ಆಯುರ್ವೇದ ಔಷಧದಿಂದ ವಾರದಲ್ಲೇ ಕೊರೊನಾದಿಂದ ಗುಣಮುಖವಾದ ನಟ
ತಮಿಳಿನ ಖ್ಯಾತ ನಟ ವಿಶಾಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಗಾಳಿಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
Recommended Video
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ವಿಶಾಲ್, ತಮಗೆ ಹಾಗೂ ತಮ್ಮ ತಂದೆಯವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ನಿಜ ಆದರೆ ನಾವೀಗ ಗುಣಮುಖರಾಗಿದ್ದೇವೆ ಎಂದು ಎಲ್ಲಾ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ನಟ ವಿಶಾಲ್ ಮತ್ತು ತಂದೆ ಜಿ.ಕೆ.ರೆಡ್ಡಿ ಇಬ್ಬರಿಗೆ ಮಾತ್ರವೇ ಅಲ್ಲದೆ ವಿಶಾಲ್ ಅವರ ಮ್ಯಾನೇಜರ್‌ಗೆ ಸಹ ಕೊರೊನಾ ಪಾಸಿಟಿವ್ ಆಗಿತ್ತಂತೆ. ವಿಶಾಲ್‌ಗೆ ವಿಪರೀತ ಜ್ವರ, ಕೆಮ್ಮು, ನೆಗಡಿಗಳು ಕಾಣಿಸಿಕೊಂಡಿದ್ದವಂತೆ.

ವಾರದ ಹಿಂದೆಯೇ ಕೊರೊನಾ ಬಂದಿತ್ತು
ಒಂದು ವಾರದ ಹಿಂದೆಯೇ ವಿಶಾಲ್ ಮತ್ತು ತಂದೆಗೆ ಕೊರೊನಾ ಆಗಿದೆ ಆದರೆ ಅವರು ಆಸ್ಪತ್ರೆಗೆ ದಾಖಲಾಗಿಲ್ಲ. ಬದಲಿಗೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಇದ್ದು ಕೊರೊನಾದಿಂದ ಗುಣಮುಖಹೊಂದಿದ್ದಾರೆ. ಅವರ ಮ್ಯಾನೇಜರ್ ಸಹ ಆಸ್ಪತ್ರೆಗೆ ದಾಖಲಾಗಿರಲಿಲ್ಲವಂತೆ.

ಆಯುರ್ವೇದ ಔಷಧ ತೆಗೆದುಕೊಂಡ ನಟ
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದಿರುವ ನಟ ವಿಶಾಲ್, ನಾನು ಮತ್ತು ತಂದೆ ಹಾಗೂ ನಮ್ಮ ಮ್ಯಾನೇಜರ್‌ಗೆ ಪಾಸಿಟಿವ್ ಆಗಿತ್ತು. ನಾವೆಲ್ಲರೂ ಆಯುರ್ವೇದ ಔಷಧಗಳನ್ನು ತೆಗೆದುಕೊಂಡೆವು. ಕೇವಲ ಒಂದೇ ವಾರದಲ್ಲಿ ನಾವು ಮೂವರು ಗುಣಮುಖರಾದೆವು ಎಂದು ವಿಶಾಲ್ ಬರೆದಿದ್ದಾರೆ. ನಟ ವಿಶಾಲ್ ಅವರ ತಂದೆ ಜಿ.ಕೆ.ರೆಡ್ಡಿ ಹಾಗೂ ಮ್ಯಾನೇಜರ್ ಪ್ರಸ್ತುತ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ಐಟಿ ಇಲಾಖೆ ದೂರು ದಾಖಲಿಸಿತ್ತು
ನಟ ವಿಶಾಲ್ ಮೇಲೆ ಇತ್ತೀಚೆಗೆ ಐಟಿ ಇಲಾಖೆಯು ದೂರು ದಾಖಲಿಸಿತ್ತು. ವಿಶಾಲ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯು ಲಕ್ಷಾಂತರ ರೂಪಾಯಿ ಟಿಡಿಎಸ್ ಹಣವನ್ನು ಪಾವತಿ ಮಾಡಿಲ್ಲವೆಂದು ದೂರು ದಾಖಲಾಗಿತ್ತು.

ಮಾಜಿ ನೌಕರೆಯ ಮೇಲೆ ವಿಶಾಲ್ ದೂರು
ವಿಶಾಲ್ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ಟಿಡಿಎಸ್ ಹಣವನ್ನು ವಂಚಿಸಿದ್ದಾಳೆ ಎಂದು ವಿಶಾಲ್ ಅವರ ಪ್ರೊಡಕ್ಷನ್ ಸಂಸ್ಥೆಯಿಂದ ದೂರು ದಾಖಲಾಯಿತು. ಇದಕ್ಕೆ ಪ್ರತಿಯಾಗಿ ವಿಶಾಲ್ ಮೇಲೆ ಆ ಮಹಿಳೆ ನಾನಾ ಆರೋಪಗಳನ್ನು ಸಹ ಮಾಡಿದರು.


Click it and Unblock the Notifications











