ತಮಿಳು ನಟ ವಿಶಾಲ್‌ಗೆ ಮದ್ರಾಸ್ ಹೈಕೋರ್ಟ್ ಬಿಗ್ ಶಾಕ್: ಕೂಡಲೇ 15 ಕೋಟಿ ರೂ. ಪಾವತಿಸಲು ಆದೇಶ
ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದಕ್ಕೆ ತಮಿಳು ನಟ ವಿಶಾಲ್‌ಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿದೆ. 15 ಕೋಟಿ ರೂ. ಹಣವನ್ನು ಶಾಶ್ವತ ಡಿಪಾಸಿಟ್ ಆಗಿ 3 ವಾರಗಳಲ್ಲಿ ಪಾವತಿಸಬೇಕೆಂಡು ಆದೇಶ ನೀಡಿದೆ. ತಪ್ಪಿದ್ದಲ್ಲಿ ವಿಶಾಲ್ ಫ್ಯಾಕ್ಟರಿ ಸಂಸ್ಥೆಯ ಸಿನಿಮಾಗಳನ್ನು ಥಿಯೇಟರ್, ಓಟಿಟಿಯಲ್ಲಿ ಪ್ರದರ್ಶಿಸದಂತೆ ನಿಷೇಧ ಹೇರಲಾಗಿದೆ.
ಖ್ಯಾತ ನಿರ್ಮಾಪಕ, ಫೈನಾನ್ಷಿಯರ್ ಅನ್ಬುಚೆಳಿಯನ್ ಬಳಿ ವಿಶಾಲ್ ತನ್ನ ಸಿನಿಮಾ ನಿರ್ಮಾಣ ಸಂಸ್ಥೆಗೆ ವಿಶಾಲ್ ಫ್ಯಾಕ್ಟರಿಗಾಗಿ 21.29 ಕೋಟಿ ಸಾಲ ಪಡೆದಿದ್ದರು. ಈ ಸಾಲವನ್ನು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಫೈನಾನ್ಷಿಯರ್‌ಗೆ ವಾಪಸ್ ನೀಡಿತ್ತು. ಹಾಗಾಗಿ ವಿಶಾಲ್ ಈ ಹಣವನ್ನು ಮರಳಿ ಕೊಡುವವರೆಗೂ ವಿಶಾಲ್ ನಟಿಸುವ ಸಿನಿಮಾಗಳ ಹಕ್ಕುಗಳನ್ನು ತಮಗೆ ಕೊಡುವಂತೆ ಲೈಕಾ ಸಂಸ್ಥೆ ಜೊತೆ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು ಮೀರಿದ್ದಕ್ಕೆ ವಿವಾದ ತಲೆದೋರಿದೆ.

ಇತ್ತೀಚೆಗೆ ವಿಶಾಲ್ ಲೈಕಾ ಸಂಸ್ಥೆ ಜೊತೆಗಿನ ಒಪ್ಪಂದ ಮುರಿದು ತಮ್ಮ 'ವೀರಮೇ ವಾಗೈ ಸೂಡು' ಚಿತ್ರವನ್ನು ರಿಲೀಸ್ ಮಾಡಿದ್ದರು. ಹಾಗಾಗಿ ಲೈಕಾ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ ಹೈಕೋರ್ಟ್ ರಿಜಿಸ್ಟರ್ ಹೆಸರಿನಲ್ಲಿ 15 ಕೋಟಿ ರೂ. ಹಣವನ್ನು 3 ವಾರಗಳಲ್ಲಿ ಡೆಪಾಸಿಟ್ ಮಾಡುವಂತೆ ಆದೇಶಿಸಿದೆ.


Click it and Unblock the Notifications











