ವಿಡಿಯೋ ಕಾಲ್‌ನಲ್ಲಿ ನಿಶ್ವಿತಾರ್ಥ.. ಜಪಾನ್‌ನಲ್ಲಿ ಮದುವೆ; ವಿಶೇಷ ಚೇತನ ವರನ ಮದ್ವೆಗೆ ಸಿನಿಮಾ ಮಂದಿ ದೌಡು

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಏನಾದರೂ ಒಂದು ವಿಷಯವನ್ನು ಚರ್ಚೆ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಸಿನಿಮಾ ತಾರೆಯರ ವಿಷಯ ಬಂತು ಅಂದರೆ ಮುಗಿದೇ ಹೋಯ್ತು. ಇಡೀ ದಿನ ಅದೇ ವಿಷಯ ಟ್ರೆಂಡಿಂಗ್‌ನಲ್ಲಿ ಇರುತ್ತೆ. ಇಲ್ಲೊಂದು ಮದುವೆ ವಿಷಯ ಕೂಡ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಈ ಮದುವೆ ಬಗ್ಗೆ ಪರ ವಿರೋಧ ಚರ್ಚೆಗಳನ್ನು ಮಾಡುತ್ತಿದ್ದಾರೆ.

ಅಷ್ಟಕ್ಕೂ ಈ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರವಾಗಿ ಚರ್ಚೆಯಾಗುವುದಕ್ಕೆ ಕಾರಣವಿದೆ. ತಮಿಳಿನ ಹಿರಿಯ ನಟ ನೆಪೋಲಿಯನ್ ತಮ್ಮ ಪುತ್ರ ಧನೂಷ್ ಮದುವೆ ಮಾಡುತ್ತಿದ್ದಾರೆ. ಇದೇ ಮದುವೆ ಕೆಲವು ದಿನಗಳ ಕಾಲ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದೆ. ನೆಪೋಲಿಯನ್ ಪುತ್ರ ಧನೂಷ್ ವಿಶೇಷ ಚೇತನ ಯುವಕ. ಬಾಲ್ಯದಿಂದಲೇ ಅವರಿಗೆ ಆರೋಗ್ಯ ಸಮಸ್ಯೆಯಿದೆ. ಹೀಗಾಗಿ ಈ ತಮಿಳು ನಟ ಭಾರತ ಬಿಟ್ಟು ಮಗನಿಗೆ ಅಮೆರಿಕಾದಲ್ಲಿ ನೆಲೆಸಿದ್ದರು.

Why Tamil actor Napoleon s son Dhanoosh Marriege in Japan is discussed in social media

ಹಲವು ವರ್ಷಗಳಿಂದ ಅಮೆರಿಕದಲ್ಲಿ ಇದ್ದರೂ, ತಮ್ಮ ಮಗನಿಗೆ ತಮಿಳುನಾಡಿನ ಹೆಣ್ಣನ್ನೇ ತರಬೇಕು ಎಂದು ಬಯಸಿದ್ದರು. ಅದರಂತೆ ಕೆಲವೇ ತಿಂಗಳ ಹಿಂದಷ್ಟೇ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಅಲ್ಲಿಂದ ಈ ಮದುವೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಟ್ರೋಲ್‌ಗಳಾಗುತ್ತಿವೆ. ಇವೆಲ್ಲದರ ನಡುವೆ ನಾಳೆ (ನವೆಂಬರ್ 7) ಜಪಾನ್‌ನಲ್ಲಿ ಮದುವೆ ಕೂಡ ನಡೆಯಲಿದೆ. ಅದಕ್ಕೆ ತಮಿಳು ಚಿತ್ರರಂಗ ಭಾಗಿಯಾಗಲಿದೆ.

ನೆಪೋಲಿಯನ್ ಒಂದು ಕಾಲದಲ್ಲಿ ತಮಿಳಿನ ಜನಪ್ರಿಯ ನಟ ಕಮ್ ರಾಜಕೀಯ ಮುಖಂಡ. ತಮ್ಮ ಕಿರಿಯ ಪುತ್ರ ಧನುಷ್‌ ಚಿಕ್ಕವನಿದ್ದಾಗಲೇ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈ ಕಾರಣಕ್ಕೆ ಜೀವನ ಪರ್ಯಂತ ವೀಲ್ ಚೇರ್‌ನಲ್ಲಿಯೇ ಇರಬೇಕಾಗುತ್ತೆ. ಈ ಕಾರಣಕ್ಕೆ ಕುಟುಂಬ ಸಮೇತ ಅಮೆರಿಕಗೆ ಶಿಫ್ಟ್ ಆಗಿದ್ದರು. ಮಗನ ಪರಿಸ್ಥಿತಿ ಹೀಗಿದ್ದರಿಂದ ಮದುವೆಯೇ ಆಗುವುದಿಲ್ಲ ಎಂದು ಭಾವಿಸಿದ್ದ ನೆಪೋಲಿಯನ್ ಭಾವಿಸಿದ್ದರು.

ಆದರೆ, ನೆಪೋಲಿಯನ್ ಅವರ ಪುತ್ರ ಧನುಷ್‌ ಅವರನ್ನು ಮದುವೆ ಆಗಲು ತಮಿಳುನಾಡಿನ ವಧು ಒಪ್ಪಿದ್ದರು. ಆದರೆ, ನಿಶ್ಚಿತಾರ್ಥಕ್ಕೂ ಧನುಷ್ ಬರಲು ಸಾಧ್ಯವಾಗದೇ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಈ ವಿಷಯ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ಜೋಡಿಯನ್ನು ಹರಸಿದ್ದರು. ಮತ್ತೆ ಕೆಲವರು ಹಣಕ್ಕಾಗಿಯೇ ಮದುವೆಯಾಗುತ್ತಿದ್ದಾರೆಂದು ವಧುವನ್ನು ಟ್ರೋಲ್ ಮಾಡಿದ್ದರು. ಆಗ ತಮ್ಮ ಮಗ ಹಾಗೂ ಭಾವಿ ಸೊಸೆ ಪರಸ್ಪರ ಚರ್ಚೆ ಮಾಡಿಕೊಂಡೇ ಈ ಮದುವೆ ಒಪ್ಪಿದ್ದಾರೆಂದು ಸ್ವತ: ನಟ ನೆಪೋಲಿಯನ್ ಹೇಳಿದ್ದರು.

ಧನುಷ್‌ಗೆ ಈಗ 25 ವರ್ಷ ತನ್ನ ಆರೋಗ್ಯ ಸಮಸ್ಯೆಯ ಹೊರತಾಗಿಯೂ ತನ್ನ ತಂದೆಯ ವ್ಯವಹಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಧನುಷ್ ಕೈ ಹಿಡಿಯುವುದಕ್ಕೆ ಅಕ್ಷಯ ಎಂಬ ಹೆಣ್ಣು ಮಗಳು ಮುಂದೆ ಬಂದಿದ್ದಾರೆ. ನಾಳೆ (ನವೆಂಬರ್‌ 7) ತಮ್ಮ ಮಗನ ಮದುವೆಯನ್ನು ಜಪಾನ್‌ನ ಟೋಕಿಯೋದಲ್ಲಿ ಅದ್ಧೂರಿಯಾಗಿ ಮಾಡಲಿದ್ದಾರೆ. ಅದಕ್ಕಾಗಿ ತಮಿಳು ಚಿತ್ರರಂಗದ ಗಣ್ಯರಿಗೆಲ್ಲ ಆಹ್ವಾನ ನೀಡಲಾಗಿದೆ. ಬಹುತೇಕ ಕಾಲಿವುಡ್ ಈ ಮದುವೆಯಲ್ಲಿ ಭಾಗಿಯಾಗುತ್ತಿದೆ ಎನ್ನಲಾಗಿದೆ.

ಧನುಷ್ ಮದುವೆಗೂ ಮುನ್ನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜಪಾನ್‌ನಲ್ಲಿ ನಡೆಯುತ್ತಿರುವ ಈ ಮದುವೆಗೆ ಕೋಟಿಗಳಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಮೀನಾ, ಶರತ್ ಕುಮಾರ್, ರಾಧಿಕಾ ಶರತ್ ಕುಮಾರ್, ಕಲಾ ಮಾಸ್ಟರ್ ಸೇರಿದಂತೆ ಕಾಲಿವುಡ್‌ನ ದಿಗ್ಗಜರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

More from Filmibeat

English summary
Why Tamil actor Napoleon's son Dhanoosh Marriege in Japan is discussed in social media
Read more about: kollywood marriage filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X