For Quick Alerts
  ALLOW NOTIFICATIONS  
  For Daily Alerts

  ಜ್ವಾಲಾ ಗುಟ್ಟಾ ಜೊತೆ ಮದುವೆ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಟ ವಿಷ್ಣು ವಿಶಾಲ್

  |

  ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ಹಾಗೂ ನಿರ್ಮಾಪಕ ವಿಷ್ಣು ವಿಶಾಲ್ ಅವರ ಪ್ರೀತಿ ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದೆ.

  ಮದುವೆ ಯಾವಾಗ ಎನ್ನುವ ಗುಟ್ಟನ್ನು ಇಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದರೀಗ ಮೊದಲ ಬಾರಿಗೆ ನಟ ವಿಷ್ಣು ವಿಶಾಲ್ ಮದುವೆ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ನಡೆದ ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಮದುವೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಶೀಘ್ರದಲ್ಲೇ ತನ್ನ ಪ್ರೇಯಸಿ ಜೊತೆ ಹಸೆಮಣೆ ಏರುವುದಾಗಿ ವಿಷ್ಣು ಅಧಿಕೃತ ಪಡಿಸಿದ್ದಾರೆ.

  ಮದುವೆಯಾಗಲಿದ್ದಾರೆ ಕೆಜಿಎಫ್ ನಟಿ: ವರ ಯಾರು ಗೊತ್ತೆ?

  ಜೊತೆಗೆ ಸಿನಿಮಾಗೆ ಬೆಂಬಲ ನೀಡಿದ ಭಾವಿ ಪತ್ನಿ ಜ್ವಾಲಾಗೆ ವಿಷ್ಣು ಧನ್ಯವಾದ ತಿಳಿಸಿದ್ದಾರೆ. 'ಶೀಘ್ರದಲ್ಲೇ ಮದುವೆ ಆಗುತ್ತಿದ್ದೇವೆ. ನಾನು ಈಗ ತೆಲುಗು ಅಳಿಯನಾಗಲಿದ್ದೇನೆ. ತುಂಬಾ ಸಂತೋಷವಾಗುತ್ತಿದೆ. ಶೀಘ್ರದಲ್ಲೇ ಮದುವೆ ದಿನಾಂಕ ಪ್ರಕಟ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

  ಅಂದಹಾಗೆ ವಿಷ್ಣು ಮತ್ತು ಜ್ವಾಲಾ ಗುಟ್ಟಾ ಇಬ್ಬರಿಗೂ ಇದು ಎರಡನೇ ಮದುವೆ. ಜ್ವಾಲಾ ಗುಟ್ಟಾ, ಮಾಜಿ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಆದರೆ 2011ರಲ್ಲಿ ಇಬ್ಬರು ಕಾನೂನು ಬದ್ಧವಾಗಿ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ.

  Harshika ಜೊತೆ ಕನ್ನಡದ ಹಾಡನ್ನು ಹಾಡಿ ಮಿಂಚಿದ ನಟ Govinda | Filmibeat Kannada

  6ನೇ ವಯಸ್ಸಿನಲ್ಲೇ ಜ್ವಾಲಾ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು. ಅವರ ತಾಯಿ ಯೆಲೆನ್ ಗುಟ್ಟಾ. ಚೀನಾ ಮೂಲದವರು. ತಂದೆ ತೆಲುಗಿನವರು. ಇನ್ನು ನಟ ವಿಷ್ಣು ವಿಶಾಲ್ ಕೂಡ ಮೊದಲ ಪತ್ನಿಯಿಂದ ದೂರ ಆಗಿದ್ದಾರೆ. ರಜಿನಿ ಎನ್ನುವವರನ್ನು ವಿಷ್ಣು ಮದುವೆಯಾಗಿದ್ದರು. 2018ರಲ್ಲಿ ಇಬ್ಬರು ವಿಚ್ಛೇದನ ಪಡೆದು ಬೇರೆ ಬೇರೆ ಆಗಿದ್ದಾರೆ. ವಿಷ್ಣು ಮತ್ತು ರಜಿನಿ ದಂಪತಿಗೆ ಆರ್ಯನ್ ಎನ್ನುವ ಮಗನಿದ್ದಾನೆ.

  English summary
  Tamil Actor vishnu vishal confirms marriage with Jwala Gutta soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X