For Quick Alerts
  ALLOW NOTIFICATIONS  
  For Daily Alerts

  ಮಣಿರತ್ನಂ ಮತ್ತು ಶಂಕರ್ ರಲ್ಲಿ ಯಶ್ ಆಯ್ಕೆ ಮಾಡಿದ್ದು ಇವರನ್ನು

  |

  ನಿರ್ದೇಶಕ ಮಣಿರತ್ನಂ ಹಾಗೂ ಶಂಕರ್ ಅವರ ಕಡೆಯಿಂದ ಏಕಕಾಲದಲ್ಲಿ ನಿಮಗೆ ಆಫರ್ ಬಂದು, ನೀವು ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕು ಎಂದರೆ, ನೀವು ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆ ನಟ ಯಶ್ ರಿಗೆ ಬಂದಿದೆ.

  ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ತಮಿಳಿನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಒಂದು ಪ್ರಶ್ನೆ ಕೇಳಿದರು. ಮಣಿರತ್ನಂ ಹಾಗೂ ಶಂಕರ್ ರಿಂದ ಆಫರ್ ಬಂದರೆ, ಯಾರನ್ನು ಆಯ್ಕೆ ಮಾಡುತ್ತೀರಿ ಎಂದರು. ಆಗ ಯಶ್ ನಿರ್ದೇಶಕ ಶಂಕರ್ ಅವರ ಹೆಸರನ್ನು ಆಯ್ಕೆ ಮಾಡಿದರು.

  ಮಗಳು ಆಯ್ರಾ ಸಾಧನೆ ಮಾಡಿದರೆ ಮಾತ್ರ ಗೌರವ ಕೊಡಿ ಎಂದ ಯಶ್ಮಗಳು ಆಯ್ರಾ ಸಾಧನೆ ಮಾಡಿದರೆ ಮಾತ್ರ ಗೌರವ ಕೊಡಿ ಎಂದ ಯಶ್

  ''ನನಗೆ ಮಣಿರತ್ನಂ ಸರ್ ಇಷ್ಟ. ಅವರ ಕೆಲಸಗಳ ತುಂಬ ಇಷ್ಟ. ಆದರೆ, ನಾನು ಶಂಕರ್ ರನ್ನು ಕೆಲವು ಭೇಟಿ ಮಾಡಿದ್ದೇನೆ. ಅವರ ಮತ್ತು ನನ್ನ ನಡುವೆ ತುಂಬ ಒಳ್ಳೆಯ ಬಾಂದವ್ಯ ಇದೆ. ಒಬ್ಬ ವ್ಯಕ್ತಿಯಾಗಿಯೂ ಅವರು ಬಹಳ ಇಷ್ಟ. ಅವರು ನನಗೆ ಸ್ಫೂರ್ತಿ ನೀಡುತ್ತಾರೆ.'' ಎಂದಿದ್ದಾರೆ.

  ಶಂಕರ್ ಸರ್ ಜೊತೆಗೆ ಸಿನಿಮಾ ಮಾಡುವ ಪ್ಲಾನ್ ಇದೆಯೇ..? ಎಂದು ಕೇಳಿದಾಗ, ಸದ್ಯಕ್ಕೆ ಹಾಗೇನೂ ಇಲ್ಲ ಎಂದು ಯಶ್ ಉತ್ತರ ನೀಡಿದ್ದಾರೆ. ಆದರೆ, ಯಶ್ ಗೆ ಶಂಕರ್ ಡೈರೆಕ್ಟನ್ ಮಾಡಿದರೆ, ಆ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸುವುದಂತು ನಿಜ.

  ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದೇಕೆ ನಟ ಯಶ್ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದೇಕೆ ನಟ ಯಶ್

  ಅಂದಹಾಗೆ ಶಂಕರ್ ಕಾಲಿವುಡ್ ನ ಸ್ಟಾರ್ ಡೈರೆಕ್ಟರ್. 'ಇಂಡಿಯನ್', 'ಅನ್ನಿಯನ್', 'ಶಿವಾಜಿ', 'ರೋಬೋ', 'ಐ', '2.O' ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಶಂಕರ್ ಖಾತೆಯಲ್ಲಿ ಇವೆ.

  English summary
  Whom did Yash choose between Mani Ratnam and Shankar?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X