ಕೊರೊನಾದಿಂದ ಗುಣವಾಗಲು ತೆಗೆದುಕೊಂಡ ಆಯುರ್ವೇದ ಔಷಧದ ಚಿತ್ರ ಹಂಚಿಕೊಂಡ ನಟ ವಿಶಾಲ್
ತಮಿಳಿನ ಖ್ಯಾತ ನಟ ವಿಶಾಲ್ ಹಾಗೂ ಅವರ ತಂದೆ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಸೋಂಕಿಗೆ ಗುರಿಯಾಗಿದ್ದರು.
Recommended Video
ಆದರೆ ವಿಶಾಲ್ ಹಾಗೂ ಅವರ 64 ವರ್ಷ ವಯಸ್ಸಿನ ತಂದೆ ಜಿ.ಕೆ.ರೆಡ್ಡಿ ಹಾಗೂ ವಿಶಾಲ್ ಅವರ ಮ್ಯಾನೇಜರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಮೂವರಿಗೂ ಸಹ ರೋಗಲಕ್ಷ್ಮಣಗಳು ಕಾಣಿಸಿಕೊಂಡಿದ್ದವು.
ಆದರೆ ವಿಶಾಲ್, ಜಿ.ಕೆ.ರೆಡ್ಡಿ ಅವರು ಆಸ್ಪತ್ರೆಗೆ ದಾಖಲಾಗಲಿಲ್ಲ ಬದಲಿಗೆ ಮನೆಯಲ್ಲೇ ಇದ್ದು ಆಯುರ್ವೇದ ಔಷಧಗಳನ್ನು ತೆಗೆದುಕೊಂಡು ಕೇವಲ ಒಂದೇ ವಾರದಲ್ಲಿ ಗುಣಮುಖರಾದರು. ಇದೀಗ ತಾವು ತೆಗೆದುಕೊಂಡ ಆಯುರ್ವೇದ ಔಷಧದ ಮಾಹಿತಿ ಹಂಚಿಕೊಂಡಿದ್ದಾರೆ.

ಔಷಧದ ಚಿತ್ರ ಹಾಕಿದ್ದಾರೆ ವಿಶಾಲ್
ಜನರಿಂದ ಹೆಚ್ಚಾಗಿ ಒತ್ತಾಯ ಕೇಳಿಬಂದ ಕಾರಣ ತಾವು ಕೊರೊನಾ ಬಂದಾಗ ತೆಗೆದುಕೊಂಡ ಆಯುರ್ವೇದ ಔಷಧದ ಚಿತ್ರ ಹಾಕಿರುವುದಲ್ಲದೆ, ಅದನ್ನು ಹೇಗೆ ಎಷ್ಟು ಮಾತ್ರದಲ್ಲಿ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಕ್ಯುಎಫ್‌ಸಿ-ಕ್ಯೂಆರ್ ಸಿರಪ್
ಕ್ಯುಎಫ್‌ಸಿ-ಕ್ಯೂಆರ್ (QFC-QR) ಎಂಬ ಸಿರಪ್ ಅನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕಂತೆ. ಈ ಔಷಧಗಳನ್ನು ತೆಗೆದುಕೊಳ್ಳುವಂತೆ ವೈದ್ಯರಾದ ಹರಿ ಶಂಕರ್ ಎಂಬುವರು ಸೂಚಿಸಿದ್ದರಂತೆ.

ಆರ್ಸೆನೆಕ್ ಆಲ್ಬಯುಂ ಎಂಬ ಮಾತ್ರೆ
ಆರ್ಸೆನೆಕ್ ಆಲ್ಬಯುಂ ಎಂಬ ಮಾತ್ರಗಳನ್ನು ಸಹ ವಿಶಾಲ್ ತೆಗೆದುಕೊಂಡಿದ್ದು, ಈ ಮಾತ್ರೆಗಳನ್ನು ಬೆಳಿಗ್ಗೆ ಐದು ಮತ್ತು ಸಂಜೆ ಐದು ತೆಗೆದುಕೊಳ್ಳುತ್ತಿದ್ದರಂತೆ ವಿಶಾಲ್ ಮತ್ತು ಅವರ ತಂದೆ. ಈ ಔಷಧಗಳನ್ನು ಬೇರೆಯವರು ತೆಗೆದುಕೊಳ್ಳುವ ಮುನ್ನಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಎಂದಿದ್ದಾರೆ ವಿಶಾಲ್.

ಪ್ಯಾಟ್ ಸಿರಪ್ ಅನ್ನು ದಿನಕ್ಕೆ ಮೂರು ಬಾರಿ
ಪ್ಯಾಟ್ ಎಂಬ ಹೆಸರಿನ ಸಿರಪ್ ಅನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕಂತೆ. ಈ ಮೂರು ಔಷಧಗಳ ಚಿತ್ರಗಳನ್ನು ಸಹ ಶೇರ್ ಮಾಡಿರುವ ವಿಶಾಲ್, ಈ ಔಷಧಗಳು ಎಲ್ಲಾ ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಅಂಗಡಿಗಳಲ್ಲಿ ಲಭ್ಯವಿರುವುದಾಗಿ ಹೇಳಿದ್ದಾರೆ.


Click it and Unblock the Notifications











