For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳ 'ಸಂಕ್ರಾಂತಿ ಸಡಗರ'

  |

  ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳು ಬರ್ತಿಲ್ಲ. ಆದ್ರೆ, ಕರ್ನಾಟಕ ಚಿತ್ರಮಂದಿರಗಳಲ್ಲಿ ಸಂಕ್ರಾಂತಿ ಸಡಗರ ಜೋರಾಗಿ ನಡೆಯಲಿದೆ. ಏಕಂದ್ರೆ ತೆಲುಗು ಮತ್ತು ತಮಿಳು ಚಿತ್ರಗಳಿಗೆ ರೆಡ್‌ ಕಾರ್ಪೆಟ್ ಹಾಕಿದ್ದಾರೆ.

  ಲಾಕ್‌ಡೌನ್‌ನಿಂದ ನಿಧಾನವಾಗಿ ಹೊರಬರುತ್ತಿರುವ ಸ್ಯಾಂಡಲ್‌ವುಡ್ ಸದ್ಯಕ್ಕೆ ಸ್ಟಾರ್ ನಟರ ಚಿತ್ರಗಳನ್ನು ರಿಲೀಸ್ ಮಾಡುತ್ತಿಲ್ಲ. ಆದರೆ, ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್‌ ನಟರ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

  ವಿಜಯ್ ಸೇತುಪತಿ ತಾಯಿಯ ಆಸೆ ಈಡೇರಿಸಿದ ದಳಪತಿ ವಿಜಯ್ವಿಜಯ್ ಸೇತುಪತಿ ತಾಯಿಯ ಆಸೆ ಈಡೇರಿಸಿದ ದಳಪತಿ ವಿಜಯ್

  ಈ ಕಡೆ ಕನ್ನಡ ಸಿನಿಮಾಗಳಿಲ್ಲದೇ ಪರದಾಡುತ್ತಿರುವ ಚಿತ್ರಮಂದಿರದ ಮಾಲೀಕರು ಪರಭಾಷೆ ಚಿತ್ರಗಳನ್ನಾದರೂ ಪ್ರದರ್ಶಿಸಿ ಜನರನ್ನು ಥಿಯೇಟರ್‌ಗೆ ಕರೆದುಕೊಂಡು ಬರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮುಂದೆ ಓದಿ...

  ಕರ್ನಾಟಕದಲ್ಲಿ ಪರಭಾಷಿಗರ ಸಂಕ್ರಾಂತಿ

  ಕರ್ನಾಟಕದಲ್ಲಿ ಪರಭಾಷಿಗರ ಸಂಕ್ರಾಂತಿ

  ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮಿಳು ನಟ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಜನವರಿ 13 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರ್ತಿದೆ. ಕರ್ನಾಟಕದ ಪ್ರಮುಖ ಚಿತ್ರಗಳಲ್ಲಿ ಕನ್ನಡ ಮತ್ತು ತಮಿಳು ಹಾಗೂ ತೆಲುಗು ವರ್ಷನ್‌ನಲ್ಲಿ 'ಮಾಸ್ಟರ್' ರಿಲೀಸ್ ಮಾಡುತ್ತಿದ್ದಾರೆ.

  ಕರ್ನಾಟಕದಲ್ಲಿ 'ಮಾಸ್ಟರ್' ಥಿಯೇಟರ್ ಪಟ್ಟಿ

  ಕರ್ನಾಟಕದಲ್ಲಿ 'ಮಾಸ್ಟರ್' ಥಿಯೇಟರ್ ಪಟ್ಟಿ

  ಬೆಂಗಳೂರಿನ ನರ್ತಕಿ, ಶಾರದ, ಸಿದ್ದಲಿಂಗೇಶ್ವರ, ಗೋವಾರ್ಧನ್, ವೀರೇಶ್, ವೀರಭದ್ರೇಶ್ವರ, ಕಾಮಾಕ್ಯ, ಭಾರತಿ ಸೇರಿದಂತೆ ರಾಜ್ಯದ ಹಲವು ಕಡೆ ಕನ್ನಡ ಭಾಷೆಯಲ್ಲಿ ಮಾಸ್ಟರ್ ರಿಲೀಸ್ ಆಗುತ್ತಿದೆ. ಕೆಜಿ ರಸ್ತೆಯಲ್ಲಿರುವ ನರ್ತಕಿಯಲ್ಲಿ ಒಂದು ಶೋ ತೆಲುಗು ಸಿನಿಮಾ ಸಹ ಪ್ರದರ್ಶನ ವಾಗುತ್ತಿದೆ.

  ವಿಜಯ್ ಅಭಿಮಾನಿಗಳಿಗೆ 'ಮಾಸ್ಟರ್' ಸಿನಿಮಾದಿಂದ ಪ್ರತಿದಿನ ಕಾದಿದೆ ಸರ್ಪ್ರೈಸ್ವಿಜಯ್ ಅಭಿಮಾನಿಗಳಿಗೆ 'ಮಾಸ್ಟರ್' ಸಿನಿಮಾದಿಂದ ಪ್ರತಿದಿನ ಕಾದಿದೆ ಸರ್ಪ್ರೈಸ್

  ರವಿತೇಜ 'ಕ್ರ್ಯಾಕ್' ಸಿನಿಮಾ

  ರವಿತೇಜ 'ಕ್ರ್ಯಾಕ್' ಸಿನಿಮಾ

  ತೆಲುಗು ನಟ ರವಿತೇಜ ನಟನೆಯ ಕ್ರ್ಯಾಕ್ ಸಿನಿಮಾ ಜನವರಿ 9 ರಂದು ರಿಲೀಸ್ ಆಗುತ್ತಿದೆ. ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಬೆಂಗಳೂರಿನ ನರ್ತಕಿ, ಪ್ರಸನ್ನ, ವೀರೇಶ್ ಸೇರಿದಂತೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸ್ಕ್ರೀನಿಂಗ್ ಆಗ್ತಿದೆ.

  ಅನ್ನದಾನ, ರಕ್ತದಾನ ಮಾಡಿ ಅಭಿಮಾನ ಮೆರೆದ ಯಶ್ ಅಭಿಮಾನಿಗಳು | Filmibeat Kannada
  ಪೊಗರು, ಸಲಗ ರೆಡಿ!

  ಪೊಗರು, ಸಲಗ ರೆಡಿ!

  ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದೆ. ದುನಿಯಾ ವಿಜಯ್ ನಟನೆಯ ಸಲಗ, ಧ್ರುವ ಸರ್ಜಾ ನಟನೆಯ ಪೊಗರು, ದರ್ಶನ್ ನಟನೆಯ ರಾಬರ್ಟ್, ಸುದೀಪ್ ನಟನೆಯ ಕೋಟಿಗೊಬ್ಬ 3 ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

  English summary
  Kannada film industry has give most theatres in Bengaluru to Telugu and Tamil films this Sankranti festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X