For Quick Alerts
  ALLOW NOTIFICATIONS  
  For Daily Alerts

  ಸೌತ್ ಇಂಡಿಯಾದ ಶ್ರೀಮಂತ ನಟಿ ನಯನತಾರ ಒಟ್ಟು ಆಸ್ತಿ ಮೌಲ್ಯ ಎಷ್ಟು?

  |

  ಪ್ರಸ್ತುತ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಟಿ ನಯನತಾರ ಶ್ರೀಮಂತ ನಟಿ ಎಂಬ ಚರ್ಚೆ ಹುಟ್ಟಿಕೊಂಡಿದೆ. ಎರಡು ದಶಕಗಳಿಂದಲೂ ಸಿನಿಮಾರಂಗದಲ್ಲಿರುವ ನಟಿ ಏಳು-ಬೀಳು ಕಂಡಿದ್ದಾರೆ. ಖಾಸಗಿ ಜೀವನದಲ್ಲಿ ನಯನತಾರ ಬಹಳಷ್ಟು ಟೀಕೆ, ವಿವಾದ, ಸೋಲು ಅನುಭವಿಸಿದರು. ಅದನ್ನೆಲ್ಲ ಮೀರಿ ಗೆದ್ದು ನಿಂತಿರುವ ನಯನತಾರ ಅನೇಕರಿಗೆ ಸ್ಫೂರ್ತಿ.

  ನಯನತಾರ ಸಿನಿ ಜರ್ನಿ ಮುಗಿತು ಎನ್ನುವಷ್ಟರಲ್ಲಿ ಮತ್ತೆ ಎದ್ದು ನಿಂತರು. ನೋಡು ನೋಡುತ್ತಲೇ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿದರು. ಚಿತ್ರದಿಂದ ಚಿತ್ರಕ್ಕೆ ಸಂಭಾವನೆಯೂ ಹೆಚ್ಚಾಯಿತು. ಸಿನಿಮಾ ಆಫರ್‌ಗಳು ಅಧಿಕವಾದವು. ಪ್ರೈವೇಟ್ ವಿಮಾನದಲ್ಲಿ ಸುತ್ತಾಡುವಷ್ಟು ಬೆಳೆದು ನಿಂತಿದ್ದಾರೆ. ಸದ್ಯ ನಯನತಾರ ಅದ್ಧೂರಿ ಮತ್ತು ಐಷಾರಾಮಿ ಜೀವನ ನಡೆಸುತ್ತಿರುವ ಸ್ಟಾರ್ ಹೀರೋಯಿನ್. ಹಾಗಾದ್ರೆ, ನಯನತಾರ ಒಟ್ಟು ಆಸ್ತಿ ಎಷ್ಟಿರಬಹುದು? ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಷಯವನ್ನು 'ಜೂಮ್ ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್' ವರದಿ ಮಾಡಿದೆ. ಮುಂದೆ ಓದಿ....

  ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳುಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳು

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

  ತಮಿಳು ಇಂಡಸ್ಟ್ರಿಯ ನೆಚ್ಚಿನ ನಟಿ ನಯನತಾರ. ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆ. ವರ್ಷಕ್ಕೆ ಏನಿಲ್ಲಾ ಅಂದ್ರೂ ನಾಲ್ಕೈದು ಸಿನಿಮಾ ಪಕ್ಕಾ. 2019ರಲ್ಲಿ 7 ಸಿನಿಮಾ ಮಾಡಿದ್ರೆ, 2020ರಲ್ಲಿ 2 ಚಿತ್ರದಲ್ಲಿ ನಟಿಸಿದ್ದರು. ಪ್ರಸ್ತುತ, ನೆಟ್ರಿಕಣ್, ಅಣ್ಣಾತ್ತೆ ಹಾಗೂ ವಿಜಯ್ ಸೇತುಪತಿ ಜೊತೆ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಚಿತ್ರಕ್ಕೆ 3 ಕೋಟಿ ಚಾರ್ಜ್ ಮಾಡ್ತಾರೆ ಎಂದು ವರದಿಯಾಗಿದೆ.

  ನಯನತಾರ ಒಟ್ಟು ಆಸ್ತಿ ಎಷ್ಟಿದೆ?

  ನಯನತಾರ ಒಟ್ಟು ಆಸ್ತಿ ಎಷ್ಟಿದೆ?

  ನಯನತಾರ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೆಚ್ಚಿದೆ. ಈ ಕುರಿತು ಹಲವು ಮಾಧ್ಯಮಗಳು, ವೆಬ್‌ಸೈಟ್‌ಗಳು ವರದಿ ಮಾಡಿವೆ. ಈ ಎಲ್ಲವನ್ನು ಸಂಗ್ರಹಿಸಿದಂತೆ ನಯನತಾರ ಒಟ್ಟು ಆಸ್ತಿ ಮೌಲ್ಯ ಸುಮಾರು 70 ಕೋಟಿ ಎಂದು ಅಂದಾಜಿಸಿ ಜೂಮ್ ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ಸುದ್ದಿ ಪ್ರಕಟಿಸಿದೆ.

  ಎರಡು ದುಬಾರಿ ಕಾರ್ ಇದೆ

  ಎರಡು ದುಬಾರಿ ಕಾರ್ ಇದೆ

  ನಯನತಾರ ಬಳಿ ಎರಡು ದುಬಾರಿ ಕಾರು ಇದೆ. ಅದರಲ್ಲಿ ಒಂದು ಆಡಿ ಕ್ಯೂ 7. ಈ ಕಾರಿನ ಬೆಲೆ (ಆನ್‌ ರೋಡ್) 80 ಲಕ್ಷ. ಮತ್ತೊಂದು ಕಾರು ಬಿಎಂಡಬ್ಲ್ಯೂ ಎಕ್ಸ್‌ 5. ಈ ಕಾರಿನ ಬೆಲೆ 75.21 ಲಕ್ಷ. ಇದು ಮೂಲಬೆಲೆ. ವಿಶೇಷತೆಗಳೊಂದಿಗೆ ಕಾರಿನ ಬೆಲೆ ಇನ್ನು ಹೆಚ್ಚಿರಬಹುದು.

  ಕೇರಳ, ಚೆನ್ನೈನಲ್ಲಿ ದುಬಾರಿ ಮನೆ ಇದೆ

  ಕೇರಳ, ಚೆನ್ನೈನಲ್ಲಿ ದುಬಾರಿ ಮನೆ ಇದೆ

  ನಯನತಾರ ಕೇರಳದ ಸ್ವಗ್ರಾಮದಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ನಯನತಾರ ಕುಟುಂಬ ಇದೆ. ನಯನತಾರ ಮೂಲತಃ ಕೇರಳದ ತಿರುವಳ್ಳಾದವರು. ಜೊತೆಗೆ ಚೆನ್ನೈನಲ್ಲಿ ದುಬಾರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಬಹುತೇಕ ಸಮಯ ಇದೇ ಮನೆಯಲ್ಲಿರುತ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ಬಾಯ್‌ಫ್ರೆಂಡ್ ವಿಘ್ನೇಶ್ ಜೊತೆ ನಯನತಾರ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರು.

  ಖಾಸಗಿ ವಿಮಾನದಲ್ಲಿ ಸಂಚಾರ

  ಖಾಸಗಿ ವಿಮಾನದಲ್ಲಿ ಸಂಚಾರ

  ನಯನತಾರ ಹಾಗೂ ವಿಘ್ನೇಶ್ ಶಿವನ್ ಖಾಸಗಿ ವಿಮಾನದಲ್ಲಿ ಸಂಚರಿಸುವ ಫೋಟೋಗಳು ಬಹಿರಂಗವಾಗಿದ್ದವು. ಶೂಟಿಂಗ್ ವೇಳೆ ಚೆನ್ನೈನಿಂದ ಹೈದರಾಬಾದ್‌ ಹಾಗೂ ಹೈದರಾಬಾದ್‌ನಿಂದ ಚೆನ್ನೈಗೆ ಹಿಂತಿರುಗಿದ ಸಂದರ್ಭದಲ್ಲಿಯೂ ಖಾಸಗಿ ವಿಮಾನದಲ್ಲಿ ಸಂಚಾರ ಮಾಡಿದ್ದರು. ಇದನ್ನು ಗಮನಿಸಿದರೆ ನಯನತಾರ ಜೀವನ ಶೈಲಿ ಎಷ್ಟರ ಮಟ್ಟಿಗೆ ಅದ್ಧೂರಿ, ದುಬಾರಿಯಿಂದ ಕೂಡಿದೆ ಎನ್ನುವುದು ತಿಳಿಯುತ್ತದೆ.

  ಕೂಡಿಟ್ಟ ಹಣವನ್ನು ಒಳ್ಳೆ ರೀತಿ ಉಪಯೋಗಿಸಲು ಮುಂದಾದ ಸುದೀಪ್ | Filmibeat Kannada
  ಲವ್ ಬ್ರೇಕ್ ಅಪ್, ವಿವಾದ

  ಲವ್ ಬ್ರೇಕ್ ಅಪ್, ವಿವಾದ

  ನಯನತಾರ ಸಿನಿಮಾ ಜೀವನ ಬಹಳ ಚೆನ್ನಾಗಿ ಸಾಗಿದೆ. ಆದರೆ, ಖಾಸಗಿ ಜೀವನದಲ್ಲಿ ಲೇಡಿ ಸೂಪರ್ ಸ್ಟಾರ್ ಬಹಳಷ್ಟು ನೋವು ಅನುಭವಿಸಿದ್ದಾರೆ. ನಟ ಸಿಂಬು ಜೊತೆ ಪ್ರೀತಿಯಲ್ಲಿದ್ದರು. ಮದುವೆ ಆಗ್ತಾರೆ ಎನ್ನುವಷ್ಟು ವಿಷಯ ಚರ್ಚೆಯಲ್ಲಿತ್ತು. ಆದರೆ, ಬ್ರೇಕ್ ಅಪ್ ಆಯಿತು. ಬಳಿಕ ನಿರ್ದೇಶಕ-ನಟ ಪ್ರಭುದೇವ ಜೊತೆ ಮದುವೆ ಮಾತುಕತೆ ಆಗಿದೆ ಎನ್ನುವಷ್ಟು ಆತ್ಮೀಯತೆ ಕಂಡು ಬಂದಿತ್ತು. ಆ ಸಂಬಂಧವೂ ಗಟ್ಟಿಯಾಗಲಿಲ್ಲ. ಈಗ ವಿಘ್ನೇಶ್ ಶಿವನ್ ಜೊತೆ ಲೀವ್-ಇನ್-ಲೈಫ್ ಕಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Actress Nayanthara is fondly called the lady superstar of Kollywood. Here is the Nayanthara current net worth and lifestyle that will leave you in awe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X