For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?

  |

  'ಲೇಡಿ ಸೂಪರ್ ಸ್ಟಾರ್' ನಯನತಾರಾ ಹುಟ್ಟುಹಬ್ಬವನ್ನು ತನ್ನ ಕುಟುಂಬ ಸದಸ್ಯರು ಅದ್ಧೂರಿಯಾಗಿ ಆಚರಿಸಿದ್ದಾರೆ. ನವೆಂಬರ್ 18ರ ಸಂಜೆ ನಯನತಾರಾಗೆ ಸರ್ಪ್ರೈಸ್ ನೀಡಿರುವ ಅಪ್ಪ-ಅಮ್ಮ ಹಾಗೂ ಸಹೋದರ ಮನೆಯಲ್ಲಿಯೇ ನಯನತಾರಾ ಬರ್ತಡೇ ಸೆಲೆಬ್ರೇಷನ್ ಆಯೋಜಿಸಿದ್ದರು.

  ಈ ಸಂಭ್ರಮಾಚರಣೆಯಲ್ಲಿ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಭಾಗಿಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ವಿಘ್ನೇಶ್ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿದ್ದ ನಯನತಾರಾ ಅದಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ.

   ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  ಗೋವಾದ ಐಶಾರಾಮಿ ಹೋಟೆಲ್‌ವೊಂದರಲ್ಲಿ ವಿಘ್ನೇಶ್ ಹುಟ್ಟುಹಬ್ಬ ಆಯೋಜಿಸಿದ್ದರು. ಹಾಗಾಗಿ, ನಯನತಾರಾ ಬರ್ತಡೇಯನ್ನು ವಿಘ್ನೇಶ್ ಮತ್ತಷ್ಟು ವಿಶೇಷವಾಗಿ ಆಚರಿಸಬಹುದು ಎಂಬ ಕುತೂಹಲವಿತ್ತು. ಆದ್ರೆ, ಕಾರಣಾಂತರಗಳಿಂದ ನಯನತಾರಾ ಬರ್ತಡೇಯಲ್ಲಿ ವಿಘ್ನೇಶ್ ಪಾಲ್ಗೊಂಡಿಲ್ಲ.

  ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ವಿಘ್ನೇಶ್ ''ನಮ್ಮ ನೆಚ್ಚಿನ ಡಿಯರ್‌ಗೆ ಅಪ್ಪ-ಅಮ್ಮ ಹಾಗೂ ಸಹೋದರ ವಿಶೇಷವಾದ ಸರ್ಪ್ರೈಸ್ ನೀಡಿದ್ದಾರೆ. ಆದ್ರೆ, ಈ ಸಂತಸವನ್ನು ನಾನು ಮಿಸ್ ಮಾಡಿಕೊಂಡೆ'' ಎಂದು ಬರೆದುಕೊಂಡಿದ್ದಾರೆ.

  ನಯನತಾರಾ ಹುಟ್ಟುಹಬ್ಬಕ್ಕೆ ಪೋಷಕರಿಂದ ಸಿಕ್ತು ಸರ್ಪ್ರೈಸ್ ಗಿಫ್ಟ್ನಯನತಾರಾ ಹುಟ್ಟುಹಬ್ಬಕ್ಕೆ ಪೋಷಕರಿಂದ ಸಿಕ್ತು ಸರ್ಪ್ರೈಸ್ ಗಿಫ್ಟ್

  ನಯನತಾರಾ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳದ ವಿಘ್ನೇಶ್, ಎಲ್ಲಿ ಹೋಗಿದ್ದರು ಯಾವ ಕಾರಣದಿಂದ ಬಂದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ.

  Why Vignesh Shivan Missed Nayanthara Birthday Celebration?
  ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

  ಕಳೆದ ನಾಲ್ಕೈದು ವರ್ಷದಿಂದ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿದ್ದು, ಮದುವೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹುಟ್ಟುಹಬ್ಬದ ವಿಶೇಷವಾಗಿ 'ನೆಟ್ರಿಕಣ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರವನ್ನು ವಿಘ್ನೇಶ್ ನಿರ್ಮಿಸುತ್ತಿದ್ದಾರೆ. ಇನ್ನು ವಿಘ್ನೇಶ್ ನಿರ್ದೇಶನದ ಚಿತ್ರದಲ್ಲಿ ನಯನತಾರಾ, ಸಮಂತಾ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ.

  English summary
  Why director Vignesh Shivan missed his girlfriend nayanthara birthday celebration on yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X