ಪ್ರೈವೇಟ್ ಜೆಟ್‌ನಲ್ಲಿ ತ್ರಿಶಾ ಜೊತೆ ವಿಜಯ್ ಸುತ್ತಾಟ, ಪತ್ನಿಗೆ ವಿಚ್ಛೇದನ ಕೊಡ್ತಾರಾ ದಳಪತಿ ?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ. ಉದಾಹರಣೆಗೆ ಗ್ಲಾಮರ್ ಗೊಂಬೆ ತ್ರಿಶಾ ಮತ್ತು ಇಳಯ ದಳಪತಿ ವಿಜಯ್.
ಹೌದು, ತ್ರಿಶಾ ಮತ್ತು ಇಳಯ ದಳಪತಿ ನಡುವೆ ಅಕ್ರಮ ಸಂಬಂಧ ಇದೆ ಎಂಬ ಮಾತು ಇಂದು, ನಿನ್ನೆಯದ್ದಲ್ಲ. ವರ್ಷಾನುವರ್ಷಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಎಷ್ಟರ ಮಟ್ಟಿಗೆ ಅಂದರೆ ತ್ರಿಶಾ ಅವರಿಗೆ ಮನ ಸೋತ ವಿಜಯ್ ತಮ್ಮ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೂಡ ಚೆನ್ನೈನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ.

ಹೀಗಿರುವಾಗ ವಿಜಯ್ ಈಗ ತ್ರಿಶಾ ಜೊತೆ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಗೆ ತಮ್ಮ ಪತ್ನಿ ಸಂಗೀತಾ ಜೊತೆ ತೆರಳದೇ ತ್ರಿಶಾ ಜೊತೆ ಪ್ರತೈಕವಾಗಿ ತೆರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್ ಪಾಯಿಂಟ್ ಬಳಿ ಇಬ್ಬರು ಇರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಬ್ಬರು ಜೊತೆಯಾಗಿ ಪ್ರಯಾಣ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಂತೆ ಇರುವ ಫ್ಲೈಟ್ ಟಿಕೆಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೀಗೆ ಹರಿದಾಡುತ್ತಿರುವ ಫೋಟೊ ಮತ್ತು ಫ್ಲೈಟ್ ಟಿಕೆಟ್‌ನ ಸತ್ಯಾಸತ್ಯತೆಯನ್ನು ಫಿಲ್ಮಿ ಬೀಟ್ ಕನ್ನಡ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯ ಇಲ್ಲವಾದರೂ ಸದ್ಯಕ್ಕೆ ಈ ಫ್ಲೈಟ್ ಟಿಕೆಟ್ ಹಲವು ಪ್ರಶ್ನೆಗಳನ್ನು ಅಭಿಮಾನಿಗಳ ಮನದಲ್ಲಿ ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ವಿಜಯ್ ಮತ್ತು ಸಂಗೀತಾ ದಾಂಪತ್ಯದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಗಂಡ ಹೆಂಡತಿ ನಡುವೆ ನಿಜಕ್ಕೂ ತ್ರಿಶಾ ಬಂದಿದ್ದಾರಾ ಅನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.
ಅಂದ್ಹಾಗೇ ಈ ವರ್ಷ ವಿಜಯ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಕೂಡ ತ್ರಿಶಾ, ವಿಜಯ್ ಜೊತೆ ಕಾಣಿಸಿಕೊಂಡಿದ್ದರು. ಮಿರರ್ ಸೆಲ್ಫಿ ಕ್ಲಿಕಿಸಿಕೊಂಡಿದ್ದರು. ಈ ಫೋಟೊ ಕೂಡ ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿತ್ತು. ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಿ ವಿಜಯ್ ತ್ರಿಶಾ ಅವರ ಜೊತೆ ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿತ್ತು. ಈ ಕುರಿತು ಗಾಯಕಿ ಸುಚಿತ್ರಾ ಬಾಂಬ್ ಸಿಡಿಸಿದ್ದರು. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ. ವಿಜಯ್ ತಮ್ಮ ಪತ್ನಿಯಿಂದ ದೂರು ಉಳಿದು ವರ್ಷಗಳೇ ಕಳೆದಿವೆ. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಹಾಗೇ ಎಂಜಿಆರ್ ಹಾಗೂ ಜಯಲಲಿತಾರಂತೆಯೇ ತ್ರಿಶಾ ಜೊತೆ ಬಾಂಧವ್ಯ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಇನ್ನುಳಿದಂತೆ ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಶಾ ಹತ್ತು ವರ್ಷದ ಹಿಂದೆ ಮದುವೆಯಾಗಬೇಕಿತ್ತು. ಇಬ್ಬರ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆದರೆ ಆ ನಂತರ ಈ ಸಂಬಂಧ ಮುರಿದು ಬಿತ್ತು. ಆ ನಂತರ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಒಟ್ನಲ್ಲಿ ಸದ್ಯ ವಿಜಯ್ ಮತ್ತು ತ್ರಿಶಾ ಖಾಸಗಿ ವಿಮಾನದಲ್ಲಿ ಜೊತೆಯಾಗಿ ಪ್ರಯಾಣ ಮಾಡಿರುವ ಫೋಟೊ ಮತ್ತು ಫ್ಲೈಟ್ ಟಿಕೆಟ್ ವೈರಲ್ ಆಗಿವೆ. ಈ ಮೂಲಕ ವಿಜಯ್ ಮತ್ತು ತ್ರಿಶಾ ಸಂಬಂಧ ಮತ್ತೊಮ್ಮೆ ಚರ್ಚೆಯಲ್ಲಿದೆ.


Click it and Unblock the Notifications











