ನಟ ವಿಶಾಲ್ ಪ್ರೊಡಕ್ಷನ್ ಹೌಸ್ ಮ್ಯಾನೇಜರ್ ಕಾರ್ ಗ್ಲಾಸ್ ಪುಡಿ ಪುಡಿ: ದೂರು ದಾಖಲು
ತಮಿಳು ನಟ ವಿಶಾಲ್ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಸಂಸ್ಥೆಗೆ 45 ಲಕ್ಷ ರೂ. ವಂಚಿಸಿರುವ ಪ್ರಕರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಈ ಸಂಬಂಧ ರಮ್ಯಾ ವಿರುದ್ಧ ದೂರು ದಾಖಲಾಗಿದೆ. ರಮ್ಯಾ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ರಮ್ಯಾ, ವಿಶಾಲ್ ವಿರುದ್ಧ ಸಿಡಿದೆದ್ದಿದ್ದಾರೆ.
ನಟ ವಿಶಾಲ್ ನಿಜ ಜೀವನದಲ್ಲಿ ವಿಲನ್, ಮ್ಯಾನೇಜರ್ ಮತ್ತು ವಿಶಾಲ್ ಇಬ್ಬರು ಸಾಕಷ್ಟು ಅವ್ಯವಹಾರಗಳನ್ನು ಮಾಡಿದ್ದಾರೆ ಎಂದು ವಿಶಾಲ್ ವಿರುದ್ಧ ರೊಚ್ಚಿಗೆದಿದ್ದಾರೆ. ಇದರ ಬೆನ್ನಲ್ಲೆ ಈಗ ವಿಶಾಲ್ ಪ್ರೊಡಕ್ಷನ್ ಹೌಸ್ ಮ್ಯಾನೇಜರ್ ಆಗಿರುವ ಹರಿ ಕೃಷ್ಣ ಅವರ ಕಾರ್ ಮೇಲೆ ಅಟ್ಯಾಕ್ ಮಾಡಿರುವ ಕಿಡಿಗೇಡಿಗಳು ಕಾರನ್ನು ಪುಡಿ ಪುಡಿ ಮಾಡಿದ್ದಾರೆ. ಮುಂದೆ ಓದಿ..

ವಿಶಾಲ್ ಮ್ಯಾನೇಜರ್ ಕಾರಿಗೆ ಹಾನಿ
ರಮ್ಯಾ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಿಶಾಲ್ ಪ್ರೊಡಕ್ಷನ್ ಹೌಸ್ ಮ್ಯಾನೇಜರ್ ಕಾರಿಗೆ ಹಾನಿಮಾಡಲಾಗಿದೆ. ಕೊಡಂಬಕ್ಕಂನ ಅವರ ನಿವಾಸದ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಅನ್ನು ಪುಡಿ ಪುಡಿ ಮಾಡಲಾಗಿದೆ. ಈ ಬಗ್ಗೆ ಹರಿ ಕೃಷ್ಣ ಕೊಡಂಬಕ್ಕಂ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ಈಗಾಗಲೆ ಪೊಲೀಸರು ತನಿಖೆ ನಡೆಸುತ್ತಿದ್ದ, 45 ಲಕ್ಷ ವಂಚಿಸಿದ ಆರೋಪ ಎದುರಿಸುತ್ತಿರುವ ರಮ್ಯಾಗೂ ಇದಕ್ಕು ಸಂಬಂಧವಿದೆಯ ಎಂದು ಪತ್ತೆಹಚ್ಚುತ್ತಿದ್ದಾರೆ.

ವಿಶಾಲ್ ವಿರುದ್ಧ ತಿರುಗಿ ಬಿದ್ದ ರಮ್ಯಾ
ಇತ್ತೀಚಿಗಷ್ಟೆ ರಮ್ಯಾ, ವಿಶಾಲ್ ಮತ್ತು ಮ್ಯಾನೇಜರ್ ವಿರುದ್ಧ ಆರೋಪ ಮಾಡಿದ್ದರು. ಇಬ್ಬರು ಹಲವಾರು ಅವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಪುರಾವೆ ಎಂದು ರಮ್ಯಾ ಹೇಳಿದ್ದಾರೆ. ಅಲ್ಲದೆ ವಿಶಾಲ್ ಮತ್ತು ಮ್ಯಾನೇಜರ್ ಸೇರಿ ಗೂಂಡಗಳನ್ನು ಕಳುಹಿಸಿಹಿ ಬೆದರಿಕೆ ಹಾಕಿಸಿದ್ದಾರೆ ಎಂದು ದೂರಿದ್ದಾರೆ.

ಜೀವಬೆದರಿಕೆ ಇದೆ ಎಂದಿರುವ ರಮ್ಯಾ
ವಿಶಾಲ್ ಮತ್ತು ಮ್ಯಾನೇಜರ್ ಯಿಂದ ಜೀವ ಬೆದರಿಕೆ ಇದೆ ಪೊಲೀಸ್ ರಕ್ಷಣೆ ಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮ್ಯಾನೇಜರ್ ಹರಿ ರಮ್ಯಾ ಮಾಡಿರುವ ಆರೋಪವನ್ನು ತಳ್ಳಿ ಹಾಕಿ, ರಮ್ಯಾ ವಂಚನೆ ಮಾಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಇದೆ ಎಂದಿದ್ದಾರೆ.

ವಿಶಾಲ್ ಫಿಲ್ಮ್ ಫ್ಯಾಕ್ಟರಿ
ವಿಶಾಲ್ ಫಿಲ್ಮ್ ಫ್ಯಾಕ್ಟರಿಯನ್ನು 2013ರಲ್ಲಿ ವಿಶಾಲ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮತ್ತು ವಿತರಣೆ, ವಿ ಎಫ್ ಎಕ್ಸ್ ಕಂಪನಿಯಾಗಿದೆ. ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈ ಸಂಸ್ಥೆ, ಸದ್ಯ ತುಪ್ಪರಿವಾಲನ್-2 ಮತ್ತು ಚಕ್ರ ಎರಡು ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡುತ್ತಿದೆ.


Click it and Unblock the Notifications











