For Quick Alerts
  ALLOW NOTIFICATIONS  
  For Daily Alerts

  ವಿಜೆ ಚಿತ್ರಾ ಸಾವು: ಪತಿ ಹೇಮಂತ್‌ಗೆ ಜಾಮೀನು ನೀಡಿದ ಮದ್ರಾಸ್ ಹೈ ಕೋರ್ಟ್

  |

  ಕಿರುತೆರೆ ನಟಿ ಹಾಗೂ ವಿಜೆ ಚಿತ್ರಾ ಅವರ ಸಾವಿನ ಪ್ರಕರಣದಲ್ಲಿ ಬಂಧನವಾಗಿದ್ದ ಪತಿ ಹೇಮಂತ್‌ಗೆ ಮದ್ರಾಸ್ ಹೈ ಕೋರ್ಟ್ ಸೋಮವಾರ (ಫೆಬ್ರವರಿ 15) ಜಾಮೀನು ಮಂಜೂರು ಮಾಡಿದೆ.

  ಮುಂದಿನ ಆದೇಶದವರೆಗೂ ಮದುರೈ ಬಿಟ್ಟು ಹೊರಗೆ ಹೋಗದಂತೆ ಷರತ್ತು ವಿಧಿಸಿ ವಿಜೆ ಚಿತ್ರಾ ಅವರ ಪತಿ ಹೇಮಂತ್‌ಗೆ ನ್ಯಾಯಮೂರ್ತಿ ಭಾರತಿದಾಸನ್ ಜಾಮೀನು ನೀಡಿದ್ದಾರೆ.

  ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

  ಕಳೆದ 60 ದಿನಗಳಿಂದ ಹೇಮಂತ್ ನ್ಯಾಯಾಂಗ ಬಂಧನಲ್ಲಿದ್ದರು. ವಿಜೆ ಚಿತ್ರಾ ಅವರ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹೇಮಂತ್‌ ಅವರನ್ನು ಡಿಸೆಂಬರ್ 15 ರಂದು ಬಂಧಿಸಲಾಗಿತ್ತು.

  ದಿವಂಗತ ನಟಿ ಚಿತ್ರಾ ಅವರಿಗೆ ಬೆದರಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 306 ಅಡಿ ಕೇಸ್ ದಾಖಲಿಸಲಾಗಿತ್ತು. ನಟನೆಯನ್ನು ಬಿಟ್ಟುಬಿಡು ಎಂದು ಹೇಮಂತ್ ತನ್ನ ಪತ್ನಿಗೆ ಧಮ್ಕಿ ಹಾಕಿದ್ದರು ಎಂದು ಚಿತ್ರಾ ತಾಯಿ ದೂರಿದ್ದರು.

  ತನಿಖೆ ವೇಳೆ ಹೇಮಂತ್ ಮತ್ತು ಚಿತ್ರಾ ರಹಸ್ಯವಾಗಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. 2020ರ ಅಕ್ಟೋಬರ್ ತಿಂಗಳಲ್ಲಿ ವಿವಾಹವಾಗಿದ್ದ ಈ ಜೋಡಿ ಫೆಬ್ರವರಿ 2021ರಲ್ಲಿ ಸಾರ್ವಜನಿಕವಾಗಿ ಘೋಷಿಸಿಕೊಳ್ಳಲು ತಯಾರಿ ನಡೆಸಿದ್ದರು. ಆದರೆ, ಅಷ್ಟರಲ್ಲೇ ಚಿತ್ರಾ ಸಾವನ್ನಪ್ಪಿದ್ದರು.

  ರಾಧೆ ಶ್ಯಾಮ್ ನಲ್ಲಿ ಪ್ರಭಾಸ್ ಕಾಸ್ಟ್ಯೂಮ್ಸ್’ಗೆ ಖರ್ಚಾಗಿದ್ದು ಅಷ್ಟಿಷ್ಟಲ್ಲ | Filmibeat Kannada

  ಡಿಸೆಂಬರ್ 9 ರಂದು ತಾವು ತಂಗಿದ್ದ ಚೆನ್ನೈನ ಹೋಟೆಲ್‌ವೊಂದರಲ್ಲಿ ಚಿತ್ರಾ ನೇಣಿಗೆ ಶರಣಾಗಿದ್ದರು.

  English summary
  VJ Chitra Death Case: Late VJ Chitra husband Hemanth granted bail by the Madras High Court on Monday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X