For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ರೇಟಿಂಗ್ ಪಡೆದ 'ಸೂರರೈ ಪೊಟ್ರು': ಸತ್ಯಾಂಶವೇನು?

  |

  ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಆಧರಿಸಿ ತಮಿಳಿನಲ್ಲಿ ನಿರ್ಮಾಣವಾದ ಸಿನಿಮಾ 'ಸೂರರೈ ಪೊಟ್ರು' ಹೆಸರಿಗೆ 'ದಾಖಲೆ'ಯೊಂದು ಸೇರಿದೆ. ಸಿನಿಮಾಗಳಿಗೆ ರೇಟಿಂಗ್ ನೀಡುವ ಐಎಂಡಿಬಿ ರೇಟಿಂಗ್ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ವಿಶ್ವದ ಮೂರನೇ ಸಿನಿಮಾ ಎಂಬ ಖ್ಯಾತಿಗೆ 'ಸೂರರೈ ಪೊಟ್ರು' ಭಾಜನವಾಗಿದೆ!

  ವಿಶ್ವವಿಖ್ಯಾತ ಐಎಂಡಿಬಿ ಸಂಸ್ಥೆಯು ವಿಶ್ವದ ಸಿನಿಮಾಗಳಿಗೆ ಅವುಗಳ ಗುಣಮಟ್ಟ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಆಧರಿಸಿ ರೇಟಿಂಗ್ ನೀಡುತ್ತದೆ. ತಮಿಳಿನ 'ಸೂರರೈ ಪೊಟ್ರು' ಸಿನಿಮಾಕ್ಕೆ 9.1 ರೇಟಿಂಗ್ ದೊರೆತಿದೆ. ಬಹಳ ಕಡಿಮೆ ಸಿನಿಮಾಗಳಿಗೆ 9 ಕ್ಕೂ ಹೆಚ್ಚು ರೇಟಿಂಗ್ ಅನ್ನು ಐಎಂಡಿಬಿ ನೀಡಿದೆ.

  ಸಾರ್ವಕಲಿಕ ಶ್ರೇಷ್ಟ ಸಿನಿಮಾ ಎನ್ನಲಾಗುವ 'ದಿ ಶಾಷಾಂಕ್ ರಿಡಂಪ್ಷನ್‌'ಗೆ ವಿಶ್ವದಲ್ಲೇ ಹೆಚ್ಚು 9.3 ರೇಟಿಂಗ್ ನೀಡಲಾಗಿದೆ. ಮತ್ತೊಂದು ಸಾರ್ವಕಾಲಿಕ ಶ್ರೇಷ್ಟ ಸಿನಿಮಾ 'ದಿ ಗಾಡ್ ಫಾದರ್‌'ಗೆ 9.2 ರೇಟಿಂಗ್ ನೀಡಿದೆ ಐಎಂಡಿಬಿ. ಇದೀಗ 'ಸೂರರೈ ಪೊಟ್ರು' ಸಿನಿಮಾಕ್ಕೆ 9.1 ರೇಟಿಂಗ್ ನೀಡಲಾಗಿದೆ. ಹಾಗಿದ್ದರೆ 'ಸೂರರೈ ಪೊಟ್ರು' ಸಿನಿಮಾ ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಸಿನಿಮಾಗಳ ಪಟ್ಟಿ ಸೇರಿಬಿಟ್ಟಿತೆ ಎಂದರೆ ಖಂಡಿತ ಇಲ್ಲ.

  ರೇಟಿಂಗ್ ನೀಡಿರುವುದು 67000 ಜನ ಮಾತ್ರ

  ರೇಟಿಂಗ್ ನೀಡಿರುವುದು 67000 ಜನ ಮಾತ್ರ

  9 ರ ಮೇಲೆ ರೇಟಿಂಗ್ ಪಡೆದಿರುವ ಸಾರ್ವಕಾಲಿಕ ಶ್ರೇಷ್ಟ ಸಿನಿಮಾಗಳಿಗೆ ಮಿಲಿಯನ್‌ ಗಟ್ಟಲೆ ಜನರು ರೇಟಿಂಗ್ ನೀಡಿದ್ದಾರೆ. ಆದರೆ 'ಸೂರರೈ ಪೊಟ್ರು' ಸಿನಿಮಾಕ್ಕೆ ಕೇವಲ 67000 ಜನರಷ್ಟೆ ರೇಟಿಂಗ್ ನೀಡಿದ್ದಾರೆ. ಅದರಲ್ಲಿ ಸುಮಾರು 55,000 ಮಂದಿ 10/10 ರೇಟಿಂಗ್ ನೀಡಿದ್ದಾರೆ. ಹೀಗಾಗಿ ಈ ಸಿನಿಮಾದ ರೇಟಿಂಗ್ ಹೆಚ್ಚಿಗೆ ಕಾಣುತ್ತಿದೆ.

  'ವೇಯ್ಟೆಡ್ ಆವರೇಜ್' ಮಾದರಿಯಲ್ಲಿ ರೇಟಿಂಗ್

  'ವೇಯ್ಟೆಡ್ ಆವರೇಜ್' ಮಾದರಿಯಲ್ಲಿ ರೇಟಿಂಗ್

  ಐಎಂಡಿಬಿಯು ಬಳಕೆದಾರರ ರೇಟಿಂಗ್ ಪಡೆದು ವೇಯ್ಟೆಡ್ ಆವರೇಜ್ ಮಾದರಿಯಲ್ಲಿ ರೇಟಿಂಗ್ ನೀಡುತ್ತದೆ. 'ಸೂರರೈ ಪೊಟ್ರು' ಸಿನಿಮಾಕ್ಕೆ ಐಎಂಬಿಡಿಯ ಟಾಪ್ 1000 ಬಳಕೆದಾರರು ನೀಡಿರುವುದು ಸರಾಸರಿ 5.2 ರೇಟಿಂಗ್ ಮಾತ್ರವೇ.

  ಮುಂದಿನ ದಿನಗಳಲ್ಲಿ ರೇಟಿಂಗ್ ಕಡಿಮೆ ಆಗಲಿದೆ

  ಮುಂದಿನ ದಿನಗಳಲ್ಲಿ ರೇಟಿಂಗ್ ಕಡಿಮೆ ಆಗಲಿದೆ

  ಸಿನಿಮಾಕ್ಕೆ ಹೆಚ್ಚು ಹೆಚ್ಚು ಮಂದಿ ಬಳಕೆದಾರರು ರೇಟಿಂಗ್ ನೀಡುತ್ತಾ ಸಾಗಿದಂತೆ, ವೇಯ್ಟೆಡ್ ಆವರೇಜ್ ಅಡಿಯಲ್ಲಿ ಟಾಪ್ ಬಳಕೆದಾರರ ರೇಟಿಂಗ್ ಗಮನಿಸಿ ಐಎಂಡಿಬಿಯು ಸಿನಿಮಾದ ರೇಟಿಂಗ್ ಬದಲಾವಣೆ ಮಾಡುತ್ತದೆ. ಅದರಂತೆ ಮುಂದಿನ ದಿನಗಳಲ್ಲಿ 'ಸೂರರೈ ಪೊಟ್ರು' ಸಿನಿಮಾದ ರೇಟಿಂಗ್ ಕಡಿಮೆ ಆಗಲಿದೆ. ಕನ್ನಡದ 'ಸೂಪರ್' ಸಿನಿಮಾಕ್ಕೂ ಹೀಗೆಯೇ ಆಗಿತ್ತು. 'ಸೂಪರ್‌'ಗೆ ರೇಟಿಂಗ್ ನೀಡಿರುವವರ ಸಂಖ್ಯೆ ಕೇವಲ 2112.

  Recommended Video

  Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada
  ಟಾಪ್ 10ರ ಪಟ್ಟಿಯಲ್ಲಿ 'ಸೂರರೈ ಪೊಟ್ರು' ಸಿನಿಮಾ ಇಲ್ಲ

  ಟಾಪ್ 10ರ ಪಟ್ಟಿಯಲ್ಲಿ 'ಸೂರರೈ ಪೊಟ್ರು' ಸಿನಿಮಾ ಇಲ್ಲ

  ಐಎಂಡಿಬಿಯ ಟಾಪ್ ಸಿನಿಮಾಗಳ ಪಟ್ಟಿಯನ್ನು ತೆರೆದರೆ ಅಲ್ಲಿ 'ಸೂರರೈ ಪೊಟ್ರು' ಸಿನಿಮಾದ ಹೆಸರು ಕಾಣುವುದಿಲ್ಲ. 'ದಿ ಶಾಷಾಂಕ್ ರಿಡಂಪ್ಷನ್', 'ದಿ ಗಾಡ್ ಫಾದರ್' ಸಿನಿಮಾಗಳ ನಂತರ ಮೂರನೇ ಸ್ಥಾನದಲ್ಲಿ 9 ರೇಟಿಂಗ್ ಪಡೆದಿರುವ 'ದಿ ಗಾಡ್ ಫಾದರ್ 2' ಸಿನಿಮಾ ಇದೆ. 8.9 ರೇಟಿಂಗ್ ಪಡೆದಿರುವ '12 ಆಂಗ್ರಿ ಮೆನ್' ಸಿನಿಮಾ ಐದನೇ ಸ್ಥಾನದಲ್ಲಿದೆ.

  English summary
  Tamil Soorarai Potru movie gets top IMDB ratings. Its third top rated movie in the world. How and why this movie gets top rating.
  Tuesday, May 18, 2021, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X