ಧನುಷ್ ಹಾಡಿದ್ದ 'ಕೊಲವೆಡಿ ಡಿ' ಸಾಂಗ್ ನನ್ನ ಚಿತ್ರಕ್ಕೆ ಮಾರಕವಾಗಿಬಿಡ್ತು; ಐಶ್ವರ್ಯ ರಜನಿಕಾಂತ್ ಬೇಸರ

ದಶಕದ ಹಿಂದೆ ತಮಿಳಿನ '3' ಚಿತ್ರದ 'ವೈ ದಿಸ್ ಕೊಲವೆಡಿ ಡಿ' ಸಾಂಗ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಸೋಶಿಯಲ್ ಮೀಡಿಯಾ ಹವಾ ಇಷ್ಟು ಇಲ್ಲದ ಕಾಲದಲ್ಲಿ, ಇಂಟರ್‌ನೆಟ್ ಇಷ್ಟು ಅಗ್ಗವಾಗಿ ಸಿಗದೇ ಇದ್ದ ಕಾಲದಲ್ಲೇ ಈ ಹಾಡು ದಾಖಲೆ ಬರೆದುಬಿಟ್ಟಿತ್ತು.

ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಮಾಡಿದ್ದ ಹಾಡಿಗೆ ಧನುಷ್ ಸಾಹಿತ್ಯ ಬರೆದು ಹಾಡಿದ್ದರು. ತಂಗ್ಲೀಷ್ ಸಾಹಿತ್ಯದ ಈ ಹಾಡು ತಮಿಳು ಮಾತ್ರವಲ್ಲ ಇಡೀ ಏಷ್ಯಾದಲ್ಲಿ ಸಂಗೀತ ಪ್ರೇಮಿಗಳ ಮನಗೆದ್ದಿತ್ತು. ಅವತ್ತಿನ ಕಾಲಕ್ಕೆ ಕೋಟಿ ಕೋಟಿ ವೀವ್ಸ್ ಸಾಧಿಸಿ ದಾಖಲೆ ಬರೆದುಬಿಟ್ಟಿತ್ತು. ಪ್ರೀತಿಲೀ ಸೋತ ಹುಡುಗನ ನೋವನ್ನು ಈ ಹಾಡಿನಲ್ಲಿ ತುಂಬಿಕೊಡುವ ಪ್ರಯತ್ನ ಮಾಡಲಾಗಿತ್ತು. ಹಲವು ವರ್ಷಗಳ ಬಳಿಕ ಈ ಹಾಡಿನ ಬಗ್ಗೆ ಐಶ್ವರ್ಯ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ.

Why This Kolaveri Di song swallow my 3 movie, says Aishwarya Rajinikanth

ಐಶ್ವರ್ಯ ರಜನಿಕಾಂತ್ ನಿರ್ದೇಶನದ '3' ಚಿತ್ರಕ್ಕಾಗಿ ಈ ಹಾಡನ್ನು ಕಟ್ಟಿಕೊಡಲಾಗಿತ್ತು. ಧನುಷ್ನ ಜೊತೆಗೆ ಶ್ರುತಿ ಹಾಸನ್ ಈ ಚಿತ್ರದಲ್ಲಿ ನಟಿಸಿದ್ದರು. ಧನುಷ್ ಹಾಗೂ ಐಶ್ವರ್ಯ 2 ವರ್ಷಗಳ ಹಿಂದೆ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಆದರೆ ಗಂಡ-ಹೆಂಡತಿ ಸೇರಿ 13 ವರ್ಷಗಳ ಹಿಂದೆ '3' ಚಿತ್ರದಲ್ಲಿ ಕೆಲಸ ಮಾಡಿದ್ದರು. ಕಳೆದ ವರ್ಷ ಇದೇ ಸಿನಿಮಾ ರೀ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು.

ಸದ್ಯ ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಚಾರದ ವೇಳೆ ತಲೈವಾ ಪುತ್ರಿ 'ವೈ ದಿಸ್ ಕೊಲವೆರಿ ಡಿ' ಹಾಡಿನ ಬಗ್ಗೆ ನೆನಪಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗುತ್ತದೆ ಎಂದೇ ಭಾವಿಸಲಾಗಿದೆ. ಆದರೆ 'ವೈ ದಿಸ್ ಕೊಲವೆರಿ ಡಿ' ಹಾಡು ನನ್ನ '3' ಮಾರಕವಾಗಿಬಿಡ್ತು ಎಂದು ಐಶ್ವರ್ಯ ಹೇಳಿದ್ದಾರೆ.

"ವೈ ದಿಸ್ ಕೊಲವೆರಿ ಡಿ ಸಾಂಗ್ ಚಿತ್ರಕ್ಕೆ ದೊಡ್ಡ ಒತ್ತಡ ಆಗಿಬಿಡ್ತು. ನನ್ನ ಮಟ್ಟಿಗೆ ಹೇಳಬೇಕು ಅಂದ್ರೆ ಅದು ಸರ್‌ಪ್ರೈಸ್ ಜೊತೆ ಶಾಕಿಂಗ್ ಆಗಿತ್ತು. ಯಾಕಂದರೆ ನಾನು ಚಿತ್ರದಲ್ಲಿ ಹೇಳುತ್ತಿದ್ದದ್ದು ಬೇರೆ. ಆದರೆ ಆ ಹಾಡು ಬಂದು ಇಡೀ ಚಿತ್ರವನ್ನು ನುಂಗಿಬಿಡ್ತು. ಇಡೀ ಚಿತ್ರವನ್ನು ಅದೊಂದು ಹಾಡು ಮರೆಸಿಬಿಟ್ಟಿತ್ತು. ಅದು ನನಗೆ ಬಹಳ ಬೇಸರ ತಂದಿತ್ತು."

Why This Kolaveri Di song swallow my 3 movie, says Aishwarya Rajinikanth

"ಯಾಕಂದರೆ ನಾವು ಅಷ್ಟು ಗಂಭೀರವಾದ, ಕಂಟೆಂಟ್ ಇದ್ದಂತಹ ಸಿನಿಮಾ ಅದು. ಇತ್ತೀಚೆಗೆ ಸಿನಿಮಾ ರೀ ರಿಲೀಸ್ ಆದಾಗ ಸಾಕಷ್ಟು ಜನ ಸಿನಿಮಾ ಬಗ್ಗೆ ಮಾತನಾಡಿದರು. 13 ವರ್ಷಗಳ ಹಿಂದೆ ಮೊದಲು ಸಿನಿಮಾ ಬಿಡುಗಡೆ ಆಗಿದ್ದಾಗಲೂ ಅಷ್ಟು ಮಾತನಾಡಿರಲಿಲ್ಲ. ಸಿನಿಮಾ ರೀ ರಿಲೀಸ್ ಆದಾಗ, ಟಿವಿಯಲ್ಲಿ ಬಂದಾಗ ಸಾಕಷ್ಟು ಜನ ಫೋನ್ ಮಾಡಿ ಚೆನ್ನಾಗಿದೆ ಎಂದು ಹೇಳಿದರು. ಅದಕ್ಕೆ ಕಾರಣ ಏನು ಅಂದ್ರೆ ಅದೊಂದು ಹಾಡು ಇಡೀ ಚಿತ್ರವನ್ನು ಮರೆಸಿಬಿಟ್ಟಿತ್ತು."

"ಆ ಹಾಡು ನಮ್ಮ ಚಿತ್ರಕ್ಕೆ ನಿಜಕ್ಕೂ ಸಹಾಯ ಮಾಡಲಿಲ್ಲ. ಆದರೆ ಬಹಳ ಜನರ ಜೀವನಕ್ಕೆ ಸಹಾಯ ಮಾಡಿತು ಅಂದ್ರೆ, ಅದು ಒಳ್ಳೆಯದು. ಈಗ ಎಲ್ಲರೂ ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ತಡ ಆದರೂ ನಮ್ಮ ಕೆಲಸ ಗುರ್ತಿಸುತ್ತಿರುವುದಕ್ಕೆ ಖುಷಿ ಇದೆ. ಆದರೆ ಸಿನಿಮಾ ಬಂದಾಗಲೇ ಆ ಬಗ್ಗೆ ಮಾತನಾಡಿದ್ದರೆ ಅದು ನಿರ್ಮಾಪಕರಿಗೂ ಸಹಾಯ ಆಗ್ತಿತ್ತು ಅಂತ ನನಗೆ ಅನ್ನಿಸುತ್ತಿದೆ" ಎಂದು ಐಶ್ವರ್ಯ ವಿವರಿಸಿದ್ದಾರೆ.

2012ರಲ್ಲಿ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ '3' ಸಿನಿಮಾ ತೆರೆಗೆ ಬಂದಿತ್ತು. 'ವೈ ದಿಸ್ ಕೊಲವೆರಿ ಡಿ' ಸಾಂಗ್ ನೋಡಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿರಸಿಕರಿಗೆ ನಿರಾಸೆ ಕಾದಿತ್ತು.

More from Filmibeat

English summary
Why This Kolaveri Di song overshadow my movie says Aishwarya Rajinikanth;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X