‌ಗೆ ಟಾಂಗ್ ಕೊಟ್ಟಿದ್ದಾರೆ ಎಂದಿದ್ದರು. ಆ ಬಳಿಕ ಈ ವಿಚಾರ ಮತ್ತಷ್ಟು ಚರ್ಚೆ ಆಗಿತ್ತು. ಅದರ ಬೆನ್ನಲ್ಲೇ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಇದನ್ನು ನೋಡಿ ರಜನಿಕಾಂತ್ ನಿಜವಾದ ಸೂಪರ್ ಸ್ಟಾರ್ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

'ಜೈಲರ್' ಸಿನಿಮಾ ಬಾಕ್ಸಾಫೀಸ್ ಗಳಿಕೆಯನ್ನು ವಿಜಯ್ 'ಲಿಯೋ' ಸಿನಿಮಾ ಮುರಿಯುತ್ತಾರೆ ಎನ್ನುವ ಹೊಸ ಚರ್ಚೆ ಶುರುವಾಗಿದೆ. 'ಮಾಸ್ಟರ್' ಬಳಿಕ ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಈ ಚಿತ್ರಕ್ಕಾಗಿ ಒಮ್ಮೆ ಒಂದಾಗಿದ್ದಾರೆ. 'ಕೈದಿ', 'ಮಾಸ್ಟರ್', 'ವಿಕ್ರಂ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಜೊತೆ ಮತ್ತೆ ವಿಜಯ್ ಕೈಜೋಡಿಸಿರುವುದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆಯೂ ಬಿಸಿಬಿಸಿ ಚರ್ಚೆ ಆಗುತ್ತಿದೆ.

ಜೈಲರ್‌- ಲಿಯೋ ಬಾಕ್ಸಾಫೀಸ್ ಫೈಟ್ ಬಗ್ಗೆ ತಮಿಳು ಪೋಷಕ ನಟ ಮೀಸೆ ರಾಜೇಂದ್ರನ್ ಪ್ರತಿಕ್ರಿಯಿಸಿದ್ದಾರೆ. "ಒಂದು ವೇಳೆ 'ಲಿಯೋ' ಸಿನಿಮಾ 'ಜೈಲರ್' ಬಾಕ್ಸಾಫೀಸ್ ಕಳೆಕ್ಷನ್ ಮೀರಿಸಿದರೆ ನಾನು ನನ್ನ ಮೀಸೆ ಬೋಳಿಸುತ್ತೇನೆ" ಎಂದಿದ್ದಾರೆ. ಮೀಸೆ ರಾಜೇಂದ್ರನ್ ಕೆಲ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಗಿರಿಜಾ ಮೀಸೆಯಿಂದಲೇ ಸದಾ ಗಮನ ಸೆಳೆಯುತ್ತಿರುತ್ತಾರೆ. ರಾಜೇಂದ್ರನ್ ಮಾತನಾಡಿ ಯಾವತ್ತಿಗೂ ರಜನಿಕಾಂತ್ ಒಬ್ರೇ ಸೂಪರ್ ಸ್ಟಾರ್. ಅವರ ಸಿನಿಮಾಗಳನ್ನು ನೋಡಿ ಬೆಳೆದ ಮಗು ವಿಜಯ್ ಸರ್. ಹಾಗಾಗಿ ಅವರಿಬ್ಬರ ನಡುವೆ ಹೋಲಿಕೆ ಮಾಡಬೇಡಿ" ಎಂದಿದ್ದಾರೆ.

"ಆನೆಗೂ, ಇಲಿಗೂ ಹೋಲಿಕೆ ಮಾಡಬೇಡಿ. ಆನೆ ಯಾಕೆ ಇಲಿ ಜೊತೆ ಪೈಪೋಟಿ ಮಾಡಬೇಕು. ರಜನಿಕಾಂತ್ ಹೇಳಿದ್ದಾರಲ್ಲ, ಕಾಗೆ, ಗರುಡ ಕಥೆ. ಗರುಡ ಮೇಲೆ ಹೋಗ್ತಾ ಇರುತ್ತದೆ. ಇಲಿಯನ್ನು ಕಚ್ಚಿ ತಿಂದುಬಿಡುತ್ತೆ. 'ಜೈಲರ್' ಕಲೆಕ್ಷನ್ ಯಾವ ರೀತಿ ಇದೆ ನೋಡ್ತಿದ್ದೀರಲ್ಲ. 'ಲಿಯೋ' ಸಿನಿಮಾ 'ಜೈಲರ್' ದಾಖಲೆ ಮುರಿದರೆ ನಾನು ಮೀಸೆ ತೆಗೆದುಬಿಡ್ತೀನಿ. 100% ಆಗಲ್ಲ. ಈಗಾಗಲೇ 'ಜೈಲರ್' 600 ಕೋಟಿ ರೂ. ಕಲೆಕ್ಷನ್ ಮಾಡಿದೆ. 'ಲಿಯೋ' ಗಳಿಕೆ 300, 400 ಕೋಟಿ ರೂ. ಕೂಡ ದಾಟಲ್ಲ ಎಂದಿದ್ದಾರೆ. ಒಂದು ಲಕ್ಷ ಕಟ್ತೀನಿ, ಬೇಕಿದ್ರೆ ಬರೆದುಕೊಡ್ತೀನಿ. ಸಾಧ್ಯವೇ ಇಲ್ಲ" ಎಂದಿದ್ದಾರೆ.

Vijays Leo wont Beat Rajinikanths Jailer at the Boxoffice says Meesai Rajendran

ಅಕ್ಟೋಬರ್ 19ಕ್ಕೆ 'ಲಿಯೋ' ಸಿನಿಮಾ ಬಿಡುಗಡೆ ಆಗಲಿದೆ. ಸೆವೆನ್ ಸ್ಟ್ರೀನ್ ಸ್ಟುಡಿಯೋ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದ್ದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಲಿದೆ. ತ್ರಿಷಾ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.

More from Filmibeat

English summary
Leo wont surpass Jailer collection at the Boxoffice, says Meesai Rajendran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X