ಇದೇ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ ನಟಿ ವರಲಕ್ಷ್ಮಿ
ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' , ಅರ್ಜುನ್ ಸರ್ಜಾ ನಟನೆಯ 'ವಿಸ್ಮಯ', ಚಿರಂಜೀವಿ ಸರ್ಜಾ ಅವರ 'ರಣಂ' ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳ ಮೂಲಕ ಕರ್ನಾಟಕ ವೀಕ್ಷಕರ ಗಮನ ಸೆಳೆದಿರುವ ವರಲಕ್ಷ್ಮಿ ತಮಿಳಿನ ಹಿರಿಯ ಸ್ಟಾರ್ ಹೀರೋ ಶರತ್ ಕುಮಾರ್ ಪುತ್ರಿ. ಸದ್ಯ ವರಲಕ್ಷ್ಮಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕಿಯಾಗಿ ಮಿಂಚದಿದ್ದರೂ, ನೆಗೆಟಿವ್ ಪಾತ್ರ, ಪೋಷಕ ಪಾತ್ರಗಳ ಮೂಲಕ ಸ್ಟಾರ್ ನಾಯಕಿಯರಷ್ಟೇ ಸ್ಥಾನಮಾನ ಗಳಿಸಿದ್ದಾರೆ.
ವರಲಕ್ಷ್ಮಿ ಸಧ್ಯ ಗೋಪಿಚಂದ್ ಮಲಿನೇನಿ ಅವರ, ಬಾಲಕೃಷ್ಣ ಅವರು ನಾಯಕನಾಗಿ ನಟಿಸಿರುವ ಮುಂದಿನ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ವರಲಕ್ಷ್ಮಿ ತಮ್ಮ ಗ್ಲಾಮರ್ ಫೋಟೋಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್ ಗೆ ಹೋಗಿದ್ದ ವರಲಕ್ಷ್ಮಿ ಅವರು ಅಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಯಾಕೆಂದರೇ ಸಿನಿಮಾದಲ್ಲಾಗಲೀ ನಿಜ ಜೀವನದಲ್ಲಾಗಲಿ ವರಲಕ್ಷ್ಮಿ ಇಷ್ಟರ ಮಟ್ಟಿಗೆ ಗ್ಲಾಮರಸ್ ಆಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲಾ. ಇದೀಗ ದಿಢೀರ್ ಅಂತ ಬಿಕಿನಿ ತೊಟ್ಟು ಪೋಸ್ ಕೊಡುವ ಮೂಲಕ ನೋಡುಗರಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ವರಲಕ್ಷ್ಮಿ ಹಂಚಿಕೊಂಡಿರುವ ಕೆಲವು ಮಾಲ್ಟೀವ್ಸ್ ಫೋಟೋಗಳು ಇಲ್ಲಿವೆ ನೋಡಿ.
ನಟಿ ವರಲಕ್ಷ್ಮಿ ಅವರ ಈ ಬಿಕಿನಿ ಫೋಟೊಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 90ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸಾಕಷ್ಟು ನೆಟ್ಟಿಗರು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಕೆಲವರು ಹಾಟ್ ಲುಕ್ಕಿಗೆ ಬೋಲ್ಡ್ ಆದರೆ ಮತ್ತೆ ಕೆಲವರು ಇಷ್ಟುದಿನ ಚೆನ್ನಾಗಿದ್ದ ನಿಮಗೆ ಈಗ ಏನಾಗಿದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ವರಲಕ್ಷ್ಮಿ ಮಾಲ್ಡೀವ್ಸ್ ಬೀಚ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ 'ಯಶೋದಾ'ದ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಹೊಸ ಪ್ಯಾನ್-ಇಂಡಿಯಾ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಚಿತ್ರವನ್ನು ನಿರ್ದೇಶಕ ಹರಿ ಮತ್ತು ಹರೀಶ್ ನಿರ್ದೇಶಿಸಿದ್ದಾರೆ. ಈಗ, ಇತ್ತೀಚಿನ ವರದಿಯ ಪ್ರಕಾರ, ಸಮಂತಾ ಅಭಿನಯದ ಯಶೋದಾ ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವರಲಕ್ಷ್ಮಿ ಶರತ್ಕುಮಾರ್ ಕೊನೆಯ ಬಾರಿಗೆ ತಮಿಳಿನಲ್ಲಿ 'ಚೇಸಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಸಮಂತಾ ಅವರ 'ಯಶೋದಾ' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ವರಲಕ್ಷ್ಮಿ ಈಗಾಗಲೇ ಚಿತ್ರದ ಸೆಟ್ಗೆ ಸೇರಿಕೊಂಡಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಅವರು ಸಮಂತಾ ರುತ್ ಪ್ರಭು ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಮಾರ್ಚ್ 2022 ರ ಅಂತ್ಯದ ವೇಳೆಗೆ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಪೂರ್ಣಗೊಳಿಸಲು ಚಿತ್ರತಂಡ ಚಿಂತಿಸಿದೆ.
ಯಶೋದಾ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇತ್ತೀಚೆಗೆ ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಚಲನಚಿತ್ರ ನಿರ್ಮಾಪಕರು "ನಾವು ಮುಂದಿನ ವರ್ಷ ಮಾರ್ಚ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದೇವೆ" ಎಂದು ಹೇಳಿದ್ದರು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ವರಲಕ್ಷ್ಮಿ ಸದ್ಯ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.


Click it and Unblock the Notifications











