"ಮೇಡಂ ನಿಮ್ಮ ಪತಿಯನ್ನು ನನಗೆ ಕೊಡಿ", ಅಭಿಮಾನಿಯ ವಿಚಿತ್ರ ಬೇಡಿಕೆಗೆ ಜ್ಯೋತಿಕಾ ಏನಂದ್ರು?

ಕಾಲಿವುಡ್ ಹಾಟ್‌ ಕಪರ್ ಸೂರ್ಯ ಹಾಗೂ ಜ್ಯೋತಿಕಾ ಅಭಿಮಾನಿಗಳ ಫೇವರಿಟ್. ಇತ್ತೀಚೆಗೆ ಈ ಜೋಡಿ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹ, ಗಾಸಿಪ್ ಹರಿದಾಡುತ್ತಿದೆ. ಅದಕ್ಕೆ ದಂಪತಿ ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಾ ಬರುತ್ತಿದೆ. ಸೂರ್ಯ- ಜ್ಯೋತಿಕಾ ಡಿವೋರ್ಸ್ ಪಡೆಯುತ್ತಾರಂತೆ, ಮುಂಬೈಗೆ ಹೋಗಿ ನೆಲೆಸುತ್ತಾರಂತೆ, ಹೀಗೆ ಚಿತ್ರ ವಿಚಿತ್ರ ವದಂತಿಗಳು ಕೇಳಿಬರ್ತಿದೆ.

ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯಾಗಿ ಮಿಂಚುತ್ತಿದ್ದ ಸಮಯದಲ್ಲಿ ಸೂರ್ಯ- ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ಮದುವೆ ನಂತರ ಜ್ಯೋತಿಕಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆಕೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಬಾಲಿವುಡ್ ಪ್ರವೇಶಿಸಿದ ಮುಂಬೈ ಬೆಡಗಿ 'ಶೈತಾನ್' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ.

What did actress Jyothika say in response to a Lady fan s strange demand

ಸೂಪರ್ ನ್ಯಾಚುರಲ್ ಹಾರರ್ ಥ್ರಿಲ್ಲರ್ 'ಶೈತಾನ್' ಚಿತ್ರದಲ್ಲಿ ಅಜಯ್ ದೇವಗನ್, ಮಾಧವನ್ ಸಹ ಬಣ್ಣ ಹಚ್ಚಿದ್ದಾರೆ. ಮಾರ್ಚ್ 8ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರ ರೆಸ್ಪಾನ್ಸ್ ಕಂಡು ನಟಿ ಜ್ಯೋತಿಕಾ ಫಿದಾ ಆಗಿದ್ದಾರೆ. ತಮ್ಮ ತಂಡವನ್ನು ಅಭಿನಂದಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಂಡದ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ಜ್ಯೋತಿಕಾ ಜೊತೆ ಪತಿ ಸೂರ್ಯ ಕೂಡ ಇದ್ದಾರೆ.

"ಕೆಲವು ಸಿನಿಮಾಗಳು ನಮ್ಮನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತವೆ. ಆದರೆ 'ಶೈತಾನ್‌' ಸಿನಿಮಾರ ಒಂದು ಸುಂದರ.. ಸಂತೋಷದ ಪಯಣ.. ಹಲವು ನೆನಪುಗಳನ್ನು ನೀಡಿದೆ. ಈ ಸಿನಿಮಾ ಪಯಣದಲ್ಲಿ ನಾನು ಹಲವಾರು ಸ್ನೇಹಿತರನ್ನು ಕಂಡುಕೊಂಡಿದ್ದೇನೆ.. ನನ್ನನ್ನು ಈ ಪಯಣದ ಭಾಗವನ್ನಾಗಿ ಮಾಡಿದ ದೇವ್‌ಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್, ಜಿಯೋ ಸ್ಟುಡಿಯೋಸ್‌ಗೆ ಧನ್ಯವಾದಗಳು. "ಸೈತಾನ್ ತಂಡಕ್ಕೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.

ನಟಿ ಜ್ಯೋತಿಕಾ ಪೋಸ್ಟ್‌ ಸಖತ್ ವೈರಲ್ ಆಗುತ್ತಿದೆ. ಅದಕ್ಕೆ ಮಹಿಳಾ ಅಭಿಮಾನಿಯೊಬ್ಬರು ಮಾಡಿರುವ ಕಾಮೆಂಟ್ ಮತ್ತಷ್ಟು ಗಮನ ಸೆಳೆದಿದೆ. ಜ್ಯೋತಿಕಾ ಬಳಿ ಆಕೆ ವಿಚಿತ್ರ ಬೇಡಿಕೆ ಇಟ್ಟಿದ್ದಾಳೆ. ಈ ಬೇಡಿಕೆಗೆ ಪ್ರತಿಕ್ರಿಯಿಸಿ ಜ್ಯೋತಿಕಾ ಕೂಡ ರಿಪ್ಲೇ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಜ್ಯೋತಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಭಿಮಾನಿ "ಜ್ಯೋತಿಕಾ ಮೇಡಂ, ಸಿಲ್ಲುನು ಒರು ಕಾದಲ್ ಸಿನಿಮಾ ರೀತಿ ನಿಮ್ಮ ಪತಿಯನ್ನು ಒಂದು ದಿನ ನನಗೆ ಸಾಲವಾಗಿ ಕೊಡಿ, ನಾನು 15 ವರ್ಷಗಳಿಂದ ಅವರ ದೊಡ್ಡ ಅಭಿಮಾನಿ" ಎಂದು ಕೇಳಿದ್ದಾರೆ.

What did actress Jyothika say in response to a Lady fan s strange demand

ಅಭಿಮಾನಿಯ ಕಾಮೆಂಟ್‌ಗೆ ರಿಪ್ಲೇ ಮಾಡಿರುವ ನಟಿ ಜ್ಯೋತಿಕಾ "ಅಂತಹವೆಲ್ಲಾ ಸಾಧ್ಯವಿಲ್ಲ" ಎಂದು ಬರೆದಿದ್ದಾರೆ. ಆಕೆಯ ರಿಪ್ಲೇ ನೋಡಿ ಖುಷಿಯಾಗಿದ್ದಾಳೆ. "ನಾನು ಸೂರ್ಯಗೆ ಎಷ್ಟು ದೊಡ್ಡ ಅಭಿಮಾನಿ ಎಂದು ನೀವು ಊಹಿಸಿ ಇರುವುದಿಲ್ಲ. ನನ್ನ ಹೆಸರಿನಲ್ಲಿ ಕೂಡ ಆತನ ಹೆಸರು ಸೇರಿಸಿಕೊಂಡಿದ್ದೇನೆ. ಅವರೇ ನನ್ನ ಮೊದಲ ಲವ್, ಅವರನ್ನು ನಾನು ಎಷ್ಟು ಪ್ರೀತಿಸುತ್ತಿದ್ದೇನೆ, ಆರಾಧಿಸುತ್ತಿದ್ದೇನೆ. ಈ ವಿಷಯ ಅವರಿಗೂ ಹೇಳಿ, ಆದರೂ ನಿಮ್ಮ ಪ್ರೀತಿ ಮುಂದೆ ನನ್ನದು ಎಷ್ಟು ಬಿಡಿ" ಎಂದು ಬರೆದುಕೊಂಡಿದ್ದಾಳೆ.

2006ರಲ್ಲಿ ಸೂರ್ಯ ಹಾಗೂ ಜ್ಯೋತಿಕಾ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ದಂಪತಿ ಮುಂಬೈನಲ್ಲಿ ಬಂಗಲೆ ಖರೀದಿಸಿದ್ದಾರೆ ಎಂದು ವರದಿ ಆಗಿತ್ತು. ಶೀಘ್ರದಲ್ಲೇ ಇಬ್ಬರೂ ಅಲ್ಲಿಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ 'ಶೈತಾನ್' ಬಳಿಕ ಮತ್ತೆರಡು ಹಿಂದಿ ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. 'ಶ್ರೀ', 'ಡಬ್ಬಾಕರ್ಟೆಲ್' ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ.

More from Filmibeat

English summary
Actress Jyothika reply reply comment to a fan goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X