PS- 2 Trailer: ನಂದಿನಿ ಪ್ರತೀಕಾರ.. ಮರಳಿ ಬಂದ 'ಪೊನ್ನಿಯಿನ್ ಸೆಲ್ವನ್'.. ಮುಂದುವರೆದ ಚೋಳ-ಪಾಂಡ್ಯರ ಸಮರ

ಮಣಿರತ್ನಂ ನಿರ್ದೇಶನದ ಐತಿಹಾಸಿಕ ದೃಶ್ಯಕಾವ್ಯ 'ಪೊನ್ನಿಯಿನ್ ಸೆಲ್ವನ್' ಮೊದಲ ಭಾಗ ಕಳೆದ ವರ್ಷ ಭರ್ಜರಿ ಸಕ್ಸಸ್ ಕಂಡಿತ್ತು. ಇದೀಗ ಸಿನಿಮಾ ಸೀಕ್ವೆಲ್‌ ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ಮತ್ತು ಆಡಿಯೋ ಲಾಂಚ್ ಮಾಡಿ ಪ್ರಚಾರ ಶುರು ಮಾಡಲಾಗಿದೆ. ಉಳಗ ನಾಯಕಗನ್ ಕಮಲ್ ಹಾಸನ್ ಮುಖ್ಯ ಅತಿಥಿಯಾಗಿ ಆಗಮಿಸಿ 'ಪೊನ್ನಿಯಿನ್ ಸೆಲ್ವನ್'- 2 ಟ್ರೈಲರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಚಿಯಾನ್ ವಿಕ್ರಂ, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ತ್ರಿಷಾ, ಪ್ರಕಾಶ್‌ ರೈ, ಕಿಶೋರ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಗಮನ ಸೆಳೀತಿದೆ. 'ಪೊನ್ನಿಯಿನ್ ಸೆಲ್ವನ್'- 2 ಟ್ರೈಲರ್ ಬಹಳ ಕುತೂಹಲಭರಿತವಾಗಿ ವಿಷ್ಯುವಲ್ ವಂಡರ್ ಎನ್ನುವಂತಿದೆ. ಚೋಳ ಸಿಂಹಾಸನಕ್ಕಾಗಿ ಕಾದಾಟ, ಕುತಂತ್ರ, ಏಟು ಎದಿರೇಟು, ಟ್ವಿಸ್ಟ್‌ & ಟರ್ನ್‌ಗಳು, ಯುದ್ಧ, ಬೆನ್ನಿಗೆ ಚೂರಿ ಹೀಗೆ ಎಲ್ಲವನ್ನು ಹದವಾಗಿ ಬೆರಸಿ ಸಿನಿಮಾ ಕಟ್ಟಿಕೊಟ್ಟಿರೋದು ಗೊತ್ತಾಗುತ್ತಿದೆ.

Vikram Aishwarya Rai Bachchan Jayam Ravi starrer Ponniyin Selvan- 2/ PS-2 trailer Relased

ಚಿತ್ರದ ಮೊದಲ ಭಾಗ ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದಲೇ 2ನೇ ಭಾಗದ ಕಥೆ ಶುರುವಾಗುತ್ತದೆ. ಸಮುದ್ರದಲ್ಲಿ ನಡೆಯುವ ಯುದ್ಧದಿಂದ ಟ್ರೈಲರ್ ತೆರೆದುಕೊಳ್ಳುತ್ತದೆ. ವಾರಸ್ದಾರ ಅರುಲ್‌ಮುಳಿ ವರ್ಮನ್(ಜಯಂ ರವಿ) ಸತ್ತು ಹೋಗಿದ್ದಾನೆ ಎಂದು ಭಾವಿಸಿ ರಾಜ್ಯವನ್ನು 2 ಭಾಗ ಮಾಡಬೇಕು ಎನ್ನುವ ಆಲೋಚನೆಯಲ್ಲಿರುತ್ತಾರೆ. ಚೋಳ ರಾಜ ಅರುಲ್‌ಮುಳಿ ವರ್ಮನ್‌ನ ಕೊಂದಿದ್ದೇವೆ ಎಂದುಕೊಂಡ ಪಾಂಡ್ಯರು ಆದಿತ್ಯ ಕರಿಕಾಲನ್‌ನ ಕೂಡ ಸಾಯಿಸಬೇಕು ಎಂದುಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಏನೆಲ್ಲಾ ಆಗುತ್ತದೆ ಅನ್ನೋದೇ 2ನೇ ಭಾಗದ ಕಥೆ ಅನ್ನೋದು ಗೊತ್ತಾಗುತ್ತದೆ.

ಅರುಲ್‌ಮುಳಿ ಸತ್ತು ಹೋದ ಎಂದುಕೊಂಡು ನಂದಿನಿ ತನ್ನ ಸಂಗಡಿಗರ ಜೊತೆ ಸೇರಿ ಚೋಳ ಸಾಮ್ರಾಜ್ಯ ವಶಪಡಿಸಿಕೊಳ್ಳಲು ತಂತ್ರ ರೂಪಿಸುತ್ತಾಳೆ. ತನ್ನ ಸಹೋದರ ಸತ್ತು ಹೋದ ಎನ್ನುವ ಸುದ್ದಿ ಕೇಳಿ ಕರಿಕಾಲನ್(ವಿಕ್ರಂ) ತನ್ನ ಸೈನ್ಯದೊಂದಿಗೆ ಪಾಂಡ್ಯ ಸಾಮ್ರಾಜ್ಯದ ಮೇಲೆ ಯುದ್ಧಕ್ಕೆ ಹೊರಡುತ್ತಾನೆ. ಪೊನ್ನಿಯಿನ್ ಸೆಲ್ವನ್ ಸತ್ತು ಹೋದನೆಂದು ಪೆರಿಯಾ ಸಹೋದರರು(ಶರತ್‌ ಕುಮಾರ್, ಪ್ರಭು,) ಮಧುರಾಂತಕ(ರೆಹಮಾನ್), ನಂದಿನಿ ಜೊತೆ ಸೇರಿ ತಂತ್ರ ರೂಪಿಸಿ ತಾನು ರಾಜನಾಗಬೇಕು ಹಾಗೂ ಚೋಳ ಸಾಮ್ರಾಜ್ಯವನ್ನು ಎರಡು ಭಾಗ ಮಾಡಬೇಕು ಎನ್ನುವ ವಿಚಾರಗಳನ್ನು ತೋರಿಸಲಾಗಿದೆ.

'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಐಶ್ವರ್ಯ ರೈ 2 ಡಬಲ್ ರೋಲ್‌ನಲ್ಲಿ ಮಿಂಚಿದ್ದಾರೆ. ನಂದಿನಿ ಹಾಗೂ ಮಂದಾಕಿನಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಮುದುಕಿ ಮಂದಾಕಿನಿಯ ಸಣ್ಣ ಝಲಕ್ ಇದೆ. ಪೊನ್ನಿಯಿನ್ ಸೆಲ್ವನ್‌ನ ಕಾಪಾಡಲು ವಲ್ಲವ ರಾಯನ್(ಕಾರ್ತಿ) ಹೇಗೆ ಸಹಾಯ ಮಾಡುತ್ತಾನೆ ಅನ್ನೋದನ್ನು 2ನೇ ಭಾಗದಲ್ಲಿ ನೋಡಬಹುದು. ಇನ್ನು ನಂದಿನಿ ತಂತ್ರಗಳಿಗೆ ತಂದೆ ಸುಂದರ ಚೋಳ(ಪ್ರಕಾಶ್‌ ರಾಜ್) ಜೊತೆ ಸೇರಿ ಕುಂದವೈ(ತ್ರಿಷಾ) ಏನು ಮಾಡಿದಳು ಅನ್ನೋದು ಕೂಡ ಕುತೂಹಲ ಮೂಡಿಸುವಂತಿದೆ. ಇನ್ನು ಟ್ರೈಲರ್ ಕೊನೆಯಲ್ಲಿ ನಂದಿನಿ ತನ್ನ ಮಾಜಿ ಪ್ರಿಯಕರ ಕರಿಕಾಲನ್‌ನನ್ನು ಕೊಲ್ಲಲು ಮುಂದಾಗೋದು ಸೀಟಿನ ತುದಿಗೆ ತಂದು ಕೂರಿಸುವಂತಿದೆ.

Vikram Aishwarya Rai Bachchan Jayam Ravi starrer Ponniyin Selvan- 2/ PS-2 trailer Relased

ಚಿತ್ರದ ಮೊದಲ ಭಾಗಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರದ ಪಾತ್ರಗಳ ಹೆಸರುಗಳೇ ನೆನಪಿನಲ್ಲಿ ಉಳಿಯಲಿಲ್ಲ, ಕಥೆ ತುಂಬಾ ಸ್ಲೋ ಆಗಿ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ತಮಿಳುನಾಡಿನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದರೂ ಕೂಡ ಬೇರೆ ಕಡೆ ಅಷ್ಟಾಗಿ ಸದ್ದು ಮಾಡಲಿಲ್ಲ. 2ನೇ ಭಾಗ ಅದನ್ನು ಮೀರಿ ಸಕ್ಸಸ್ ಆಗುತ್ತಾ? ಬಾಕ್ಸಾಫೀಸ್ ಧೂಳೆಬ್ಬಿಸುತ್ತಾ? ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇನ್ನು ಮೊದಲ ಭಾಗಕ್ಕಿಂತ 2ನೇ ಭಾಗದಲ್ಲಿ ಹೆಚ್ಚು ಯುದ್ಧಸನ್ನಿವೇಶಗಳು ಇರುವಂತೆ ಕಾಣುತ್ತಿದೆ. ಇನ್ನು 'ಪೊನ್ನಿಯಿನ್ ಸೆಲ್ವನ್'- 2 ಟ್ರೈಲರ್‌ ವಿಷ್ಯುವಲಿ ವಾಹ್ ಎನ್ನುವಂತಿದೆ.

ಎ. ಆರ್ ರಹಮಾನ್ ಬಿಜಿಎಂ ಟ್ರೈಲರ್‌ಗೆ ಬಲ ತುಂಬಿದೆ. ರವಿವರ್ಮನ್ ಸಿನಿಮಾಟೋಗ್ರಫಿ ಸೊಗಸಾಗಿದೆ. ಗ್ರಾಫಿಕ್ಸ್ ವರ್ಕ್‌ ಕೂಡ ಚೆನ್ನಾಗಿದ್ದು, ಮೊದಲ ನೋಟದಲ್ಲೇ ಟ್ರೈಲರ್ ಸೂಪರ್ ಎನ್ನುವಂತಿದೆ. ಚೆನ್ನೈನ ಜವಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬಹಳ ಅದ್ಧೂರಿಯಾಗಿ 'ಪೊನ್ನಿಯಿನ್ ಸೆಲ್ವನ್'- 2 ಟ್ರೈಲರ್ ಮತ್ತು ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಸಾವಿರಾರು ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿ ಆದರು.

ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಮಣಿರತ್ನಂ 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ದಶಕಗಳಿಂದ ಹಲವರು ಈ ಕಾದಂಬರಿಯನ್ನು ಸಿನಿಮಾ ಮಾಡಲು ಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಕೊನೆಗೂ ಮಣಿರತ್ನಂ ಮತ್ತವರ ತಂಡ ಮಾಡಿ ತೋರಿಸಿದೆ. ಚಿತ್ರದ ಮೊದಲ ಭಾಗ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಎರಡೂ ಭಾಗದ ಸಿನಿಮಾ ಚಿತ್ರೀಕರಣವನ್ನು ಒಮ್ಮೆ ಮಾಡಿ ಮುಗಿಸಲಾಗಿತ್ತು. ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಮದ್ರಾಸ್ ಟಾಕೀಸ್ ಬ್ಯಾನರ್‌ನಲ್ಲಿ ಮಣಿರತ್ನಂ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಏಪ್ರಿಲ್ 28ಕ್ಕೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್' ಸೀಕ್ವೆಲ್ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. 5 ಭಾಷೆಗಳಲ್ಲಿ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯದ 'ಕಿರುನಗೆ' ಕನ್ನಡ ಸಾಂಗ್ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ.

More from Filmibeat

English summary
Vikram, Aishwarya Rai Bachchan, Jayam Ravi starrer Ponniyin Selvan- 2 trailer Relased. Ponniyin Selvan 2 will hit the theatres on April 28. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X