For Quick Alerts
  ALLOW NOTIFICATIONS  
  For Daily Alerts

  'ಮತ್ತೆ ಹೈಸ್ಕೂಲ್‌ಗೆ ಬಂದಂತಿದೆ': ಚಿತ್ರೀಕರಣ ಪ್ರಾರಂಭಿಸಿದ ಕಮಲ್

  |

  ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸುತ್ತಿರುವ ವಿಕ್ರಂ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಶುಕ್ರವಾರ (ಜುಲೈ 16) ಚಿತ್ರದ ಪೂಜೆ ನೆರವೇರಿಸಿ ಮೊದಲ ದಿನ ಶೂಟಿಂಗ್‌ಗೆ ಚಾಲನೆ ನೀಡಿದ್ದಾರೆ.

  ಕೊರೊನಾದಿಂದ ಬ್ರೇಕ್‌ನಲ್ಲಿದ್ದ ಕಮಲ್ ಹಾಸನ್, ಬಹಳ ದಿನಗಳ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ''ಮತ್ತೆ ಹೈಸ್ಕೂಲ್‌ಗೆ ಬಂದಂತೆ ಅನುಭವ'' ಎಂದು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  'ವಿಕ್ರಂ' ಫಸ್ಟ್ ಲುಕ್: ಒಂದು ಪೋಸ್ಟರ್, ಮೂರು ಸ್ಟಾರ್ ನಟರು'ವಿಕ್ರಂ' ಫಸ್ಟ್ ಲುಕ್: ಒಂದು ಪೋಸ್ಟರ್, ಮೂರು ಸ್ಟಾರ್ ನಟರು

  ''ವಿಕ್ರಂ ಮೊದಲ ದಿನದ ಚಿತ್ರೀಕರಣ ಆರಂಭ. ಮತ್ತೆ ಹೈಸ್ಕೂಲ್‌ಗೆ ಬಂದ ಅನುಭವ. ನನ್ನ 50 ವರ್ಷದ ವೃತ್ತಿ ಜೀವನದಲ್ಲಿ ನಟನೆಯಿಂದ ಇಷ್ಟು ದೂರ ಉಳಿದಿದ್ದು ಇದೇ ಮೊದಲ. ರಾಜ್‌ ಕಮಲ್ ಫಿಲಂಸ್ ಅಡಿಯಲ್ಲಿ ಕೆಲಸ ಮಾಡಲಿರುವ ನನ್ನ ಒಡನಾಡಿಗಳಿಗೆ ಸ್ವಾಗತ ಬಯಸುತ್ತೇನೆ. ವಿಜಯ್ ಸೇತುಪತಿ, ಲೋಕೇಶ್ ಕನಕರಾಜ್ ಹಾಗೂ ಫಾಹದ್ ಫಾಸಿಲ್‌ಗೆ ವಿಶೇಷ ಸ್ವಾಗತ ಕೋರುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

  ಈ ಹಿಂದೆ ಕಮಲ್ ಹಾಸನ್ ಅವರ ಹುಟ್ಟುಹಬ್ಬದಂದು 'ವಿಕ್ರಂ' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಕಮಲ್ ನಟಿಸುತ್ತಿರುವ 232ನೇ ಚಿತ್ರ ಇದಾಗಿದ್ದು, 'ಮಾಸ್ಟರ್' ಚಿತ್ರದ ನಂತರೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡ್ತಿದ್ದಾರೆ.

  ರಾಜ್ ಕಮಲ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಖುದ್ದು ಕಮಲ್ ಹಾಸನ್ ಬಂಡವಾಳ ಹಾಕುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇನ್ನು ಮಲಯಾಳಂ ಇಂಡಸ್ಟ್ರಿಯ ಖ್ಯಾತ ನಟ ನರೈನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  Comedy Khiladigalu contestants talk about judges | ಜಗ್ಗೇಶ್, ರಕ್ಷಿತಾ, ಯೋಗರಾಜ್ ಭಟ್ | Filmibeat Kannada

  ಈ ಚಿತ್ರ ಹೊರತುಪಡಿಸಿ ಶಂಕರ್ ಜೊತೆ ಇಂಡಿಯನ್ 2 ಸಿನಿಮಾ ಮಾಡಬೇಕಿದೆ. ಆದರೆ ನಿರ್ಮಾಪಕ-ನಿರ್ದೇಶಕರ ಕಾರಣದಿಂದ ಈ ಪ್ರಾಜೆಕ್ಟ್ ನಿಂತಿದೆ. ಇನ್ನು ಮಲಯಾಳಂ ಹಿಟ್ ಚಿತ್ರ 'ದೃಶ್ಯಂ-2' ತಮಿಳಿನಲ್ಲಿ ರಿಮೇಕ್ ಆಗಲಿದ್ದು, ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.

  English summary
  Kamal Hassan and Vijay Sethupathi, Fahadh Faasil starrer Vikram movie shotting begins.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X