ವಿಚ್ಚೇದನದ ವಿವಾದ ; ವಿಜಯ್ ಬೆನ್ನ ಹಿಂದೆ ಬಿದ್ದ ಕಟ್ಟಪ್ಪನ ಮಗಳು - ದಿವ್ಯಾ ಸತ್ಯರಾಜ್‌ಗೆ ಉತ್ತರ ಕೊಡ್ತಾರಾ ದಳಪತಿ ?
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ.
ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ. ಈಗಾಗಲೇ ತಮ್ಮ ಪಕ್ಷದ ಧ್ವಜ ಮತ್ತು ಹೆಸರನ್ನು ಬಹಿರಂಗ ಮಾಡಿರುವ ವಿಜಯ್ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ರಣರಂಗದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ. ಈಗಾಗಲೇ ತಮ್ಮ ಪಕ್ಷದ ಧ್ವಜ ಮತ್ತು ಹೆಸರನ್ನು ಬಹಿರಂಗ ಮಾಡಿರುವ ವಿಜಯ್ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ರಣರಂಗದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಆದರೆ, ಅದು ಸುಲಭ ಅಲ್ಲ. ಯಾಕೆಂದರೆ ತಮ್ಮನ್ನು ತಾವು ಬುದ್ದಿವಂತ ಎಂದು ವಿಜಯ್ ಅಂದುಕೊಂಡಿರಬಹುದು. ಆದರೆ, ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ವ್ಯಕ್ತಿ ವಿಜಯ್.
ಇನ್ನೂ ತಮಿಳುನಾಡಿನ ರಾಜಕಾರಣವೂ ನಾವು-ನೀವು ಅಂದುಕೊಂಡತೆ ಅಲ್ಲ. ಅದಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ಯ ವಿಜಯ್ ಸುತ್ತ ವಿಚ್ಚೇದನದ ವಿವಾದದ ಹುತ್ತ ಬೆಳೆದಿದೆ. ಫ್ಯಾಮಿಲಿ ಮ್ಯಾನ್ ಎಂಬ ಇಮೇಜ್ ಡ್ಯಾಮೇಜ್ ಆಗಿದೆ. ಸಂಗೀತಾ ಉದುರಿಸಿದ ಈ ಡಿವೋರ್ಸ್ ದಾಳದಿಂದ ವಿರೋಧ ಪಕ್ಷದವರ ಕೈಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ.
ನೋ ಡೌಟ್ ನಡೆದ ಮತ್ತು ನಡೆಯುತ್ತಿರುವ ಈ ವಿದ್ಯಮಾನಗಳಿಂದ ವಿಜಯ್ ವಿಚಲಿತರಾಗಿಯೇ ಆಗಿರುತ್ತಾರೆ. ಹೀಗಿರುವಾಗ ಇದೀಗ ಇಳಯ ದಳಪತಿ ವಿಜಯ್ ಬೆನ್ನ ಹಿಂದೆ ಕಟ್ಟಪ್ಪನ ಮಗಳು ಅಲಿಯಾಸ್ ನಟ ಸತ್ಯರಾಜ್ ಅವರ ಮಗಳು ದಿವ್ಯಾ ಬಿದ್ದಿದ್ದಾರೆ. ರಾಜಕೀಯಕ್ಕೆ ಬರುತ್ತಿದ್ದೀರಲ್ಲ, ಬರುವ ಮುಂಚೆ ನಿಮ್ಮ ಸಾಧನೆಯಾದರೂ ಏನು ಎನ್ನುವುದನ್ನು ನಮಗೂ ಕೂಡ ಸ್ವಲ್ಪ ಹೇಳಿ ಎಂದಿದ್ದಾರೆ. ಬಹಿರಂಗ ಸವಾಲು ಹಾಕಿದ್ದಾರೆ.

ಹೌದು, ದಿವ್ಯಾ ಸತ್ಯರಾಜ್.. ಬಾಹುಬಲಿಯ ಕಟ್ಟಪ್ಪ ಮತ್ತು ದಕ್ಷಿಣದ ಖ್ಯಾತ ನಟ ಸತ್ಯರಾಜ್ ಅವರ ಮುದ್ದಿನ ಮಗಳು. ತಮ್ಮ ತಂದೆಯ ಜಾಡನ್ನು ಹಿಡಿದು ಚಿತ್ರರಂಗಕ್ಕೆ ಬಾರದ ದಿವ್ಯಾ ಚೆನ್ನೈನ ಖ್ಯಾತ ಪೌಷ್ಟಿಕತಜ್ಞೆ(Nutritionist). ಶಾಲಾ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಡ- ಮಧ್ಯಮವರ್ಗದ ಜನರಿಗೆ ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಆಹಾರ ಹೇಗೆ ಪಡೆಯಬಹುದು ಎನ್ನುವುದರ ಕುರಿತು ದಿವ್ಯಾ ಮಾತನಾಡುತ್ತಾರೆ. ಜಾಗೃತಿ ಮೂಡಿಸುತ್ತಾರೆ. ಇಷ್ಟೇ ಅಲ್ಲ ತಮ್ಮ ತಾಯಿಯ ಹೆಸರಿನಲ್ಲಿ ಎನ್‌ಜಿಓ ಕೂಡ ಸ್ಥಾಪಿಸಿರುವ ದಿವ್ಯಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಲವರಿಗೆ ನೆರವಾಗುತ್ತಾ ಬಂದಿದ್ದಾರೆ.
ಇನ್ನೂ ದಿವ್ಯಾ ಕೇವಲ ಆರೋಗ್ಯ ತಜ್ಞೆ ಅಥವಾ ಪೌಷ್ಟಿಕ ತಜ್ಞೆ ಮಾತ್ರ ಅಲ್ಲ. ರಾಜಕಾರಣಿ ಕೂಡ ಹೌದು. ಕಳೆದ ವರ್ಷ ಎಂ.ಕೆ.ಸ್ಟಾಲಿನ್ ಅವರ ಡಿಎಂಕೆ ಪಕ್ಷವನ್ನು ಸೇರಿಕೊಂಡಿರುವ ದಿವ್ಯಾ ಅವರಿಗೆ ಸದ್ಯದ ಪಕ್ಷದ ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ವಹಿಸಲಾಗಿದೆ. DMK IT Wingನ ಉಪಕಾರ್ಯದರ್ಶಿ ಇವರು.
ಇಂಥಾ ದಿವ್ಯಾ ಸತ್ಯರಾಜ್ ಸದ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದನ್ನು ವಿಜಯ್ ಬಳಿ ಎರಡು ಪ್ರಶ್ನೆಗಳಿಗೆ ಉತ್ತರ ಕೇಳಿದ್ದಾರೆ. ಈ ಕುರಿತು ಮಾತನಾಡಿರುವ ದಿವ್ಯಾ ವಿಜಯ್ ಅವರ ವೈಯಕ್ತಿಕ ಬದುಕಿನ ಕುರಿತು ನಾನು ಮಾತನಾಡಲಾರೆ, ಅದು ನನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ಧಾರೆ. ಅಂತಹ ಕೆಲಸ ನಾನು ಮಾಡಲ್ಲ ಎಂದಿದ್ದಾರೆ.
ಮುಂದುವರೆದು ವಿಜಯ್ ಅವರಿಗೆ ನಾನು ಎರಡು ಪ್ರಶ್ನೆ ಕೇಳಲು ಬಯಸುತ್ತೇನೆ ಎಂದು ಹೇಳಿರುವ ದಿವ್ಯಾ, ನೀವು ರಾಜಕೀಯ ಪ್ರವೇಶಿಸುವ ಮೊದಲು ಜನರಿಗಾಗಿ ಏನು ಮಾಡಿದ್ದೀರಿ ಎಂಬುದನ್ನು ಪಟ್ಟಿ ಮಾಡಿ ಸಾರ್ವಜನಿಕರಿಗೆ ಹೇಳಬೇಕು ಎಂದು ಮೊದಲ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಯನ್ನು ನೀವು ನನಗೂ ಕೂಡ ಕೇಳಬಹುದು, ಯಾಕೆಂದರೆ ನಾನು ಕೂಡ ರಾಜಕೀಯದಲ್ಲಿದ್ದೇನೆ ಎಂದು ಹೇಳಿರುವ ದಿವ್ಯಾ ತಮ್ಮ ಸಾಧನೆ ಮತ್ತು ಸಮಾಜ ಸೇವೆ ಕುರಿತು ಹೇಳಿದ್ದಾರೆ. ನನ್ನ ತಾಯಿಯ ಹೆಸರಿನಲ್ಲಿರುವ ಎನ್‌ಜಿಓ ಮೂಲಕ ನಾನು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಪೌಷ್ಟಿಕ ಆಹಾರ, ವಿಟಮಿನ್ ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ದಿವ್ಯಾ ಸತ್ಯರಾಜ್, ಪೆರಿಯಾರ್ ಅವರ ಹಿಂಬಾಲಕರು ನೀವು, ಅವರ ತತ್ವ ಸಿದ್ದಾಂತಗಳಲ್ಲಿ ನಂಬಿಕೆ ಹೊಂದಿರುವವರು, ಆದರೆ ನಿಮ್ಮದೇ ಪಕ್ಷದವರು ಮಹಿಳೆಯರಿಗೆ ಮರ್ಯಾದೆ ಕೊಡುವುದಿಲ್ಲ, ಅಸಭ್ಯವಾಗಿ ಮಾತನಾಡುತ್ತಾರೆ, ಕೀಳಾಗಿ ನೋಡುತ್ತಾರೆ, ಇದರ ಬಗ್ಗೆ ನಿಮ್ಮ ನಿಲುವು ಏನು..? ಎನ್ನುವುದನ್ನು ಕೂಡ ನೀವು ಹೇಳಬೇಕು ಎಂದಿದ್ದಾರೆ.
ಸದ್ಯ ದಿವ್ಯಾ ಸತ್ಯರಾಜ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ದಿವ್ಯಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಕೆಲವರು ಕಿಡಿ ಕಾರುತ್ತಿದ್ದಾರೆ. ವಿಜಯ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ದಿವ್ಯಾ ಅವರ ಸವಾಲು ಸ್ವೀಕರಿಸಿ ವಿಜಯ್ ಉತ್ತರ ಕೊಡ್ತಾರಾ..? ನಿಮಗೆ ಏನು ಅನ್ಸುತ್ತೆ..? ನಿಮ್ಮ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.


Click it and Unblock the Notifications











