ಕಾರ್ತಿ ನಟನೆಯ ಚೊಚ್ಚಲ ಚಿತ್ರ ಪರುತ್ತಿವೀರನ್ ನೋಡಿ ಅಣ್ಣ ಸೂರ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ತಮಿಳು ಚಿತ್ರರಂಗದ ಖ್ಯಾತ ಅಣ್ಣ- ತಮ್ಮ ಜೋಡಿಗಳಲ್ಲಿ ಮೊದಲಿಗೆ ಬರುವ ಹೆಸರು ಸೂರ್ಯ ಮತ್ತು ಕಾರ್ತಿ ಅವರದ್ದು. ಸೌತ್ ಇಂಡಸ್ಟ್ರಿಯಲ್ಲಿ ಫೇಮಸ್ ಜೋಡಿ ಇದಾಗಿದ್ದು, ಇಲ್ಲಿಯವರೆಗೆ ಒಟ್ಟಾಗಿ ಒಂದು ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೂ, ತಮ್ಮ ಬಾಂಧವ್ಯದಿಂದ ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

ಸೂರ್ಯ ಹಲವು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಆದರೆ, ನಟ ಕಾರ್ತಿ ಆಮೇಲೆ ಸಿನಿಮಾಗಳಿಗೆ ಕಾಲಿಟ್ಟವರು. ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಗೌತಮ್ ವಾಸುದೇವ್ ಮೆನನ್ ಅವರೊಂದಿಗಿನ ಸಂದರ್ಶನದಲ್ಲಿ, ಕಾರ್ತಿ ತಮ್ಮ ಚೊಚ್ಚಲ ಚಿತ್ರ ಪರುತಿವೀರನ್ ಬಗ್ಗೆ ಮಾತನಾಡಿದ್ದಾರೆ.

suryas-reaction-after-seeing-karthis-debut

ಚೊಚ್ಚಲ ಚಿತ್ರ ಪರುತಿವೀರನ್ ಬಗ್ಗೆ ಮಾತನಾಡಿದ ಕಾರ್ತಿ

ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ ನಿರ್ಮಾಣ ಸಂಸ್ಥೆಯಾದ ಒಂದ್ರಾಗಾ ಎಂಟರ್‌ಟೈನ್‌ಮೆಂಟ್‌ನ ಚಾನೆಲ್‌ನಲ್ಲಿ ಹಾಕಲಾಗಿರುವ ಸಂದರ್ಶನದಲ್ಲಿ ನಟ ಕಾರ್ತಿ ತಮ್ಮಮೊದಲ ಸಿನಿಮಾ ಮತ್ತು ಸಿನಿಮಾ ನೋಡಿ ಅಣ್ಣ ಸೂರ್ಯ ಅವರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಹೇಳಿದ್ದಾರೆ.

ವಾರಣಂ ಆಯಿರಂ ನಿರ್ದೇಶಕ ಗೌತಮ್ ವಾಸುದೇವ್ ಮೆನನ್, ಕಾರ್ತಿ ಅವರನ್ನು ತಮ್ಮ ಮೊದಲ ಚಿತ್ರವನ್ನು ನೋಡಿ ಸೂರ್ಯ ಏನು ಹೇಳಿದ್ದರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾರ್ತಿ, ಅಣ್ಣ ಸೂರ್ಯ ಅವರು ತಮ್ಮ ಸಿನಿಮಾವನ್ನು ಬಹಳ ತಡವಾಗಿ ನೋಡಿದ್ದಾರೆ ಎಂದು ಉತ್ತರಿಸಿದ್ದಾರೆ.

ಸಿನಿಮಾ ನೋಡಿ ತಮ್ಮನನ್ನು ತಬ್ಬಿಕೊಂಡಿದ್ದ ನಟ ಸೂರ್ಯ

ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ತೋಡಗಿಸಿಕೊಂಡಿದ್ದ ನಟ ಸೂರ್ಯ ತಮ್ಮನ ಮೊದಲ ಸಿನಿಮಾ ಪರುತಿವೀರನ್ ಅನ್ನು ತಡವಾಗಿ ನೋಡಿದ್ದರಂತೆ. ಚಿತ್ರ ನೋಡಿದ ನಂತರ ಕಾರ್ತಿ ಅವರ ಅಭಿನಯದಿಂದ ಮಂತ್ರಮುಗ್ಧರಾಗಿದ್ದರು ಮತ್ತು ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರಂತೆ.

suryas-reaction-after-seeing-karthis-debut

"ನನಗೆ ಸ್ಪಷ್ಟವಾಗಿ ನೆನಪಿದೆ... ನಾನು ಸುಮ್ಮನೆ ಮಲಗಿದ್ದೆ. ಏಕೆಂದರೆ ಚಿತ್ರ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂದು ನನಗೆ ಖಚಿತವಿಲ್ಲ. ಬಿಡುಗಡೆಯ ದಿನಾಂಕದ ಬಗ್ಗೆ ತುಂಬಾ ಗೊಂದಲವಿತ್ತು. ಎರಡು ಬಾರಿ ಬಿಡುಗಡೆ ಕೂಡ ಮುಂದೂಡಲ್ಪಟ್ಟಿತು. ಕೊನೆಗೆ ಅಣ್ಣ ಬಂದು, ಚಿತ್ರ ಬಿಡುಗಡೆಯಾಗುವುದಕ್ಕೆ ಅಗತ್ಯವಿರುವ ಎಲ್ಲಾ ಹಣವನ್ನು ಹಾಕಿದರು. ಆದರೆಮ ಅವರು ಕೊನೆಗೂ ಚಿತ್ರ ನೋಡಿದ್ದು ತಡವಾಗಿ. ಆಮೇಲೆ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡರು. ಬಳಿಕ ಮುಗುಳ್ನಕ್ಕು, 'ಏನ್ ಮಾಡ್ತಿದ್ದೀಯ!?' ಎಂದು ಶ್ಲಾಘಿಸಿದರು" ಎಂದು ಕಾರ್ತಿ ಹೇಳಿದ್ದಾರೆ.

ಕಾರ್ತಿ ಅಭಿನಯದ ಚೊಚ್ಚಲ ಸಿನಿಮಾ ಪರುತಿವೀರನ್

ಪರುತಿವೀರನ್ 2007 ರ ರೊಮ್ಯಾಂಟಿಕ್ ಚಿತ್ರವಾಗಿದ್ದು, ಅಮೀರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಾರ್ತಿ ಪ್ರಿಯಾಮಣಿ, ಪೊನ್ವಣ್ಣನ್, ಸಂಪತ್ ರಾಜ್, ಸರವಣನ್ ಮತ್ತು ಇನ್ನೂ ಅನೇಕರು ಇದ್ದಾರೆ. ವಿಮರ್ಶಾತ್ಮಕವಾಗಿ ಮತ್ತು ಬಾಕ್ಸ್ ಆಪೀಸ್‌ನಲ್ಲಿ ಕಮಾಲ್ ಮಾಡಿದ್ದ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ವಕಾರ್ತಿ ಅವರ ಮೊದಲ ಚಿತ್ರವಾಗಿದ್ದರೂ ಸಹ ಅವರ ಒರಟಾದ ಮತ್ತು ಪ್ರಬುದ್ಧ ಅಭಿನಯಕ್ಕಾಗಿ ಸಕತ್ ಸದ್ದು ಮಾಡಿ, ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಇನ್ನು, ಕಾರ್ತಿ ಅವರ 'ಜಪಾನ್' ನವೆಂಬರ್ 10 ರಂದು ಥಿಯೇಟರ್‌ಗಳಿಗೆ ಅಪ್ಪಳಿದೆ. ಚಿತ್ರದಲ್ಲಿ ಅನು ಇಮ್ಯಾನುಯೆಲ್, ಕೆಎಸ್ ರವಿಕುಮಾರ್, ಬಾವ ಚೆಲ್ಲದೊರೈ, ಜಿತನ್ ರಮೇಶ್ ಇನ್ನೂ ಅನೇಕರು ಇದ್ದಾರೆ. ಚಿತ್ರಕ್ಕೆ ಮಿಶ್ರ ವಿಮರ್ಶೆಗಳು ಬಂದಿದ್ದು, ಎಂದಿನಂತೆ ಕಾರ್ತಿ ಅಭಿನಯವನ್ನು ವಿಮರ್ಶಕರು ಮತ್ತು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

More from Filmibeat

English summary
This is Surya's reaction after seeing Karthi's debut movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X