'KGF' ಪ್ರೀಕ್ವೆಲ್ 'ತಂಗಲಾನ್'.. ಸಿನಿಮಾ ಆಸ್ಕರ್ ರೇಸ್‌ಗೆ ಹೋಗೋದು ಗ್ಯಾರೆಂಟಿ

ಚಿಯಾನ್ ವಿಕ್ರಮ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ತಂಗಲಾನ್' ಮೇಕಿಂಗ್ ಹಂತದಲ್ಲೇ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಕಬಾಲಿ' ಸಿನಿಮಾ ಕಟ್ಟಿಕೊಟ್ಟಿದ್ದ ಪಾ. ರಂಜಿತ್ ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. KGF ಹಿನ್ನಲೆಯ ಚಿತ್ರವನ್ನು ಆಸ್ಕರ್‌ಗೆ ತೆಗೆದುಕೊಂಡು ಹೋಗಲು ಮುಂದಾಗಿದೆ ಚಿತ್ರತಂಡ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್ ಪ್ಲ್ಯಾನ್ ನಡೀತಿದೆ.

'KGF' ಚಿನ್ನದ ಗಣಿ ಸೃಷ್ಟಿಯಾಗಿದ್ದು ಹೇಗೆ? ಅಲ್ಲಿ ಮೊದಲಿಗೆ ಚಿನ್ನದ ನಿಕ್ಷೇಪ ಕಂಡು ಹಿಡಿದಿದ್ದು, ಮುಂದೆ ಸಾಕಷ್ಟು ಕಾರ್ಮಿಕರನ್ನು ಬಳಸಿ ಬ್ರಿಟೀಷರು ಚಿನ್ನ ಅಗೆದು ತೆಗೆದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಕೋಲಾರದ ಚಿನ್ನದ ಗಣಿ ಕಾರ್ಮಿಕರ ಸುತ್ತಾ 'ತಂಗಲಾನ್' ಸಿನಿಮಾ ನಿರ್ಮಾಣವಾಗುತ್ತಿದೆ. ಆ ಕಾರ್ಮಿಕರಲ್ಲಿ ಒಬ್ಬನಾಗಿ ವಿಕ್ರಮ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿ ಹುಬ್ಬೇರಿಸಿದೆ. ಇನ್ನು ವಿಕ್ರಮ್ ಡೆಡಿಕೇಷನ್ ನೋಡಿದವರು ದಂಗಾಗಿದ್ದಾರೆ.

Virams Thangalaan will grab an Oscar assures Producer Dhananjayan

ಪಾರ್ವತಿ ತಿರುವೊತ್ತು, ಮಾಳವಿಕಾ ಮೋಹನನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪಶುಪತಿ, ಹರಿಕೃಷ್ಣನ್ ಅನ್ಬುದುರೈ, ಪ್ರೀತಿ ಕರಣ್, ಮುತ್ತುಕುಮಾರ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಎ. ಕಿಶೋರ್ ಸಿನಿಮಾಟೋಗ್ರಫಿ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ 'ತಂಗಲಾನ್' ಚಿತ್ರಕ್ಕಿದೆ.

ಆಸ್ಕರ್ ರೇಸ್‌ಗೆ 'ತಂಗಲಾನ್'

ಮೊದಲಿನಿಂದಲೂ 'ತಂಗಲಾನ್' ಚಿತ್ರವನ್ನು ಆಸ್ಕರ್‌ ರೇಸ್‌ಗೆ ಕೊಂಡೊಯ್ಯುವ ಬಗ್ಗೆ ಚಿತ್ರತಂಡ ಮಾತನಾಡುತ್ತಿದೆ. ಈ ಹಿಂದೆ ಬೆಂಗಳೂರಿಗೆ ಬಂದಿದ್ದ ವಿಕ್ರಮ್ ಅಂದುಕೊಂಡ ರೀತಿಯಲ್ಲೇ 'ತಂಗಲಾನ್' ತೆರೆಗೆ ತಂದರೆ ಆಸ್ಕರ್ ಗ್ಯಾರೆಂಟಿ ಎಂದಿದ್ದರು. ಇದೇ ಮಾತನ್ನು ತಮಿಳು ಸಿನಿಮಾ ನಿರ್ಮಾಪಕ ಧನಂಜಯನ್ ಪುನರುಚ್ಚರಿಸಿದ್ದಾರೆ. ವಿದೇಶದ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ 'ತಂಗಲಾನ್' ಸಿನಿಮಾ ಪ್ರದರ್ಶನ ಮಾಡಿ ಆಸ್ಕರ್ ರೇಸ್‌ಗೆ ಕೊಂಡೊಯ್ಯುವ ಪ್ರಯತ್ನ ನಡೀತಿದೆ ಎಂದಿದ್ದಾರೆ.

Virams Thangalaan will grab an Oscar assures Producer Dhananjayan

ಇದು ಕನ್ನಡದ 'KGF' ಪ್ರೀಕ್ವೆಲ್

ಈಗಾಗಲೇ 'KGF' ಹಿನ್ನಲೆಯಲ್ಲಿ ಕನ್ನಡದಲ್ಲಿ ಸರಣಿ ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿದೆ. KGF ಗಣಿ ಕಾರ್ಮಿಕರ ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು ಪ್ರಶಾಂತ್ ನೀಲ್ ಕಟ್ಟಿಕೊಟ್ಟು ಗೆದ್ದಿದ್ದರು. ಆದರೆ 'ತಂಗಲಾನ್' ಇದಕ್ಕಿಂತಲೂ ವಿಭಿನ್ನ ಸಿನಿಮಾ ಎಂದು ಧನಂಜಯನ್ ಹೇಳಿದ್ದಾರೆ. KGF ಗಣಿ ಕೆಲಸ ಹೇಗೆ ಶುರುವಾಯಿತು? ಬ್ರಿಟೀಷರು ಕಾರ್ಮಿಕರನ್ನು ಬಳಸಿಕೊಂಡು ಹೇಗೆ ಚಿನ್ನ ತೆಗೆದರು? ನಂತರ ಆ ಕಾರ್ಮಿಕರು ಮರೆತುಬಿಟ್ಟರು. 1870ರ ಕಾಲಘಟ್ಟದ ಕಥೆಯಿದು. ಒಂದರ್ಥದಲ್ಲಿ ಯಶ್‌ 'KGF' ಪ್ರೀಕ್ವೆಲ್ ಎನ್ನಬಹುದು. ಆ ಕಥೆಯನ್ನು 'ತಂಗಲಾನ್' ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದೇವೆ ಎಂದಿದ್ದಾರೆ.

ವಿಕ್ರಮ್ ಡಿಡಿಕೇಷನ್‌ಗೆ ಸಲಾಂ

ಯಾವುದೇ ಪಾತ್ರ ಆದರೂ ಲೀಲಾಜಾಲವಾಗಿ ನಟಿಸುವ ನಟ ವಿಕ್ರಮ್. ಇನ್ನು ಗೆಟಪ್‌ಗಳ ವಿಚಾರದಲ್ಲೂ ಎಲ್ಲದ್ದಲ್ಲೂ ಸಿದ್ಧ ಎನ್ನುತ್ತಾರೆ. ಮಾಸ್, ರಗಡ್ ಲುಕ್‌ನಲ್ಲಿ ವಿಕ್ರಮ್ ಅಬ್ಬರಿಸಿದ್ದಾರೆ. ತುಂಡು ಬಟ್ಟೆ ಉಟ್ಟು ಇಡೀ ಸಿನಿಮಾ ವಿಕ್ರಮ್ ನಟಿಸಿದ್ದಾರೆ. "ಚಿತ್ರಕ್ಕಾಗಿ ಗಡ್ಡ ಬಿಟ್ಟು ಅದೇ ಗೆಟಪ್‌ನ ಹಲವು ದಿನಗಳಿಂದ ಅವರು ಮೇಂಟೇನ್ ಮಾಡ್ತಿದ್ದಾರೆ. ಈ ಸಿನಿಮಾ ಮುಗಿಯುವವರೆಗೂ ಬೇರೆ ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ಸಬ್ಜೆಕ್ಟ್ ಬಗ್ಗೆ ಅವರು ಬಹಳ ಕಾನ್ಪಿಡೆಂಟ್ ಆಗಿದ್ದಾರೆ. ಅವರಿಂದಲೂ ಈ ಸಿನಿಮಾ ಇಷ್ಟು ಚೆನ್ನಾಗಿ ಮೂಡಿಬರ್ತಿದೆ.

2D ಹಾಗೂ 3Dಯಲ್ಲಿ 'ತಂಗಲಾನ್'

ಕೋಲಾರದ KGF ಗಣಿ, ಹೊಗೆನೇಕಲ್, ಮಧುರೆ ಸೇರಿದಂತೆ ಸಾಕಷ್ಟು ಲೊಕೇಶನ್‌ಗಳಲ್ಲಿ 'ತಂಗಲಾನ್' ಚಿತ್ರೀಕರಣ ನಡೆದಿದೆ. 2D ಹಾಗೂ 3Dಯಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಯಾವುದಕ್ಕೂ ರಾಜಿಯಾಗದೇ ಸ್ಟುಡಿಯೋ ಗ್ರೀನ್ ಸಂಸ್ಥೆ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಇನ್ನೊಂದು 20 ದಿನದಲ್ಲಿ ಚಿತ್ರೀಕರಣ ಮುಗಿಯಲಿದ್ದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 'ತಂಗಲಾನ್' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

More from Filmibeat

English summary
Viram's Thangalaan will grab an Oscar assures Producer Dhananjayan. Pa Ranjith Directed film is going to be released for Sankranti. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X