ಮಲಯಾಳಂ ಹಿಟ್ ಚಿತ್ರದ ಮೇಲೆ ಸೌತ್ ಇಂಡಸ್ಟ್ರಿ ಕಣ್ಣು, ತೆಲುಗು ನಂತರ ತಮಿಳಿನಲ್ಲಿ ರೀಮೇಕ್!

ಲಾಕ್‌ಡೌನ್‌ಗೂ ಮುಂಚೆ ತೆರೆಕಂಡಿದ್ದ ಮಲಯಾಳಂ ಚಿತ್ರ ಅಯ್ಯಪ್ಪನುಮ್ ಕೋಶಿಯುಮ್ ಮಾಲಿವುಡ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿತ್ತು. 2020ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಕೊರೊನಾ ಆತಂಕದ ನಡುವೆಯೂ ಜನಮನ್ನಣೆ ಗಳಿಸಿಕೊಂಡಿತ್ತು.

ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವನ್ನು ಸಚ್ಚಿ ನಿರ್ದೇಶಿಸಿದ್ದರು. ಇದೀಗ, ಈ ಚಿತ್ರಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಬೇಡಿಕೆ ಹೆಚ್ಚಿದೆ. ರೀಮೇಕ್ ಹಕ್ಕು ಈಗಾಗಲೇ ಖರೀದಿಸಿದ್ದು, ಸ್ಟಾರ್ ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

ತೆಲುಗಿನಲ್ಲಿ ಪವನ್ ಕಲ್ಯಾಣ್ ನಾಯಕರಾಗಿ ನಟಿಸುವ ಸಾಧ್ಯತೆ ಇದ್ದು, ಪವನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ ಅಥವಾ ಸುದೀಪ್ ಅವರನ್ನು ಕರೆತರುವ ಪ್ಲಾನ್ ಮಾಡಲಾಗಿದೆ. ಆದ್ರೆ, ಇದುವರೆಗೂ ಈ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ.

Who Will Play Lead Roles In Tamil Remake of Ayyappanum Koshiyum?

ಈ ನಡುವೆ ತಮಿಳಿನಲ್ಲಿ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ರೀಮೇಕ್‌ನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದೆ. ಪೃಥ್ವಿರಾಜ್ ಅವರ ಪಾತ್ರದಲ್ಲಿ ಸಿಂಬು ಕಾಣಿಸಿಕೊಳ್ಳಲಿದ್ದು, ಬಿಜು ಮೆನನ್ ನಿರ್ವಹಿಸಿದ್ದ ಪಾತ್ರದಲ್ಲಿ ಪಾರ್ಥಿಭನ್ ನಟಿಸಬಹುದು ಎನ್ನಲಾಗಿತ್ತು.

ನಂತರ ಕಾರ್ತಿ ಹಾಗೂ ಪಾರ್ಥಿಭನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬಹುದು ಎನ್ನಲಾಯ್ತು. ಅದಕ್ಕೂ ಮುಂಚೆ ಶರತ್ ಕುಮಾರ್ ಮತ್ತು ಶಶಿಕುಮಾರ್ ಜೋಡಿಯಾಗಬಹುದು ಎಂಬ ವರದಿಯೂ ಇತ್ತು.

ಕತ್ರೀರಸನ್ ಅವರ ಫೈವ್ ಸ್ಟಾರ್ ಕ್ರಿಯೇಷನ್ಸ್ ಈ ಚಿತ್ರ ರೀಮೇಕ್ ಹಕ್ಕು ಪಡೆದುಕೊಂಡಿದ್ದು, ನವೆಂಬರ್ 5 ರಂದು ಸಿನಿಮಾ ಪ್ರಕಟಿಸುವ ಸಾಧ್ಯತೆ ಇದೆ.

More from Filmibeat

English summary
Producer Kathiresan had bagged Tamil remake rights of Ayyappanum Koshiyum. Who Will Play Lead Roles In Tamil version?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X