For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಹಿಟ್ ಚಿತ್ರದ ಮೇಲೆ ಸೌತ್ ಇಂಡಸ್ಟ್ರಿ ಕಣ್ಣು, ತೆಲುಗು ನಂತರ ತಮಿಳಿನಲ್ಲಿ ರೀಮೇಕ್!

  |

  ಲಾಕ್‌ಡೌನ್‌ಗೂ ಮುಂಚೆ ತೆರೆಕಂಡಿದ್ದ ಮಲಯಾಳಂ ಚಿತ್ರ ಅಯ್ಯಪ್ಪನುಮ್ ಕೋಶಿಯುಮ್ ಮಾಲಿವುಡ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿತ್ತು. 2020ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಕೊರೊನಾ ಆತಂಕದ ನಡುವೆಯೂ ಜನಮನ್ನಣೆ ಗಳಿಸಿಕೊಂಡಿತ್ತು.

  ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವನ್ನು ಸಚ್ಚಿ ನಿರ್ದೇಶಿಸಿದ್ದರು. ಇದೀಗ, ಈ ಚಿತ್ರಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಬೇಡಿಕೆ ಹೆಚ್ಚಿದೆ. ರೀಮೇಕ್ ಹಕ್ಕು ಈಗಾಗಲೇ ಖರೀದಿಸಿದ್ದು, ಸ್ಟಾರ್ ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

  ಸಾಯಿ ಪಲ್ಲವಿಗೆ ಬಂಫರ್ ಆಫರ್: ಒಪ್ಪಿಕೊಳ್ಳುತ್ತಾರೋ ಇಲ್ಲವೋ?ಸಾಯಿ ಪಲ್ಲವಿಗೆ ಬಂಫರ್ ಆಫರ್: ಒಪ್ಪಿಕೊಳ್ಳುತ್ತಾರೋ ಇಲ್ಲವೋ?

  ತೆಲುಗಿನಲ್ಲಿ ಪವನ್ ಕಲ್ಯಾಣ್ ನಾಯಕರಾಗಿ ನಟಿಸುವ ಸಾಧ್ಯತೆ ಇದ್ದು, ಪವನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ ಅಥವಾ ಸುದೀಪ್ ಅವರನ್ನು ಕರೆತರುವ ಪ್ಲಾನ್ ಮಾಡಲಾಗಿದೆ. ಆದ್ರೆ, ಇದುವರೆಗೂ ಈ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ.

  ಈ ನಡುವೆ ತಮಿಳಿನಲ್ಲಿ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ರೀಮೇಕ್‌ನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದೆ. ಪೃಥ್ವಿರಾಜ್ ಅವರ ಪಾತ್ರದಲ್ಲಿ ಸಿಂಬು ಕಾಣಿಸಿಕೊಳ್ಳಲಿದ್ದು, ಬಿಜು ಮೆನನ್ ನಿರ್ವಹಿಸಿದ್ದ ಪಾತ್ರದಲ್ಲಿ ಪಾರ್ಥಿಭನ್ ನಟಿಸಬಹುದು ಎನ್ನಲಾಗಿತ್ತು.

  Big Buzz: ಸುದೀಪ್ ಮತ್ತು ಪವನ್ ಕಲ್ಯಾಣ್ ಕುರಿತಾದ ಸುದ್ದಿ ನಿಜನಾ?Big Buzz: ಸುದೀಪ್ ಮತ್ತು ಪವನ್ ಕಲ್ಯಾಣ್ ಕುರಿತಾದ ಸುದ್ದಿ ನಿಜನಾ?

  ನಂತರ ಕಾರ್ತಿ ಹಾಗೂ ಪಾರ್ಥಿಭನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಬಹುದು ಎನ್ನಲಾಯ್ತು. ಅದಕ್ಕೂ ಮುಂಚೆ ಶರತ್ ಕುಮಾರ್ ಮತ್ತು ಶಶಿಕುಮಾರ್ ಜೋಡಿಯಾಗಬಹುದು ಎಂಬ ವರದಿಯೂ ಇತ್ತು.

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada

  ಕತ್ರೀರಸನ್ ಅವರ ಫೈವ್ ಸ್ಟಾರ್ ಕ್ರಿಯೇಷನ್ಸ್ ಈ ಚಿತ್ರ ರೀಮೇಕ್ ಹಕ್ಕು ಪಡೆದುಕೊಂಡಿದ್ದು, ನವೆಂಬರ್ 5 ರಂದು ಸಿನಿಮಾ ಪ್ರಕಟಿಸುವ ಸಾಧ್ಯತೆ ಇದೆ.

  English summary
  Producer Kathiresan had bagged Tamil remake rights of Ayyappanum Koshiyum. Who Will Play Lead Roles In Tamil version?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X