ಈ ಸುಖಕ್ಕೆ ಮದುವೆ ಯಾಕೆ ಆಗಬೇಕು ? ರಣಧೀರ ಚೆಲುವೆ ಖುಷ್ಬೂ ಕೆಂಡಾಮಂಡಲ

ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ.

ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ.

Why Marry Khushbu Sundar Slams Regressive Verdicts on Consent and Infidelity

ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ. ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್‌ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ವರ್ಷಗಳಲ್ಲಿ ಹಲವಾರು ಜನ ವಿಚ್ಛೇದನ ಪಡೆದಿದ್ದಾರೆ

ಈ ಹಿನ್ನೆಲೆ ಹಲವರಲ್ಲಿ ಈಗ ಮದುವೆ ಮೇಲೀನ ನಂಬಿಕೆ ಕಡಿಮೆಯಾಗುತ್ತಿದೆ. ಮದುವೆಯಾಗಿ ಡಿವೋರ್ಸ್ ನೀಡುವುದಕ್ಕಿಂತ ಏಕಾಂಗಿಯಾಗಿರುವುದೇ ಉತ್ತಮ ಎನ್ನುವರ ಸಂಖ್ಯೆ ಹೆಚ್ಚಾಗುತ್ತಿದೆ. ಮದುವೆ ಬೇಡ ಲಿವ್ ಇನ್ ಸಂಬಂಧ ಸಾಕು ಎನ್ನುವವರ ವರ್ಗ ಕೂಡ ಹೆಚ್ಚಾಗುತ್ತಿದೆ. ಹೀಗಿರುವಾಗ ಮದುವೆಯಾದ ಪುರುಷನ ಜೊತೆ ಮತ್ತೊಬ್ಬ ಮಹಿಳೆ ಲಿವ್-ಇನ್ ಸಂಬಂಧದಲ್ಲಿದ್ದರೆ ಅದು ಕಾನೂನುಬದ್ಧ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.

ಹೌದು,ಅಸಲಿಗೆ ಮದುವೆಯಾಗಿರುವ ನೇತ್ರಪಾಲ್ ಎಂಬ ವ್ಯಕ್ತಿ ಅನಾಮಿಕಾ ಎಂಬ ಯುವತಿಯ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದರು. ಜನವರಿ 8ರಂದು ಅನಾಮಿಕಾ ಅವರ ತಾಯಿ ಕಾಂತಿ ಶಹಜಹಾನ್‌ಪುರದ ಜೈತಿಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದರು.

ನೇತ್ರಪಾಲ್ ನಮಗೆ ನಮ್ಮ ಮಗಳನ್ನು ಬಿಡುತ್ತಿಲ್ಲ. ಮದುವೆಯಾಗಿದ್ದರೂ ಆಕೆಯನ್ನು ಮರುಳು ಮಾಡಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಅವರು ಆರೋಪಿಸಿದ್ದರು. ಅನಾಮಿಕಾ ಕೇವಲ 18 ವರ್ಷದವಳಾಗಿದ್ದು, ಆಕೆ ವಿವಾಹಿತನೊಂದಿಗೆ ಸಂಬಂಧದಲ್ಲಿರುವುದು ತಮಗೆ ಇಷ್ಟವಿಲ್ಲ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.

Why Marry Khushbu Sundar Slams Regressive Verdicts on Consent and Infidelity

ಅನಾಮಿಕಾ ಮತ್ತು ನೇತ್ರಪಾಲ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಆ ಪ್ರಕರಣವನ್ನು ಪ್ರಶ್ನಿಸಿ, ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದಿಂದ ರಕ್ಷಣೆ ಕೋರಿದ್ದರು. ನನಗೆ 18ಕ್ಕಿಂತ ಜಾಸ್ತಿ ವಯಸ್ಸಾಗಿದೆ. ನಮ್ಮ ಕುಟುಂಬದಿಂದ ಮರ್ಯಾದಾ ಹತ್ಯೆಯ ಭಯ ಎದುರಾಗಿದೆ. ಅವರಿಂದ ನಮಗೆ ರಕ್ಷಣೆ ಬೇಕೆಂದು ಅನಾಮಿಕಾ ಮನವಿಯನ್ನು ಕೂಡ ಮಾಡಿಕೊಂಡಿದ್ದರು.

ಈ ಹಿನ್ನೆಲೆ ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್‌ ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಮದುವೆಯಾಗಿದೆ ಎಂಬ ವಿಷಯ ತಿಳಿದಿದ್ದರೂ ಮಹಿಳೆ ಆತನೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಅದು ತಪ್ಪಲ್ಲ ಎಂದು ಕೋರ್ಟ್ ಹೇಳಿತ್ತು.

ಮತ್ತೊಂದು ಕಡೆ ಪ್ರತ್ಯೇಕ ಅರ್ಜಿ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠ ಇನ್ನೊಂದು ತೀರ್ಪು ನೀಡಿದ್ದು, ಪತ್ನಿಯೊಂದಿಗೆ ಅಸಹಜ ಲೈಂ*ಗಿಕ ಕ್ರಿಯೆಗಳು ಲೈಂ*ಗಿಕ ದೌರ್ಜನ್ಯವಲ್ಲ ಎಂದು ಆದೇಶ ನೀಡಿತ್ತು. ಇಂತಹ ಸಂದರ್ಭಗಳಲ್ಲಿ ಪತ್ನಿಯ ಒಪ್ಪಿಗೆ ಅಪ್ರಸ್ತುತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ನ್ಯಾಯಾಲಯ ನೀಡಿದ ಈ ಎರಡು ತೀರ್ಪುಗಳು ಸದ್ಯ ಸಾರ್ವತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವರ ಅಸಮಾಧಾನಕ್ಕೆ ಕೂಡ ಕಾರಣವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತೀವೃ ಆಕ್ರೋಶ ಕೂಡ ವ್ಯಕ್ತವಾಗುತ್ತಿದ್ದು ಸದ್ಯ ಇವೆರಡು ತೀರ್ಪಿನ ಕುರಿತು ನಟಿ ಖುಷ್ಬೂ ಸುಂದರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮಹಿಳೆಯರಿಗೆ ಹಿನ್ನಡೆಯಾಗುವಂತಹ ತೀರ್ಪುಗಳಿವು ಎಂದಿದ್ದಾರೆ.

why-marry-khushbu-sundar-slams-regressive-verdicts-on-consent-and-infidelity

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಖುಷ್ಬೂ ಹತಾಶದಾಯಕ ಮತ್ತು ನಿರಾಶದಾಯಕ ಸುದ್ದಿಗಳಿವು ಎಂದು ಹೇಳಿದ್ದಾರೆ. ನ್ಯಾಯಾಲಯ ಮತ್ತು ಕಾನೂನಿನ ಮೇಲೆ ನನಗೆ ಅಪಾರವಾದ ಗೌರವ ಇದೆ ಎಂದು ಹೇಳಿರುವ ಖುಷ್ಬೂ ಇಂತಹ ತೀರ್ಪು ಹೊರ ಬಂದರೆ ನ್ಯಾಯಕ್ಕಾಗಿ ಮಹಿಳೆಯರು ಎಲ್ಲಿ ಹೋಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಸ್ವಾಭಾವಿಕ-ಅಸ್ವಾಭಾವಿಕ ಲೈಂ*ಗಿಕ ಕ್ರಿಯೆ ಯಾವುದೇ ಕ್ರಿಯೆ ಇರಲಿ ಬೇಕು- ಬೇಡ ಎಂದು ಹೇಳುವ ಹಕ್ಕು ಮಹಿಳೆಗಿದೆ ಎಂದು ಹೇಳಿರುವ ಖುಷ್ಬೂ ಮಹಿಳೆಯ ನಿರ್ಧಾರವನ್ನು ಪುರುಷರು ಗೌರವಿಸಲೇಬೇಕು ಎಂದು ಹೇಳಿದ್ದಾರೆ. ಬಲವಂತದ ಯಾವುದೇ ಕೃತ್ಯವು ಅ*ತ್ಯಾಚಾರ ಎಂದು ಪರಿಗಣಿಸಲ್ಪಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಖುಷ್ಬೂ ಮದುವೆಯಾದ ಗಂಡು ಮದುವೆಯಾಗಿರುವಾಗಲೇ ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧ ಹೊಂದುವುದು ಸರಿಯೇ? ಈ ನಿಯಮ ಕೇವಲ ಪುರುಷರಿಗೆ ಮಾತ್ರವೇ ಅಥವಾ ಮಹಿಳೆಯರಿಗೂ ಅನ್ವಯಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರೆದು ಇವೆಲ್ಲವೂ ಕಾನೂನು ಬದ್ಧವಾಗಿ ಸರಿಯಾಗಿದ್ದರೆ, ಮದುವೆಯಾಗುವುದಾದರೂ ಯಾಕೆ ? ಎಂದು ಕೂಡ ಪ್ರಶ್ನೆ ಮಾಡಿರುವ ಖುಷ್ಬೂ, ಮಹಿಳೆಯರಿಗೆ ಸಿಗುವ ನ್ಯಾಯದ ವಿಷಯದಲ್ಲಿ ಕಾನೂನು ಇನ್ನಷ್ಟು ಸಹಾನುಭೂತಿ ತೋರಲಿ ಎಂದು ಆಶಿಸುತ್ತೇನೆ, ಕಾನೂನುಗಳು ಅವಳ ಘನತೆ ಮತ್ತು ಸಮಗ್ರತೆಯನ್ನು ರಕ್ಷಿಸಬೇಕಾಗಿದೆ ಎಂದಿದ್ಧಾರೆ.

More from Filmibeat

English summary
“If this is lawfully fine, why marry?” Khushbu Sundar slams recent High Court rulings on consensual live-ins for married men and marital consent. Is the law protecting dignity or licensing betrayal? Read why the actress-politician calls these verdicts "deeply regressive."
Read more about: kushboo sundar court kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X