ವಿಜೆ ಚಿತ್ರಾ ಆತ್ಮಹತ್ಯೆ: ಗಂಡನ ಮೇಲೆ ಅನುಮಾನ ವ್ಯಕ್ತಪಡಿಸಿದ ನಟಿ ತಾಯಿ

ಕಿರುತೆರೆ ನಟಿ ವಿಜೆ ಚಿತ್ರಾ ಡಿಸೆಂಬರ್ 9 ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಶೂಟಿಂಗ್ ಮುಗಿಸಿ ಹೋಟೆಲ್ ರೂಮಿಗೆ ಬಂದಿದ್ದ ನಟಿ ನಂತರ ಸಾವನ್ನಪ್ಪಿದ್ದರು.

Recommended Video

ಬಯಲಾಯ್ತು ನಟಿ Chaitra ಸಾವಿನ ಹಿಂದಿನ ರಹಸ್ಯ??? | Filmibeat Kannada

ಕೇಸ್ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆ ಎಂದು ಎಫ್ ಐ ಆರ್ ನಮೂದಿಸಿದರು. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ. ಈ ನಡುವೆ ವಿಜೆ ಚಿತ್ರಾ ಅವರ ತಾಯಿ ಹೊಸದಾಗಿ ಮದುವೆಯಾಗಿದ್ದ ನಟಿಯ ಗಂಡ ಹೇಮಂತ್ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ದುಡ್ಡಿಗಾಗಿ ಮದುವೆ ಆಗಿದ್ದ!

ದುಡ್ಡಿಗಾಗಿ ಮದುವೆ ಆಗಿದ್ದ!

ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಜೆ ಚಿತ್ರ ಮತ್ತು ಉದ್ಯಮಿ ಹೇಮಂತ್ ಕುಮಾರ್, ನಂತರ ಅಕ್ಟೋಬರ್ ತಿಂಗಳಲ್ಲಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಆದ್ರೆ, ಈ ವಿವಾಹವನ್ನು ಗುಟ್ಟಾಗಿ ಇಟ್ಟು ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ನಟಿ ಸಾವಿಗೆ ಶರಣಾಗಿದ್ದು, ನಟಿಯ ತಾಯಿ ಹೇಮಂತ್ ಕುಮಾರ್ ಮೇಲೆ ಆರೋಪ ಮಾಡಿದ್ದಾರೆ. 'ದುಡ್ಡಿಗಾಗಿ ನನ್ನ ಮಗಳನ್ನು ಮದುವೆಯಾಗಿ ಕೊಂದಿದ್ದಾನೆ'' ಎಂದು ಶಂಕಿಸಿದ್ದಾರೆ.

ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದಾಳೆ

ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದಾಳೆ

''ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವಳನ್ನು ಧೈರ್ಯಶಾಲಿ ಮಹಿಳೆಯಾಗಿ ಬೆಳೆಸಿದ್ದೇನೆ. ಅವಳು ತುಂಬಾ ಪ್ರತಿಭಾವಂತೆ. ಅವಳ ದುಡ್ಡಿಗಾಗಿ ಹೇಮಂತ್ ಕುಮಾರ್ ಮದುವೆ ಆಗಿದ್ದಾನೆ ಎಂದು ಶಂಕಿಸುತ್ತಿದ್ದೇನೆ. ನನ್ನ ಮಗಳು ದೈಹಿಕ ಹಿಂಸಾಚಾರಕ್ಕೆ ಒಳಗಾಗಿದ್ದಾಳೆ ಎಂದು ನನಗೆ ಅನಿಸುತ್ತಿದೆ. ಆಕೆಯ ಮುಖದ ಮೇಲೆ ಗಾಯದ ಗುರುತುಗಳಿವೆ'' ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ಚಿತ್ರಾ ತಾಯಿ ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಟ

ನ್ಯಾಯಕ್ಕಾಗಿ ಹೋರಾಟ

ವಿಜೆ ಚಿತ್ರಾ ಅವರ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕಡೆ ಮಗಳ ಸಾವಿನ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ, ಕೇಸ್ ದಾಖಲಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೇಮಂತ್ ಕುಮಾರ್ ವಿಚಾರಣೆ

ಹೇಮಂತ್ ಕುಮಾರ್ ವಿಚಾರಣೆ

ಚಿತ್ರಾ ಸಾವಿನ ಸಂಬಂಧ ಪತಿ ಹೇಮಂತ್ ಕುಮಾರ್ ವಿಚಾರಣೆ ಮಾಡಲಾಗಿದೆ. ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಸಹ ಸಂಗ್ರಹಿಸಿರುವ ಪೊಲೀಸರು ಮತ್ತೊಂದು ಸುತ್ತಿನ ವಿಚಾರಣೆಗಾಗಿ ಹೇಮಂತ್ ಕುಮಾರ್ ಅವರನ್ನ ಠಾಣೆಗೆ ಕರೆಸಲಾಗಿದೆ ಎಂಬ ಮಾಹಿತಿ ಇದೆ.

ಹೇಮಂತ್ ಕುಮಾರ್ ಹೇಳಿದ್ದೇನು?

ಹೇಮಂತ್ ಕುಮಾರ್ ಹೇಳಿದ್ದೇನು?

ಚಿತ್ರಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತಿ ಹೇಮಂತ್, 'ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದ ಚಿತ್ರಾ ಸ್ನಾನ ಮುಗಿಸಿ ಬರುವುದಾಗಿ ಹೇಳಿ ಹೋದಳು. ತುಂಬಾ ಸಮಯವಾದರೂ ಬರಲಿಲ್ಲ, ಬಳಿಕ ಬಾಗಿಲು ಬಡಿಯಲು ಪ್ರಾರಂಭಿಸಿದೆ. ಬಾಗಿಲು ತೆಗೆಯಲಿಲ್ಲ. ಬಳಿಕ ಹೋಟೆಲ್ ಸಿಬ್ಬಂದಿಗೆ ತಿಳಿಸಿ ನಕಲಿ ಕೀ ಬಳಸಿ ಬಾಗಿಲು ತೆರೆದೆವು. ಚಿತ್ರಾ ನೇಣುಹಾಕಿಕೊಂಡಿದ್ದಳು' ಎಂದಿದ್ದಾರೆ.

More from Filmibeat

English summary
Tamil small screen actor VJ chitra commits suicide on december 9th. Her mother suspects hemantha kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X