For Quick Alerts
  ALLOW NOTIFICATIONS  
  For Daily Alerts

  ವಿಷ್ಣು ವಿಶಾಲ್-ಜ್ವಾಲಾ ಗುಟ್ಟಾ ಮದುವೆ: ಮೆಹಂದಿ ಫೋಟೋಗಳು ಬಹಿರಂಗ

  |

  ತಮಿಳು ನಟ ವಿಷ್ಣು ವಿಶಾಲ್ ಮತ್ತು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರ ವಿವಾಹ ಇಂದು (ಏಪ್ರಿಲ್ 22) ಹೈದರಾಬಾದ್‌ನಲ್ಲಿ ನಡೆಯಲಿದೆ. ಮದುವೆಗೂ ಮುಂಚೆ ನಡೆಯುವ ಶಾಸ್ತ್ರಗಳು ಅದಾಗಲೇ ನೆರವೇರಿದ್ದು, ಮೆಹಂದಿ ಮತ್ತು ಹಳದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸ್ವತಃ ಜ್ವಾಲಾ ಗುಟ್ಟಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಮೆಹಂದಿ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ ಹಳದಿ ಶಾಸ್ತ್ರ ಹಾಗೂ ಸಂಗೀತ್ ಕಾರ್ಯಕ್ರಮದ ಫೋಟೋ ಸಹ ಶೇರ್ ಮಾಡಿದ್ದರು.

  ಏಪ್ರಿಲ್ 22ಕ್ಕೆ ಸರಳವಾಗಿ ವಿವಾಹವಾಗಲಿದ್ದಾರೆ ನಟ ವಿಷ್ಣು ವಿಶಾಲ್-ಜ್ವಾಲಾ ಗುಟ್ಟಏಪ್ರಿಲ್ 22ಕ್ಕೆ ಸರಳವಾಗಿ ವಿವಾಹವಾಗಲಿದ್ದಾರೆ ನಟ ವಿಷ್ಣು ವಿಶಾಲ್-ಜ್ವಾಲಾ ಗುಟ್ಟ

  ಮೆಹಂದಿ ಮತ್ತು ಹಳದಿ ಶಾಸ್ತ್ರಗಳಲ್ಲಿ ಜ್ವಾಲಾ ಗುಟ್ಟಾ ಮತ್ತು ವಿಷ್ಣು ವಿಶಾಲ್ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಆಪ್ತರು ಬಂಧುಗಳು ಮಾತ್ರ ಭಾಗಿಯಾಗಿದ್ದರು.

  ಅಂದ್ಹಾಗೆ, ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಬಹಳ ದಿನಗಳಿಂದ ಡೇಟಿಂಗ್ ಮಾಡ್ತಿದ್ದರು. ಕಳೆದ ವರ್ಷ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ 2021ರ ಏಪ್ರಿಲ್ 13ರಂದು ಅಧಿಕೃತವಾಗಿ ವಿವಾಹದ ಬಗ್ಗೆ ವಿಷ್ಣು ಹಾಗೂ ಜ್ವಾಲಾ ಮಾಹಿತಿ ನೀಡಿದ್ದರು.

  ಕಳೆದ ವರ್ಷ ಸೆಪ್ಟೆಂಬರ್ 9 ರಂದು ಜ್ವಾಲಾ ಗುಟ್ಟಾ ಅವರ ಹುಟ್ಟುಹಬ್ಬದ ದಿನ ವಿಷ್ಣು ವಿಶಾಲ್ ಲವ್ ಪ್ರಪೋಸ್ ಮಾಡಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಇಬ್ಬರಿಗೂ ಎರಡನೇ ಮದುವೆ

  ನಟ ವಿಷ್ಣು ವಿಶಾಲ್ ಗೆ ಈಗಾಗಲೇ ಮದುವೆ ಆಗಿದೆ. 2010ರಲ್ಲಿ ರಜನಿ ಜೊತೆ ಸಪ್ತಪದಿ ತುಳಿದಿದ್ದ ನಟ, 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇವರಿಬ್ಬರಿಗೆ ಆರ್ಯನ್ ಎಂಬ ಮಗ ಸಹ ಇದ್ದನು.

  ಕೊರೋನಾ ಸಂಕಷ್ಟದಲ್ಲಿ ಸ್ಟಾರ್ ನಟರಿಗೆ ಬಹಿರಂಗ ಪತ್ರ ವೈರಲ್!! | Filmibeat Kannada

  ಜ್ವಾಲಾ ಗುಟ್ಟಾಗೂ ಇದು ಎರಡನೇ ಮದುವೆ. 2005ರಲ್ಲಿ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಜೊತೆ ವಿವಾಹವಾಗಿದ್ದರು. ಆದರೆ, 2010ರಲ್ಲಿ ಡಿವೋರ್ಸ್ ಪಡೆದುಕೊಂಡರು. ಈಗ ವಿಷ್ಣು ಜೊತೆ ಮತ್ತೊಮ್ಮೆ ದಾಂಪತ್ಯ ಜೀವನ ಆರಂಭಿಸಲು ಮುಂದಾಗಿದ್ದಾರೆ.

  English summary
  Tamil actor Vishnu Vishal and Jwala Gutta will tie the knot in grand wedding today. check out in Mehandi Ceremony Photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X