ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಗರಂ ಆದ ಸ್ವಾತಿಮುತ್ತು ಮೀನಾ, ಐಫಾದಲ್ಲಿ ನೀಡಿದ ತಿರುಗೇಟು ಹೇಗಿತ್ತು..?

ಮೀನಾ ಗೊತ್ತಲ್ವಾ..? ಹೆಚ್ಚು ಕಡಿಮೆ ಎರಡು ವರ್ಷ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದ ನಾಯಕಿ. ಕೇವಲ ಕಾಲಿವುಡ್‌ ಮಾತ್ರ ಅಲ್ಲದೇ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕೂಡ ಅಂದಕಾಲತ್ತಿಲ್‌ ತಮ್ಮ ಅಭಿನಯದಿಂದ ಎಲ್ಲರ ಹೃದಯಕ್ಕೆ ಕನ್ನ ಹಾಕಿದ್ದ ಮೀನಾ, ಕನ್ನಡದಲ್ಲಿ ಪುಟ್ನಂಜ, ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡಿಗರ ಹೃದಯವನ್ನೂ ಗೆದ್ದಿದ್ದರು.

ಆ ನಂತರ 2009ರಲ್ಲಿ ವಿದ್ಯಾ ಸಾಗರ್ ಅವರ ಜೊತೆ ಮದುವೆಯಾಗಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಮೀನಾ 2022ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಇಂಥಾ ಮೀನಾ ಸದ್ಯ ಹಿಂದಿ ಹೇರಿಕೆಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಈ ಮೂಲಕ ಜನ ಮನ ಗೆದ್ದಿದ್ದಾರೆ.

Well-known South actress Meena got angry at IIFA 2024 saying that Hindi isn t the only language

ಹೌದು, ನಿಮಗೆ ಗೊತ್ತು.. ತ್ರಿಭಾಷಾ ಸೂತ್ರದಡಿಯಲ್ಲಿ ಉತ್ತರ ಭಾರತದವರು ಯಾವತ್ತು ದಕ್ಷಿಣ ಭಾರತದ ಭಾಷೆಗಳನ್ನೂ ಕಲಿಯಲೇ ಇಲ್ಲ. ಇನ್ನೂ ಕರ್ನಾಟಕ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಸಾಧಿಸಿದ್ದಾದರೇನು ಎನ್ನುವುದು ಬೇರೆ ವಿಚಾರವಾದರೂ, ತಮಿಳುನಾಡು ತ್ರಿಭಾಷಾ ಸೂತ್ರವನ್ನು ಯಾವತ್ತು ಒಪ್ಪಿಕೊಳ್ಳಲೇ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿ ಮಾತನಾಡಿ ಎಂದು ಕೇಳಿದ್ದಕ್ಕೆ ತಮಿಳು ನಟಿ ಮೀನಾ ಹಿಂದಿನಾ ಎನ್ನುವ ಪ್ರಶ್ನೆ ಕೇಳಿದ್ದಾರೆ. ಹಿಂದಿಯಲ್ಲಿಯೇ ಮಾತನಾಡಬೇಕೆಂದರೆ ನನ್ಯಾಕೆ ಕರೆದಿದ್ದು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

ಹೌದು, ಅಸಲಿಗೆ ಮೊನ್ನೆಯಷ್ಟೇ ಐಫಾ ಪ್ರಶಸ್ತಿ ಸಮಾರಂಭ ದೂರದ ದುಬೈನಲ್ಲಿ ನಡೆದಿದ್ದು ನಿಮಗೆ ಗೊತ್ತೇ ಇರಬೇಕು. ಈ ಪ್ರಶಸ್ತಿ ಸಮಾರಂಭಕ್ಕೆ ಮೀನಾ ಕೂಡ ತೆರಳಿದ್ದರು. ಇದೇ ಸಮಯದಲ್ಲಿ ಮೀನಾ ಅವರನ್ನು ಮಾತನಾಡಿಸುವ ಪ್ರಯತ್ನವನ್ನು ಅಲ್ಲಿ ತೆರಳಿದ್ದ ಮಾಧ್ಯಮದವರು ಮಾಡಿದ್ದಾರೆ. ಹೀಗಾಗಿಯೇ ಮೀನಾ ಮಾತನಾಡಲು ಮುಂದಾಗಿದ್ದಾರೆ. ತಮಿಳಿನಲ್ಲಿ ತಮ್ಮ ಮಾತುಗಳನ್ನೂ ಆರಂಭಿಸಿದ್ದಾರೆ.

ಆದರೆ ಇದೇ ಸಮಯದಲ್ಲಿ ಮೀನಾ ಮಾತನ್ನು ಮೊಟಕುಗೊಳಿಸಿದ ಕೆಲವರು ತಮಿಳು ಬದಲು ಹಿಂದಿಯಲ್ಲಿ ಮಾತನಾಡುವಂತೆ ಮೀನಾ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರವನ್ನು ನೀಡಿರುವ ಮೀನಾ, ಹಿಂದಿಯಲ್ಲಿ ಮಾತನಾಡಬೇಕಿದ್ರೆ ನನ್ನನ್ಯಾಕೇ ಕರೆದ್ರಿ ಎಂದು ಮರು ಪ್ರಶ್ನೆಯನ್ನು ಹಾಕಿದ್ದಾರೆ. ಹಿಂದಿ ಹೇರಿಕೆಯನ್ನು ಈ ಮೂಲಕ ವಿರೋಧ ಮಾಡುತ್ತಾನೇ ಇಂಗ್ಲೀಷ್‌ನಲ್ಲಿ ಆ ನಂತರ ಮಾತನಾಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗ ಅದ್ಭುತ, ದಕ್ಷಿಣ ಭಾರತದಲ್ಲಿ ಜನ್ಮ ಪಡೆದಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಸದ್ಯ ಎಲ್ಲ ಭಾಷೆಯಲ್ಲಿ ಎಲ್ಲ ಭಾಷೆಯ ತಾರೆಯರು ಅಭಿನಯಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಮತ್ತು ಉತ್ತರ ಎಂಬ ಭೇದ ಭಾವ ಈಗ ಎಲ್ಲ ಎಂದು ಹೇಳಿದ್ದಾರೆ. ಮೀನಾ ಅವರ ಈ ಮನದ ಮಾತು ಸದ್ಯಕ್ಕೆ ಅನೇಕರ ಹೃದಯವನ್ನೂ ಗೆಲ್ಲುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೀನಾ ಮಾತನಾಡಿದ ಮಾತು ವ್ಯಾಪಕ ವೈರಲ್ ಆಗುತ್ತಿದೆ.

ಉಳಿದಂತೆ ಮೀನಾ ಸದ್ಯ ಆನಂದಪುರಂ ಡೈರೀಸ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಲಾಯರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬಹುಕಾಲದ ನಂತರ ಮೀನಾ ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಮರಳಿರುವುದು ವಿಶೇಷ. ಈ ಚಿತ್ರವೊಂದನ್ನು ಹೊರತು ಪಡಿಸಿದರೆ ಮೀನಾ ತಮಿಳಿನಲ್ಲಿ ರೌಡಿ ಬೇಬಿ ಎಂಬ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಕೂಡ ಜಡ್ಜ್ ಸ್ಥಾನವನ್ನು ಅಲಂಕರಿಸಿ ಸ್ಫರ್ಧಿಗಳ ಪರ್ಫಾಮೆನ್ಸ್‌ ನ ಅಳೆದು ತೂಗಿ ತೀರ್ಪು ನೀಡುತ್ತಿದ್ದಾರೆ. ಇನ್ನೂ 2010ರಲ್ಲಿ ಬಂದ ಹೆಂಡ್ತೀರ್ ದರ್ಬಾರ್ ಚಿತ್ರವೇ ಕೊನೆ. ಆ ನಂತರ ಮೀನಾ ಬೆಂಗಳೂರಿನಲ್ಲಿ ವಾಸ ಇದ್ದರೂ ಕೂಡ ಕನ್ನಡದ ಯಾವ ಚಿತ್ರಕ್ಕೂ ಬಣ್ಣ ಹಚ್ಚಿಲ್ಲ.

More from Filmibeat

Read more about: meena iifa kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X