ಪ್ರೀತಿಸಿದ ಹುಡುಗಿ ಬೇರೆ ಹುಡುಗನನ್ನು ಮದುವೆ ಆದಾಗ ಶಿವಕಾರ್ತಿಕೇಯನ್ ಸಂಭ್ರಮಿಸಿದ್ಯಾಕೆ?
ಯಾವುದೇ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಆದರೂ ಪ್ರೀತಿ ಹುಟ್ಟಿರುತ್ತದೆ. ನಿಜವಾದ ಪ್ರೀತಿ ಆಗುವುದು ಒಮ್ಮೆ ಮಾತ್ರ ಎನ್ನುವವರು ಇದ್ದಾರೆ. ಈ ಪ್ರೀತಿ ಒಂಥರ ಕಚಗುಳಿ ಎನ್ನುವ ಹಾಡೇ ಇದೆ. ಹರೆಯಕ್ಕೆ ಕಾಲಿಟ್ಟ ಗಂಡು ಹೆಣ್ಣಿನ ಮೇಲೆ ಅಥವಾ ಹೆಣ್ಣು ಗಂಡಿನ ಮೇಲೆ ಆಕರ್ಷಣೆಗೆ ಒಳಗಾಗುವುದು, ಬದುಕಿದರೆ ಅವರೊಟ್ಟಿಗೆ ಎಂದು ನಿರ್ಧರಿಸಿ ಪ್ರೀತಿಸಲು ಆರಂಭಿಸುತ್ತಾರೆ.
ಹೀಗೆ ಪ್ರೀತಿಸಿದ ಎಲ್ಲರೂ ತಮ್ಮ ಪ್ರೀತಿಯನ್ನು ಪ್ರೀತಿಸಿದವರ ಬಳಿ ಹೇಳಿಕೊಳ್ಳುವುದಿಲ್ಲ. ಹಾಗಾಗಿ ಅದು ಒನ್‌ಸೈಡ್ ಲವ್ ಆಗಿಯೇ ಉಳಿದುಬಿಡುತ್ತದೆ. ಇಂತಹ ಒನ್‌ಸೈಡ್ ಲವ್‌ಗಳು ಸಾಕಷ್ಟು ಜನರ ಜೀವನದಲ್ಲಿ ಬಂದು ಹೋಗಿರುತ್ತದೆ. ಬರೀ ಕಣ್ಣೋಟದಲ್ಲಿ ಉಳಿದುಬಿಡುತ್ತದೆ. ಕೆಲವೊಮ್ಮೆ ಯಾವುದೋ ಕಾರಣಕ್ಕೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಕೊನೆವರೆಗೂ ಆ ಪ್ರೀತಿಯನ್ನು ತಮ್ಮ ಹೃದಯದಲ್ಲಿ ಮುಚ್ಚಿಟ್ಟುಕೊಂಡುಬಿಡುತ್ತಾರೆ. ಸಿನಿಮಾ ತಾರೆಯರು ಕೂಡ ಇದಕ್ಕೆ ಹೊರತಲ್ಲ.

ಬಾಹುಬಲಿ ಪ್ರಭಾಸ್ ಲವ್ ಕೂಡ ರಿಜೆಕ್ಟ್ ಆಗಿತ್ತು ಅಂದರೆ ಅಚ್ಚರಿ ಎನಿಸಬಹುದು. ಎಷ್ಟೋ ಜನ ನಮ್ಮ ಪ್ರೀತಿ ಹೇಳಿದರೆ ರಿಜೆಕ್ಟ್ ಮಾಡಿಬಿಡುತ್ತಾರೆ ಎನ್ನುವ ಭಯದಲ್ಲಿ ಪ್ರಪೋಸ್ ಮಾಡದೇ ಇದ್ದು ಬಿಡುತ್ತಾರೆ. ತಮಿಳು ನಟ ಶಿವ ಕಾರ್ತಿಕೇಯನ್ ಕೆಲ ದಿನಗಳ ಹಿಂದೆ ತಮ್ಮ ಕಾಲೇಜ್ ಡೇಟ್ ಲವ್‌ಸ್ಟೋರಿ ಬಗ್ಗೆ ಹೇಳಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಅವರದ್ದು ಕೂಡ ಒನ್‌ಸೈಡ್ ಲವ್ ಸ್ಟೋರಿ ಆಗಿತ್ತು.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂಧು ಸಕ್ಸಸ್ ಕಂಡವರು ಶಿವಕಾರ್ತಿಕೇಯನ್. ಮಿಮಿಕ್ರಿ ಕಲಾವಿದನಾಗಿ, ಕಿರುತೆರೆ ನಿರೂಪಕನಾಗಿ ಬಂದ ಶಿವ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಕಳೆದ ವರ್ಷ ಬಂದ 'ಅಮರನ್' ಸಿನಿಮಾ ಬ್ಲಾಕ್‌ಸ್ಟರ್ ಹಿಟ್ ಆಗಿ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ವೀರಯೋಧ ಉನ್ನಿ ಮುಕುಂದನ್ ಜೀವನಾಧರಿತ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಕನ್ನಡದ 'ವಜ್ರಕಾಯ' ಚಿತ್ರದ ಹಾಡೊಂದರಲ್ಲಿ ಅವರು ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದರು.

ಕೆಲ ದಿನಗಳ ಹಿಂದೆ ಅಭಿಮಾನಿಗಳ ಪ್ರಶ್ನೆಗಳಿಗೆ ಶಿವಕಾರ್ತಿಕೇಯನ್ ಉತ್ತರಿಸಿದ್ದಾರೆ. ಈ ಬಗ್ಗೆ ಮಹಿಳಾ ಅಭಿಮಾನಿಯೊಬ್ಬರು ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ರಹಸ್ಯ ಹೇಳಿ ಎಂದು ಕೇಳಿದ್ದರು. ಶಿವ ಮಾತನಾಡಿ "ನನಗೆ ಒನ್‌ಲೈಡ್ ಲವ್‌ವೊಂದು ಇತ್ತು. ಆದರೆ ಕೆಲವೇ ದಿನಗಳಲ್ಲಿ ಅದು ಕರಗಿ ಹೋಗಿತ್ತು. ಯಾಕಂದರೆ ಆಕೆ ಬೇರೆ ಹುಡುಗನ ಜೊತೆ ಕಮೀಟ್ ಆಗಿಬಿಟ್ಟರು. ಬಹುಶಃ ಅದೇ ನನ್ನ ಜೀವನದ ರಹಸ್ಯ. ನಮ್ಮ ಕಾಲೇಜಿನ ಕೆಲ ಸ್ನೇಹಿತರಿಗೆ ಮಾತ್ರ ಗೊತ್ತಿತ್ತು" ಎಂದಿದ್ದಾರೆ.
"ನನಗೆ ಭಯ ಜಾಸ್ತಿ ಇತ್ತು. ನಿಮ್ಮ ಮಗ ಹೀಗೆ ಮಾಡಿಬಿಟ್ಟ ಎಂದು ಮನೆಯಲ್ಲಿ ಪೋಷಕರಿಗೆ ಹೇಳಿದರೆ ಸಮಸ್ಯೆ ಎಂದು ಯಾವುದಕ್ಕೂ ಮುಂದೆ ಹೋಗುತ್ತಿರಲಿಲ್ಲ. ಯಾವುದೇ ತರಲೆ, ತಂಟೆ ಮಾಡುತ್ತಿರಲಿಲ್ಲ. ನಾನು ಟಿವಿಯಲ್ಲಿ ನಿರೂಪಕನಾಗಿದ್ದಾಗ ಮಾಲ್‌ವೊಂದರಲ್ಲಿ ದೂರದಿಂದ ಆ ಹುಡುಗಿಯನ್ನು ಮತ್ತೆ ನೋಡಿದ್ದೆ. ಆದರೆ ಮಾತನಾಡಲಿಲ್ಲ. ಆಕೆ ಬೇರೆ ಹುಡುಗನನ್ನು ಮದುವೆ ಆಗಿದ್ದಳು. ಆಗ ಪ್ರೀತಿಸಿದ್ದ ಹುಡುಗ ಅಲ್ಲ, ಅಬ್ಬಾ ಅವನಿಗೂ ಅವಳು ಸಿಗಲಿಲ್ಲ, ಎಂದು ಸಮಾಧಾನದಿಂದ ಖುಷಿಪಟ್ಟಿದ್ದೆ. ಅವಳ ಮದುವೆ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಚರ್ಚಿಸಲಿಲ್ಲ, ಕಾರಣ ಆಕೆ ನಮ್ಮ ಕ್ಲಾಸ್ ಹುಡುಗಿ ಅಲ್ಲ, ಬೇರೆ ಕ್ಲಾಸ್ ಹುಡುಗಿ" ಅಂತ ಹೇಳಿ ಶಿವಕಾರ್ತಿಕೇಯನ್ ನಕ್ಕಿದ್ದಾರೆ.
'ವರುತಪದಾತ ವಲಿಬರ್ ಸಂಘಂ', 'ರೆಮೊ', 'ಡಾಕ್ಟರ್', 'ಡಾನ್', 'ಅಯಲಾನ್' ರೀತಿಯ ಹಿಟ್ ಸಿನಿಮಾಗಳಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ. 'ಅಮರನ್' ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿ ನೇಮು ಫೇಮು ತಂದುಕೊಟ್ಟಿದೆ.


Click it and Unblock the Notifications











