ನಟಿ ವಿಜೆ ಚೈತ್ರಾ ಆತ್ಮಹತ್ಯೆ ಪ್ರಕರಣ; ಪತಿ ಹೇಮಂತ್ ಕುಮಾರ್ ಅರೆಸ್ಟ್

ತಮಿಳಿನ ಜನಪ್ರಿಯ ನಟಿ ಮತ್ತು ನಿರೂಪಕಿ ಆತ್ಮಹತ್ಯೆ ಪ್ರಕರಣ ಸಂಬಂಧ ಪತಿ ಹೇಮಂತ್ ಕುಮಾರ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಹೇಮಂತ್ ಬಂಧನವಾಗಿದೆ ಎಂದು ಎಸಿಪಿ ಸುದರ್ಶನ್ ದೃಢಪಡಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಹೇಮಂತ್ ಕುಮಾರ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿತ್ರಾ ಮತ್ತು ಹೇಮಂತ್ ಕುಮಾರ್ ಕೆಲವು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಚಿತ್ರಾ ಸಾವಿಗೆ ಪತಿ ಹೇಮಂತ್ ಕುಮಾರ್ ಅವರೇ ಕಾರಣ ಎಂದು ಚಿತ್ರಾ ತಾಯಿ ಆರೋಪಿಸಿದ್ದರು. ಮುಂದೆ ಓದಿ..

ಚಿತ್ರಾ ಮೇಲೆ ಹಲ್ಲೆ ಮಾಡಿದ್ದ ಪತಿ ಹೇಮಂತ್

ಚಿತ್ರಾ ಮೇಲೆ ಹಲ್ಲೆ ಮಾಡಿದ್ದ ಪತಿ ಹೇಮಂತ್

ಚಿತ್ರಾ ಸಾವಿನ ಪ್ರಾಕರಣದ ತನಿಖೆ ಪ್ರಾರಂಭಿಸಿದ ಪೊಲೀಸರು ಹೇಮಂತ್ ಕುಮಾರ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಜೆ ಚಿತ್ರಾ ನಟನೆಯ ಕೆಲವು ದೃಶ್ಯಗಳ ಬಗ್ಗೆ ಹೇಮಂತ್ ಆಕ್ಷೇಪ ವ್ಯಕ್ತಪಡಿಸಿ, ಜಗಳವಾಡಿದ್ದ ಎಂದು ತಿಳಿದುಬಂದಿದೆ. ಚಿತ್ರಾ ಆತ್ಮಹತ್ಯೆ ಮಾಡಿಕೊಂಡ ದಿನ ಕೂಡ ಆಕೆಯ ಮೇಲೆ ಹಲ್ಲೆ ಮಾಡಿದ್ದ, ಕಪಾಳಮೋಕ್ಷ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 9ರಂದು ನಿಧನಹೊಂದಿದ ನಟಿ

ಡಿಸೆಂಬರ್ 9ರಂದು ನಿಧನಹೊಂದಿದ ನಟಿ

28 ವರ್ಷದ ಚಿತ್ರಾ ಡಿಸೆಂಬರ್ 9ರಂದು ಚೆನ್ನೈನ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತಿ ಹೇಮಂತ್, ' ರಾತ್ರಿ 1ಗಂಟೆಗೆ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದ ಚಿತ್ರಾ ಸ್ನಾನ ಮುಗಿಸಿ ಬರುವುದಾಗಿ ಹೇಳಿ ಹೋದಳು. ತುಂಬಾ ಸಮಯವಾದರೂ ಬರಲಿಲ್ಲ, ಬಳಿಕ ಬಾಗಿಲು ಬಡಿಯಲು ಪ್ರಾರಂಭಿಸಿದೆ. ಬಾಗಿಲು ತೆಗೆಯದ ಕಾರಣ ಹೋಟೆಲ್ ಸಿಬ್ಬಂದಿಗೆ ತಿಳಿಸಿ ನಕಲಿ ಕೀ ಬಳಸಿ ಬಾಗಿಲು ತೆರೆದೆವು. ಚಿತ್ರಾ ನೇಣುಹಾಕಿಕೊಂಡಿದ್ದಳು' ಎಂದಿದ್ದರು.

ಪಾಂಡಿಯನ್ ಸ್ಟೋರ್ಸ್ ನಲ್ಲಿ ನಟನೆ

ಪಾಂಡಿಯನ್ ಸ್ಟೋರ್ಸ್ ನಲ್ಲಿ ನಟನೆ

ಪಾಂಡಿಯನ್ ಸ್ಟೋರ್ಸ್ ತಮಿಳು ಶೋನಲ್ಲಿ ವಿಜೆ ಚಿತ್ರಾ ಕಾಣಿಸಿಕೊಳ್ಳುತ್ತಿದ್ದರು. ನಟಿಯಾಗಿ, ನಿರೂಪಕಿಯಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದ ವಿಜೆ ಚಿತ್ರಾ ಹಠಾತ್ ಸಾವು ಅಭಿಮಾನಿಗಳಿಗೆ, ಸ್ನೇಹಿತರಿಗೆ ಶಾಕ್ ಆಗಿದೆ.

ಹೇಮಂತ್ ವಿರುದ್ಧ ಚಿತ್ರಾ ತಾಯಿ ಆರೋಪ

ಹೇಮಂತ್ ವಿರುದ್ಧ ಚಿತ್ರಾ ತಾಯಿ ಆರೋಪ

ಹೇಮಂತ್ ವಿರುದ್ಧ ಆರೋಪ ಮಾಡಿದ್ದ ಚಿತ್ರಾ ತಾಯಿ, 'ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವಳನ್ನು ಧೈರ್ಯಶಾಲಿ ಮಹಿಳೆಯಾಗಿ ಬೆಳೆಸಿದ್ದೇನೆ. ಅವಳು ತುಂಬಾ ಪ್ರತಿಭಾವಂತೆ. ಅವಳ ದುಡ್ಡಿಗಾಗಿ ಹೇಮಂತ್ ಕುಮಾರ್ ಮದುವೆ ಆಗಿದ್ದಾನೆ ಎಂದು ಶಂಕಿಸುತ್ತಿದ್ದೇನೆ. ನನ್ನ ಮಗಳು ದೈಹಿಕ ಹಿಂಸಾಚಾರಕ್ಕೆ ಒಳಗಾಗಿದ್ದಾಳೆ ಎಂದು ನನಗೆ ಅನಿಸುತ್ತಿದೆ. ಆಕೆಯ ಮುಖದ ಮೇಲೆ ಗಾಯದ ಗುರುತುಗಳಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

More from Filmibeat

English summary
Tamil Actress VJ Chitra's Husband Hemanth Kumar Arrested for Abetment to Suicide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X