ತಮಿಳು ರಾಕರ್ಸ್ ಯಾರು? ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ?

Recommended Video

ಇವರ ತಿಂಗಳ ಆಧಾಯ ಕೇಳಿದ್ರೆ ಶಾಕ್ ಆಗ್ತೀರ | FILMIBEAT KANNADA

ತಮಿಳ್ ರಾಕರ್ಸ್ ಎನ್ನುವ ಭಯೋತ್ಪಾದಕರು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ರಾಜಾರೋಷವಾಗಿ ಪೈರಸಿ ಮಾಡಿ ವೈರಲ್ ಮಾಡುತ್ತಿರುವ ಈ ತಮಿಳ್ ರಾಕರ್ಸ್ ಎನ್ನುವ ಭಯೋತ್ಪಾದಕರು ಯಾರು? ಇವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಪ್ರತಿಯೊಬ್ಬರನ್ನು ಕಾಡುತ್ತಿರುವ ಪ್ರಶ್ನೆ.

ಸಿನಿಮಾ ರಿಲೀಸ್ ಆದ ಕೆಲವೆ ಕ್ಷಣದಲ್ಲಿ ಪೈರಸಿ ಮಾಡಿ ಲಿಂಕ್ ಅನ್ನು ಶೇರ್ ಮಾಡುವ ಚಾಣಕ್ಯರಿವರು. ಸಿನಿಮಾ ಅದಷ್ಟೋ ಚಿತ್ರಮಂದಿರಗಳಲ್ಲಿ ಇನ್ನು ಪ್ರದರ್ಶನವೆ ಕಂಡಿರಲ್ಲ. ಅಷ್ಟರಲ್ಲೆ ಎಲ್ಲರಿಗೂ ಸಿನಿಮಾ ತೋರಿಸಿಬಿಟ್ಟಿರುತ್ತಾರೆ ಈ ಕಿರಾತಕರು. ಇಡೀ ಚಿತ್ರತಂಡ ಬೆವರಳಿಸಿ, ಕೋಟಿಗಟ್ಟಲೆ ಸುರಿದು, ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಕ್ಷಣದಲ್ಲಿ ಲೀಕ್ ಮಾಡುವ ಈ ತಮಿಳ್ ರಾಕರ್ಸ್ ಅನ್ನು ಯಾರ ಕೈಯಲ್ಲೂ ಏನು ಮಾಡಲು ಸಾಧ್ಯವಾಗುತ್ತಿಲ್ಲ.

ತಮಿಳ್ ರಾಕರ್ಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕುವುದು ಹೇಗೆ ಎನ್ನುವುದೀಗ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿದೆ. ತಮಿಳ್ ರಾಕರ್ಸ್ ಟಾರ್ಗೆಟೆಡ್ ಆಡಿಯನ್ಸ್ ಅಂದ್ರೆ ಯುವಕರು, ಕಾಲೇಜು ವಿದ್ಯಾರ್ಥಿಗಳು, ಸಾಮಾನ್ಯ ವರ್ಗದ ಉದ್ಯೋಗಿಗಳು ಮತ್ತು ಹೌಸ್ ವೈಫ್. ತಮಿಳ್ ರಾಕರ್ಸ್ ವೆಬ್ ಸೈಟ್ ಹೆಚ್ಚು ಖ್ಯಾತಿ ಗಳಿಸಲು ಕಾರಣವಾಗಿದ್ದೆ ಸೌತ್ ಇಂಡಿಯಾದ ಪ್ರೇಕ್ಷಕರು.

ತಮಿಳ್ ರಾಕರ್ಸ್ ಮಾಲಿಕ ಯಾರು?

ತಮಿಳ್ ರಾಕರ್ಸ್ ಮಾಲಿಕ ಯಾರು?

ತಮಿಳ್ ರಾಕರ್ಸ್ ಮಾಲಿಕ ಅಥವಾ ಅಡ್ಮಿನ್ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಇದುವರೆಗೂ ಅವರನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. 2018ರಲ್ಲಿ ತಮಿಳ್ ರಾಕರ್ಸ್ ಗೆ ಸಂಬಂಧ ಪಟ್ಟ 5 ಜನರನ್ನು ಪೊಲೀಸರ್ ಅರೆಸ್ಟ್ ಮಾಡಿದ್ದರು. ಪ್ರಭು, ಜಾನ್ಸನ್, ಕಾರ್ತಿ, ಸುರೇಶ್ ಮತ್ತು ಮರಿಯಾ ಜಾನ್ ಎನ್ನುವವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆದರೆ ಯಾರು ಅಡ್ಮಿನ್ ಎನ್ನುವುದು ಇನ್ನೂ ನಿಗೂಢ. ಇವರನ್ನು ಅರೆಸ್ಟ್ ಮಾಡಿದ್ರು ಏನು ಪ್ರಯೋಜನವಾಗಲಿಲ್ಲ.

ತಮಿಳ್ ರಾಕರ್ಸ್ ವಿರುದ್ಧ ಸೆಲೆಬ್ರೆಟಿಗಳು ಮಾತನಾಡಲ್ಲ

ತಮಿಳ್ ರಾಕರ್ಸ್ ವಿರುದ್ಧ ಸೆಲೆಬ್ರೆಟಿಗಳು ಮಾತನಾಡಲ್ಲ

ತಮಿಳ್ ರಾಕರ್ಸ್ ವಿರುದ್ಧ ಸಿನಿಮಾ ಸೆಲೆಬ್ರಿಟಿಗಳು ಮಾತನಾಡಲ್ಲ. ಅವರ ವಿರುದ್ಧ ಹೇಳಿಕೆಗಳನ್ನು ನೀಡುವುದು ಮತ್ತು ತಮಿಳ್ ರಾಕರ್ಸ್ ಅನ್ನು ವಿರೋಧ ಮಾಡಿದ್ರೆ ಹೇಗೆ ಪ್ರತಿಕಾರ ತೀರಿಕೊಳ್ಳಬೇಕು ಎನ್ನುವುದು ತಮಿಳ್ ರಾಕರ್ಸ ಗೆ ತುಂಬಾ ಚೆನ್ನಾಗಿ ತಿಳಿದಿದೆ. ಹಾಗಾಗಿ ಅವರ ವಿರುದ್ಧ ಮಾತನಾಡುವ ಮೊದಲು ಸಿನಿಮಾ ಸೆಲೆಬ್ರಿಟಿಗಳು ತುಂಬ ಎಚ್ಚರಿಕೆ ಇಂದ ಮಾತನಾಡುತ್ತಾರೆ.

ಸಿನಿಮಾ, ಜನಪ್ರಿಯ ಟಿವಿ ಶೋಗಳು ಟಾರ್ಗೆಟ್

ಸಿನಿಮಾ, ಜನಪ್ರಿಯ ಟಿವಿ ಶೋಗಳು ಟಾರ್ಗೆಟ್

ತಮಿಳ್ ರಾಕರ್ಸ್ ಕೇವಲ ಸಿನಿಮಾವನ್ನು ಮಾತ್ರ ಪೈರಸಿ ಮಾಡಿ ವೈರಲ್ ಮಾಡುತ್ತಿಲ್ಲ. ಜನಪ್ರಿಯಾ ಟಿವಿ ಶೋಗಳು, ವೆಬ್ ಸಿರೀಸ್ ಮತ್ತು ಆಡಿಯೋವನ್ನು ಪೈರಸಿ ಮಾಡಿ ತಮಿಳ್ ರಾಕರ್ಸ್ ವೆಬ್ ನಲ್ಲಿ ರಿಲೀಸ್ ಮಾಡುತ್ತಾರೆ. ಕೆಲವೊಮ್ಮೆ ಅಧಿಕೃತವಾಗಿ ಆಡಿಯೋ ಮತ್ತು ವಿಡಿಯೋಗಳು ರಿಲೀಸ್ ಆಗುವ ಮೊದಲೆ ತಮಿಳ್ ರಾಕರ್ಸ್ ನಲ್ಲಿ ಲಭ್ಯವಿರುತ್ತೆ.

ಬ್ಲಾಕ್ ಮಾಡಿಸಿದ್ರು ಬೇರೆ ವೆಬ್ ತೆರೆಯುತ್ತಾರೆ

ಬ್ಲಾಕ್ ಮಾಡಿಸಿದ್ರು ಬೇರೆ ವೆಬ್ ತೆರೆಯುತ್ತಾರೆ

ಅನೇಕ ಸಿನಿಮಾ ನಿರ್ಮಾಪಕರು ಮತ್ತು ಸಿನಿಮಾ ತಂಡದ ದೂರಿದ ಆಧಾರದ ಮೇಲೆ ತಮಿಳ್ ರಾಕರ್ಸ್ ವೆಬ್ ಸೈಟ್ ಅನ್ನು ಬ್ಲಾಕ್ ಮಾಡಿಸಿದ್ರೆ. ಕೆಲವೆ ಕ್ಷಮದಲ್ಲಿ ಮತ್ತೊಂದು ವೆಬ್ ಸೈಟ್ ತೆರೆದಿರುತ್ತಾರೆ. ಈಗಾಗಲೆ ತಮಿಳ್ ರಾಕರ್ಸ್ ಗೆ ಸಂಬಂಧಿಸದ ಸಾಕಷ್ಟು ವೆಬ್ ಸೈಟ್ ಬ್ಲಾಕ್ ಮಾಡಿಸಲಾಗಿದೆ. ಉದಾಹರಣೆಗೆ ತಮಿಳ್ ರಾಕರ್ಸ್.ಕಾಮ್ ಅಂತ ಇರುವದನ್ನು ಬ್ಲಾಕ್ ಮಾಡಿದ್ರೆ ಅವರು ತಮಿಳ್ ರಾಕರ್ಸ್.ನೆಟ್ ಗೆ ವರ್ಗಾವಣೆಯಾಗಿರುತ್ತಾರೆ. ಹೀಗೆ ಬ್ಲಾಕ್ ಮಾಡಿಸಿದಾಗಲು ಬೇರೆ ಬೇರೆ ವೆಬ್ ತೆರೆಯುತ್ತಿರುತ್ತಾರೆ. ಸಾಕಷ್ಟು ವೆಬ್ ಅವರ ಹೆಸರಿನಲ್ಲಿ ಇದೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ದಿನಕ್ಕೆ ಲಕ್ಷಗಟ್ಟಲೆ ದುಡಿಯುತ್ತಾರೆ

ದಿನಕ್ಕೆ ಲಕ್ಷಗಟ್ಟಲೆ ದುಡಿಯುತ್ತಾರೆ

ತಮಿಳು ರಾಕರ್ಸ್ ಒಂದು ತಿಂಗಳಿನ ಆದಾಯ ಕೇಳಿದರೆ, ಆಶ್ಚರ್ಯ ಆಗುತ್ತದೆ. ಪ್ರತಿ ದಿನ ಈ ಸೈಟ್ ಗೆ 3 ರಿಂದ 4 ಲಕ್ಷ ಜನರು ಭೇಟಿ ನೀಡುತ್ತಾರೆ. ಪ್ರಮುಖವಾಗಿ ಜಾಹಿರಾತಿನ ಮೂಲಕ ಇವರಿಗೆ ದುಡ್ಡು ಬರುತ್ತದೆ. ತಿಂಗಳಿಗೆ ಕನಿಷ್ಟ 20 ರಿಂದ 80 ಲಕ್ಷದ ವರೆಗೆ ಹಣ ಮಾಡುತ್ತಾರೆ. ಪ್ರತಿ ದಿನ ಇವರ ಆದಾಯ 60 ಸಾವಿರದಿಂದ 2 ಲಕ್ಷದ ವರೆಗೂ ಇರುತ್ತೆ.

More from Filmibeat

English summary
Who are Tamilrockers, how they are working.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X