ವಿಶಾಲ್ ಭಾವಿ ಪತ್ನಿ ಧನ್ಸಿಕಾ ಹಿನ್ನೆಲೆ.. ಇಬ್ಬರ ವಯಸ್ಸಿನ ಅಂತರ.. ಆಕೆಯ ಕನ್ನಡ ಚಿತ್ರಗಳು

ತಮಿಳು ನಟ ವಿಶಾಲ್ ದಿಢೀರನೆ ಮದುವೆ ದಿನಾಂಕ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ನಟಿ ಸಾಯಿ ಧನ್ಸಿಕಾ ಅವರನ್ನು ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಇತ್ತೀಚೆಗೆ ನಡೆದ 'ಯೋಗಿ ಡ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ತಮ್ಮ ಮದುವೆ, ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪ್ರೀತಿಸಿ ಇದೀಗ ಮದುವೆ ಆಗಲು ನಿರ್ಧರಿಸಿದ್ದಾರೆ. ಮದುವೆಗೆ ಎರಡೂ ಕುಟುಂಬಗಳು ಒಪ್ಪಿವೆ. ಆಗಸ್ಟ್ 29ರಂದು ನಟ ವಿಶಾಲ್ ಹುಟ್ಟುಹಬ್ಬ. ಅದೇ ದಿನ ಮದುವೆ ಆಗಲು ಸಿದ್ಧತೆ ನಡೀತಿದೆ. ತಮಿಳುನಾಡಿನ ತಂಜಾವೂರು ಮೂಲದ ಧನ್ಸಿಕಾ ಒಂದಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ತೆಲುಗು ಹಾಗೂ ಎರಡು ಕನ್ನಡ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.

Vishal and Sai Dhanshika Wedding Date What is the age gap between the actor and the actress

ಸುದ್ದಿಗೋಷ್ಠಿಯಲ್ಲಿ ತಮ್ಮಿಬ್ಬರ ಪ್ರೀತಿ, ಮದುವೆ ಬಗ್ಗೆ ವಿಶಾಲ್ ಹಾಗೂ ಧನ್ಸಿಕಾ ಮಾತನಾಡಿದ್ದಾರೆ. ಬಹಳ ವರ್ಷಗಳಿಂದ ವಿಶಾಲ್ ಮದುವೆ ಬಗ್ಗೆ ಚರ್ಚೆ ನಡೀತಿತ್ತು. ಈ ಹಿಂದೆ ನಟಿಯರಾದ ವರಲಕ್ಷ್ಮಿ ಶರತ್‌ಕುಮಾರ್, ಅಭಿನಯ ಜೊತೆಗೆ ಹೆಸರು ತಳಕು ಹಾಕಿಕೊಂಡಿತ್ತು. ಆದರೆ ಅದೆಲ್ಲ ಸುಳ್ಳಾಗಿತ್ತು. ಬಳಿಕ ಹೈದ್ರಾಬಾದ್ ಮೂಲದ ಅನಿಶಾ ಅಲ್ಲಾ ರೆಡ್ಡಿ ಎಂಬಾಕೆ ಜೊತೆ ಮದುವೆ ನಿಶ್ಚಯವಾಗಿ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಅದು ಮುರಿದು ಬಿದ್ದಿತ್ತು.

ವಿಶಾಲ್ ವಯಸ್ಸು 45 ದಾಟಿದ್ರು ಮದುವೆ ಆಗಿರಲಿಲ್ಲ. ಪದೇ ಪದೆ ಮದುವೆ ಬಗ್ಗೆ ಮಾತುಗಳು ಕೇಳಿಬಂದರೂ ನಿಜವಾಗಿರಲಿಲ್ಲ. ಕಳೆದೆರಡು ದಿನಗಳಿಂದ ಧನ್ಸಿಕಾ ಹಾಗೂ ವಿಶಾಲ್ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಹಾಗಾಗಿ ಇನ್ನು ಮುಚ್ಚಿ ಇಡಲು ಏನು ಇಲ್ಲ, ಹೌದು ನಾವಿಬ್ಬರು ಪ್ರೀತಿಸುತ್ತಿದ್ದೇವೆ, ಆಗಸ್ಟ್ 29ಕ್ಕೆ ನಮ್ಮ ಮದುವೆ ಎಂದು ಜೋಡಿ ಘೋಷಿಸಿದೆ.

ನಟ ವಿಶಾಲ್ ವಯಸ್ಸು 47 ವರ್ಷ ಹಾಗೂ ಧನ್ಸಿಕಾ ವಯಸ್ಸಿ 35 ವರ್ಷ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರ ಇದೆ. ಇದೀಗ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ವಿಶಾಲ್ ಸದಾ ಬೆಂಬಲಕ್ಕೆ ನಿಲ್ಲುತ್ತಿದ್ದ ಗುಣ ನನಗೆ ಇಷ್ಟವಾಯಿತು, ಅವರು ಯಾವಾಗಲೂ ನಗುತ್ತಿರಬೇಕು ಎಂದು ಧನ್ಸಿಕಾ ಹೇಳಿದ್ದಾರೆ.

2006ರಲ್ಲಿ ಬಂದಿದ್ದ ತಮಿಳಿನ 'ಮನಾಥೋಡು ಮಝೈಕಳಂ' ಚಿತ್ರದಲ್ಲಿ ಧನ್ಸಿಕಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಸಿಗಲಿಲ್ಲ. 2009ರಲ್ಲಿ ಬಂದಿದ್ದ 'ಕೆಂಪ' ಎಂಬ ಕನ್ನಡ ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದರು. ನಟ ಸಂತೋಷ್ ಜೋಡಿಯಾಗಿ ಮಿಂಚಿದ್ದರು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು.

'ಪೆರಣ್ಮೈ', 'ಮಂಜಾ ವೆಲು', 'ಆರವನ್', 'ಪರದೇಸಿ', 'ಕಬಾಲಿ', 'ಸೋಲೊ', 'ಇರಟ್ಟು', 'ಲಾಭಂ' ಧನ್ಸಿಕಾ ನಟಿಸಿರುವ ಕೆಲ ತಮಿಳು ಸಿನಿಮಾಗಳು. 'ಕಬಾಲಿ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಪಾತ್ರದಲ್ಲಿ ನಟಿ ಧನ್ಸಿಕಾ ನಟಿಸಿದ್ದು ವಿಶೇಷ. ಪಾ. ರಂಜಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಕಳೆದ ವರ್ಷ ತೆರೆಗೆ ಬಂದಿದ್ದ 'ದಕ್ಷಿಣ' ಎಂಬ ಚಿತ್ರದಲ್ಲಿ ಧನ್ಸಿಕಾ ಕೊನೆಯದಾಗಿ ನಟಿಸಿದ್ದರು. ಸದ್ಯ ಆಕೆಯ 'ಯೋಗಿ ಡ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆದಿದೆ. ಇನ್ನು ವಿಶಾಲ್ ಹಾಗೂ ಧನ್ಸಿಕಾ ಮದುವೆ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆಪ್ತರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ಧಾರೆ. ಅದ್ಧೂರಿಯಾಗಿಯೇ ವಿಶಾಲ್- ಧನ್ಸಿಕಾ ಮದುವೆ ಆಗಲು ತೀರ್ಮಾನಿಸಿದ್ದಾರೆ. 'ತುಪ್ಪರಿವಾಲನ್'-2 ಚಿತ್ರವನ್ನು ವಿಶಾಲ್ ನಿರ್ದೇಶಿಸಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಅವರು ಬಳಲಿದ್ದರು.

More from Filmibeat

English summary
Who is Sai Dhanshika? What is the age gap between her and Vishal? Has she acted in any Kannada films?
Read more about: vishal kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X