10 ವರ್ಷಗಳ ಹಿಂದೆ 'ನಾನು ಸಿಎಂ ಆಗ್ಬೇಕು' ಎಂದಿದ್ದ ತ್ರಿಷಾ; ಆ ಮಹದಾಸೆ ಈಡೇರಿಸುತ್ತಾರಾ ವಿಜಯ್?
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಚಮತ್ಕಾರ ಮಾಡಿದೆ. 108 ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಗೆದ್ದು ದಾಖಲೆ ಬರೆದಿದೆ. ಬಹುಮತ ಸಿಗದೇ ಇದ್ದರೂ ವಿಜಯ್ ತಮಿಳುನಾಡಿನ ಮುಂದಿನ ಸಿಎಂ ಆಗುವುದು ಖಚಿತ ಎನ್ನುವ ಚರ್ಚೆ ನಡೀತಿದೆ. ಈ ನಡುವೆ ನಟಿ ತ್ರಿಷಾ ಹೆಸರು ಟ್ರೆಂಡ್ ಆಗ್ತಿದೆ.
ನಟ ವಿಜಯ್ ಹಾಗೂ ನಟಿ ವಿಜಯ್ ನಡುವೆ ಆತ್ಮೀಯ ಒಡನಾಟವಿದೆ. ಇಬ್ಬರೂ ಮದುವೆ ಆಗುತ್ತಾರೆ ಅಂತೆಲ್ಲಾ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ವಿಜಯ್ ಹಾಗೂ ಸಂಗೀತಾ ದಂಪತಿ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ತ್ರಿಷಾ ಕಾರಣ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆ ವಿಜಯ್ -ತ್ರಿಷಾ ಜೊತೆ ಸೇರಿ ಒಂದು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ವಿಜಯ್ ಹಾದಿಯಲ್ಲಿ ತ್ರಿಷಾ ಕೂಡ ತಮಿಳುನಾಡು ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಎಂಜಿಆರ್ ಜೊತೆ ಜಯಲಲಿತಾ ರಾಜಕೀಯರಂಗಕ್ಕೆ ಬಂದಿದ್ದರು. ಅದೇ ರೀತಿ ವಿಜಯ್ ಜೊತೆ ತ್ರಿಷಾ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳಿಂದ ಚರ್ಚೆ ನಡೀತಿದೆ. ತ್ರಿಷಾ ಇಂದು(ಮೇ 4) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಳ್ಳಂಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಜಯ್ ಗೆಲುವಿಗಾಗಿ ಪಾರ್ಥಿಸಿ ತ್ರಿಷಾ ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಅಭಿಮಾನಿ ವಲಯದಲ್ಲಿ ಚರ್ಚೆ ನಡೀತಿದೆ. "ಇವತ್ತು ರಿಸಲ್ಟ್ ನಮ್ಮದೇ" ಎಂದು ದೇವಾಲಯದ ಆವರಣದಲ್ಲಿ ಕೆಲವರು ಹೇಳಿದ್ದಕ್ಕೆ ತ್ರಿಷಾ ನಸುನಕ್ಕಿದ್ದಾರೆ.
10 ವರ್ಷಗಳ ಹಿಂದೆಯೇ ಸಂದರ್ಶನವೊಂದರಲ್ಲಿ ತ್ರಿಷಾ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರು. ಆಗ ಅದು ಕೆಲವರಿಗೆ ತಮಾಷೆ ಎನ್ನಿಸಿತ್ತು. ಆದರೆ ಆಕೆಯ ಕೋರಿಕೆ ನಿಜವಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅತ್ತ ಟಿವಿಕೆ ಪಕ್ಷ ಯಶಸ್ಸು ಸಾಧಿಸುತ್ತಿದ್ದಂತೆ ತ್ರಿಷಾ ಹೆಸರು ಟ್ರೆಂಡ್ ಆಗ್ತಿದೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ ತ್ರಿಷಾ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬಹುದು. ಯಾವುದಾದರೂ ಒಂದು ಖಾತೆ ಕೊಡಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ತ್ರಿಷಾ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ಚರ್ಚೆ ಆಗಿತ್ತು. ಅದೆಲ್ಲಾ ಸುಳ್ಳು ಎನ್ನುವಂತೆ ಪರೋಕ್ಷವಾಗಿ ಆಕೆ ಒಂದು ಪೋಸ್ಟ್ ಮಾಡಿದ್ದರು. ಹಾಗಾಗಿ ಸದ್ಯಕ್ಕೆ ಚೆನ್ನೈ ಚೆಲುವೆ ರಾಜಕೀಯರಂಗ ಪ್ರವೇಶಿಸುವುದು ಅನುಮಾನ ಎನ್ನಲಾಗ್ತಿದೆ.
22 ವರ್ಷಗಳ ಹಿಂದೆ 'ಗಿಲ್ಲಿ' ಎಂಬ ಚಿತ್ರದಲ್ಲಿ ವಿಜಯ್ ಹಾಗೂ ತ್ರಿಷಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ 'ತಿರುಪಾಚ್ಚಿ', 'ಕುರುವಿ' ಎಂಬ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಬಳಿಕ 14 ವರ್ಷ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. 3 ವರ್ಷಗಳ ಹಿಂದೆ 'ಲಿಯೋ' ಎಂಬ ಚಿತ್ರದಲ್ಲಿ ಮತ್ತೆ ಜೊತೆಯಾಗಿ ಬಣ್ಣ ಹಚ್ಚಿದ್ದರು.
ಟಿವಿಕೆ ಪಕ್ಷದ ಗೆಲುವಿಗೆ ವಿಜಯ್ ಕುಟುಂಬಸ್ಥರು ಖುಷಿಯಾಗಿದ್ದಾರೆ. ಮನೆಯಲ್ಲಿ ವಿಜಲ್ ಊದಿ ಸಂಭ್ರಮಿಸಿದ್ದಾರೆ. ಇನ್ನು ತಿರುಪತಿಯಿಂದ ನಟಿ ತ್ರಿಷಾ ನೇರವಾಗಿ ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೀಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.


Click it and Unblock the Notifications