'ಸರಳ ಜೀವಿ' ವಿಜಯ್ ಧರಿಸಿರುವ ಈ ಚಪ್ಪಲಿಯ ಬೆಲೆ ಎಷ್ಟು ಗೊತ್ತೆ?

By ಫಿಲ್ಮಿಬೀಟ್ ಡೆಸ್ಕ್

ನಟ ವಿಜಯ್‌ ಅತಿ ದೊಡ್ಡ ಮೊತ್ತದ ಸಂಭಾವನೆ ಪಡೆವ ಭಾರತದ ಕೆಲವೇ ಸ್ಟಾರ್ ನಟರಲ್ಲಿ ಒಬ್ಬರು. ದಕ್ಷಿಣ ಭಾರತದಲ್ಲಿಯಂತೂ ವಿಜಯ್‌ ಅವರಷ್ಟು ಸಂಭಾವನೆಯನ್ನು ರಜನೀಕಾಂತ್ ಸಹ ಪಡೆಯುವುದಿಲ್ಲ ಎನ್ನಲಾಗುತ್ತದೆ.

ಭಾರಿ ಸಂಭಾವನೆ ಪಡೆದರೂ ಸಹ ವಿಜಯ್ ತಮ್ಮ ಸಿಂಪ್ಲಿಸಿಟಿಗೆ, ಸರಳತೆಗೆ ಜನಪ್ರಿಯರು. ಅದು ಹೌದೆಂದೂ ಎನಿಸುತ್ತದೆ. ಯಾವುದೇ ಕಾರ್ಯಕ್ರಮಕ್ಕೆಂದು ವಿಜಯ್ ಬಂದಾಗ ಬಹಳ ಸರಳವಾಗಿ ಬರುತ್ತಾರೆ. ಡಿಸೈನರ್ ಉಡುಪುಗಳಾಗಲಿ, ಸೂಟ್‌ಗಳಾಗಲಿ ಧರಿಸದೆ, ಸಾಧಾರಣ ಶರ್ಟ್-ಪ್ಯಾಂಟ್ ಚಪ್ಪಲಿ ಧರಿಸಿ ವಿಜಯ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾರೆ.

ಆದರೆ ವಿಜಯ್‌ರ ಈ 'ಸರಳತೆ' ಸಹ ಅದೆಷ್ಟು ದುಬಾರಿ ಎಂಬುದು ಹೆಚ್ಚು ಜನರಿಗೆ ಅರಿವಿರಲಿಕ್ಕಿಲ್ಲ. ಸಾಮಾನ್ಯ ಬಟ್ಟೆ, ಚಪ್ಪಲಿಯಂತೆ ಕಾಣುವ ವಿಜಯ್‌ ಧರಿಸುವ ಬಟ್ಟೆ, ಚಪ್ಪಲಿಗಳು ಸಹ ಭಾರಿ ದುಬಾರಿ ಆಗಿವೆ.

ವೈರಲ್ ಆಗಿದೆ ವಿಜಯ್ ಚಿತ್ರ

ವೈರಲ್ ಆಗಿದೆ ವಿಜಯ್ ಚಿತ್ರ

ಇತ್ತೀಚೆಗೆ ನಟ ವಿಜಯ್‌, ಅಂಗವಿಕಲ ಅಭಿಮಾನಿಯೊಬ್ಬನನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಫೋಟೊಕ್ಕೆ ಫೋಸ್ ನೀಡಿರುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಸಹ ವಿಜಯ್ ಬಹಳ ಸರಳವಾಗಿ ಒಂದು ಸಾಮಾನ್ಯ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಕಾಲಿಗೆ ಸಾಮಾನ್ಯ ಎನಿಸುವ ಸ್ಲಿಪ್ಪರ್ ಧರಿಸಿದ್ದಾರೆ. ನೋಡಲು ಬಹಳ ಸಾಮಾನ್ಯದಂತೆ ಕಾಣುವ ಆ ಚಪ್ಪಲಿಯ ಬೆಲೆ ಕಡಿಮೆಯೇನಲ್ಲ.

ವಿಜಯ್ ಧರಿಸಿರುವ ಚಪ್ಪಲಿಯ ಬೆಲೆ ಎಷ್ಟು?

ವಿಜಯ್ ಧರಿಸಿರುವ ಚಪ್ಪಲಿಯ ಬೆಲೆ ಎಷ್ಟು?

ಸಾಮಾನ್ಯ ವ್ಯಕ್ತಿ ಒಂದು ಜೊತೆ ಚಪ್ಪಲಿಗೆ ಕೊಡಬಹುದಾದ ಹಣವೆಷ್ಟು? 500 ರಿಂದ ಆರಂಭಿಸಿ ಸುಮಾರು 1000 ಅಥವಾ ಇನ್ನೂ ತುಸು ಹಣ ಹೆಚ್ಚಿತ್ತೆಂದರೆ 2000 ವರೆಗೂ ಕೊಡಬಹುದು. ಆದರೆ ವಿಜಯ್ ಧರಿಸಿರುವ ಚಪ್ಪಲಿಯ ಬೆಲೆ ಬರೋಬ್ಬರಿ 6000 ರುಪಾಯಿಗಳು. ವಿಜಯ್ ಧರಿಸಿರುವುವು ಬಿರ್ಕೆನ್ ಸ್ಟಾಕ್ ಹೆಸರಿನ ಬ್ರ್ಯಾಂಡ್‌ನ ಚಪ್ಪಲಿಗಳು, ಭಾರತೀಯರ ಸ್ಟೈಲ್‌ಗೆ ಹೊಂದಿಕೆ ಆಗುವ ಗುಣಮಟ್ಟದ ಚಪ್ಪಲಿಗಳನ್ನು ಈ ಬ್ರ್ಯಾಂಡ್ ತಯಾರಿಸುತ್ತದೆ. ವಿಜಯ್ ಧರಿಸಿರುವ ಚಪ್ಪಲಿಯೆ ಹೆಸರು 'ಮಯಾರಿ ಬಿರ್ಕೊ' ಎಂದು.

ವಿಜಯ್ ಧರಿಸಿರುವ ಶರ್ಟ್-ಪ್ಯಾಂಟ್‌ನ ಬೆಲೆ?

ವಿಜಯ್ ಧರಿಸಿರುವ ಶರ್ಟ್-ಪ್ಯಾಂಟ್‌ನ ಬೆಲೆ?

ಅದೇ ಚಿತ್ರದಲ್ಲಿ ವಿಜಯ್ ಧರಿಸಿರುವ ಶರ್ಟ್ ಹಾಗೂ ಪ್ಯಾಂಟಿನ ಬೆಲೆಯೂ ಕಡಿಮೆ ಇಲ್ಲ ಎನ್ನಲಾಗುತ್ತಿದೆ. ವಿಜಯ್ ಧರಿಸಿರುವ ಶರ್ಟ್‌ನ ಅಂದಾಜು ಬೆಲೆ ಸುಮಾರು ಹತ್ತು ಸಾವಿರವು, ಪ್ಯಾಂಟಿನ ಬೆಲೆ ಸುಮಾರು ಹದಿನೈದು ಸಾವಿರವೂ ಇರಬಹುದೆಂಬುದು ಫ್ಯಾಷನ್ ತಜ್ಞರ ಊಹೆ. ಅಸಲಿಗೆ ಈ ಬೆಲೆ ತುಸು ಕಡಿಮೆಯೇ ಬಾಲಿವುಡ್‌ನ ಸಾಧಾರಣ ನಟರೂ ಸಹ ಲಕ್ಷಾಂತರ ಮೌಲ್ಯದ ಉಡುಗೆಗಳನ್ನು ಹಾಕಿ ಪಾಪರಾಟ್ಜಿಗಳಿಗೆ ಫೋಸು ಕೊಡುವಾಗ ವಿಜಯ್ ಹತ್ತು ಸಾವಿರ ಬೆಲೆ ಯ ಶರ್ಟ್‌ ಧರಿಸಿದರೆ ಅದೇನು ಮಹಾ ದೊಡ್ಡದಲ್ಲ ಬಿಡಿ. ಎಷ್ಟು ಬೆಲೆಯ ಉಡುಗೆಯಾದರೂ ಧರಿಸಲಿ ವಿಜಯ್‌ ಸರಳತೆಯನ್ನು ತುಸುವಾದರೂ ಆಚರಿಸುತ್ತಾರೆ, ಮಾನವೀಯ ಗುಣಗಳನ್ನು ಆಗಾಗ್ಗೆ ಪ್ರದರ್ಶಿಸುತ್ತಿರುತ್ತಾರೆ ಎಂಬುದು ಖುಷಿಯ ಸಂಗತಿ.

'ವಾರಿಸು' ಬಿಡುಗಡೆಗೆ ಸಜ್ಜು

'ವಾರಿಸು' ಬಿಡುಗಡೆಗೆ ಸಜ್ಜು

ವಿಜಯ್‌ರ ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ವಿಜಯ್‌ ನಟನೆಯ ತಮಿಳು ಸಿನಿಮಾ 'ವಾರಿಸು' ಬಹುತೇಕ ಪೂರ್ಣಗೊಂಡಿದ್ದು ಮುಂದಿನ ತಿಂಗಳು ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ತೆಲುಗಿನ ಸ್ಟಾರ್ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಸಿನಿಮಾವು ತೆಲುಗು-ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಆ ಸಿನಿಮಾದ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. ಈ ಸಿನಿಮಾ ವಿಜಯ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇಂಗ್ಲೀಷ್ ಸಿನಿಮಾದಿಂದ ಸ್ಪೂರ್ತಿ ಪಡೆದ ಸಿನಿಮಾ ಇದು ಎನ್ನಲಾಗುತ್ತಿದೆ.

More from Filmibeat

English summary
What is the price of slippers of Vijay which he wore in his viral pic of he lifting a disabled man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X