ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಬಿಗ್‌ ಸರ್‌ಪ್ರೈಸ್

ತಮಿಳುನಾಡು ಚುನಾವಣೆಗೂ ಮುನ್ನ ನಟ ವಿಜಯ್ ವೈಯಕ್ತಿಕ ಜೀವನ ಬೀದಿಗೆ ಬಂದಿತ್ತು. ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪತಿಗೆ ನಟಿಯೊಬ್ಬಳ ಜೊತೆಗಿನ ಒಡನಾಟವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದರು. ವಿಜಯ್ ಮಗ ಜೇಸನ್ ಸಂಜಯ್ ಹಾಗೂ ಮಗಳು ದಿವ್ಯಾ ಸಾಶಾ ಕೂಡ ಅಮ್ಮನ ಪರ ನಿಂತಿದ್ದಾರೆ.

ಈಗಾಗಲೇ ನಿರ್ದೇಶಕನಾಗಿ ವಿಜಯ್ ಮಗ ಜೇಸನ್ ಚಿತ್ರರಂಗ ಪ್ರವೇಶಿಸಿದ್ದಾನೆ. 'ಸಿಗ್ಮಾ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾನೆ. ಕೆಲ ದಿನಗಳಿಂದ ವಿಜಯ್ ಇಂದ ಮಕ್ಕಳು ಅಂತರ ಕಾಯ್ದುಕೊಂಡಿದ್ದಾರೆ. ರಾಜಕೀಯರಂಗದಲ್ಲಿ ತಂದೆ ಯಶಸ್ಸು ಗಳಿಸಿದ್ರು ಹತ್ತಿರವಾಗುವ ಪ್ರಯತ್ನ ಮಾಡಲಿಲ್ಲ. ವಿಜಯ್ ಚುನಾವಣೆ ಗೆಲುವನ್ನು ಸಂಭ್ರಮಿಸಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಕೂಡ ಮಾಡಲಿಲ್ಲ.

Will Jason Sanjay s Sigma Clash With Vijay s Jannayagan Release Date Buzz Sparks Box Office Debate

ಚೆನ್ನೈ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದರು. ಅದ್ಧೂರಿ ಕಾರ್ಯಕ್ರಮಕ್ಕೆ ಪೋಷಕರು ಸೇರಿದಂತೆ ಇಡೀ ಕುಟುಂಬ ಸಾಕ್ಷಿ ಆಗಿತ್ತು. ನಟಿ ತ್ರಿಷಾ ಹಾಜರಾಗಿದ್ದು ಭಾರೀ ಸುದ್ದಿ ಆಗಿತ್ತು. ಆದರೆ ವಿಜಯ್ ಪತ್ನಿ ಸಂಗೀತಾ ಹಾಗೂ ಮಕ್ಕಳು ಬರಲಿಲ್ಲ. ಆ ಮೂಲಕ ತಾವು ತಾಯಿಯ ಜೊತೆ ಇರುವುದಾಗಿ ಸಂದೇಶ ರವಾನಿಸಿದ್ದಾರೆ. ಅಮ್ಮಂದಿರ ದಿನದಂದು ವಿಜಯ್ ಪ್ರಮಾಣ ವಚನ ಕಾರ್ಯಕ್ರಮ ನಡೀತು. ತಾಯಿ ಶೋಭಾ ಚಂದ್ರಶೇಖರ್ ಅವರಿಗೆ ಅದು ಅಪರೂಪದ ಉಡುಗೊರೆ ಆಗಿತ್ತು.

ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆ ವಿಜಯ್ ಅಕೌಂಟ್ ಅನ್ನು ಮಗ ಜೇಸನ್ ಅನ್‌ಫಾಲೋ ಮಾಡಿದ್ದಾರೆ. ಇದೆಲ್ಲದರ ನಡುವೆ ಜೇಸನ್ ತಮ್ಮ ಮೊದಲ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. 'ಜನನಾಯಗನ್' ಸಿನಿಮಾ ಬಿಡುಗಡೆ ಚರ್ಚೆ ನಡುವೆ 'ಸಿಗ್ಮಾ' ರಿಲೀಸ್ ಡೇಟ್ ಹೊರ ಬಿದ್ದಿದೆ. ಸಂದೀಪ್ ಕಿಶನ್ ನಟನೆಯ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಜುಲೈ 31ರಂದು ತೆರೆಗೆ ಬರಲಿದೆ. ಜೂನ್ 22ರಂದು ವಿಜಯ್ ಹುಟ್ಟುಹಬ್ಬ. ಅದಕ್ಕಿಂತ 3 ದಿನ ಮುನ್ನ ಅಂದ್ರೆ ಜೂನ್ 19 ಅಥವಾ ಜುಲೈ 3ರಂದು 'ಜನನಾಯಗನ್' ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅದೇ ಸಮಯದಲ್ಲಿ 'ಸಿಗ್ಮಾ' ಚಿತ್ರ ತೆರೆಗೆ ಬರ್ತಿದೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

Will Jason Sanjay s Sigma Clash With Vijay s Jannayagan Release Date Buzz Sparks Box Office Debate

ಬಾಕ್ಸಾಫೀಸ್‌ನಲ್ಲಿ ತಂದೆ ಚಿತ್ರಕ್ಕೆ ಜೇಸನ್ ಸವಾಲು ಹಾಕ್ತಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಮತ್ತೊಂದು ಕಡೆ ಸಂಕ್ರಾಂತಿಗೆ ಬರಬೇಕಿದ್ದ 'ಜನನಾಯಗನ್' ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ವಿಜಯ್ ತಮಿಳುನಾಡಿನ ಸಿಎಂ ಆಗಿ ಆಯ್ಕೆ ಆಗಿರುವುದರಿಂದ ಸೆನ್ಸಾರ್ ಸಮಸ್ಯೆ ಬಗೆಹರಿದು ಬೇಗ ಸಿನಿಮಾ ತೆರೆಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗ್ತಿಲ್ಲ. 'ಜನನಾಯಗನ್' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.

ವಿಜಯ್ ಮಗ ಜೇಸನ್ ಹೀರೊ ಆಗಿ ಚಿತ್ರರಂಗ ಪ್ರವೇಶಿಸುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅಚ್ಚರಿ ಎನ್ನುವಂತೆ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಫರಿಯಾ ಅಬ್ದುಲ್ಲಾ, ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಅನ್ಬು ಥಾಸನ್, ಯೋಗ್ ಜಪೀ, ಮಗಲಕ್ಷ್ಮಿ, ಶೀಲಾ ರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಗಣ 'ಸಿಗ್ಮಾ' ಚಿತ್ರದಲ್ಲಿದೆ. ಚೆನ್ನೈ, ಥೈಲ್ಯಾಂಡ್, ಥಲಕೋನಾ ಮತ್ತು ಸೇಲಂನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.

ಕಥೆ, ಚಿತ್ರಕಥೆ ಬರೆದು ಜೇಸನ್ ಆಕ್ಷನ್ ಕಟ್ ಹೇಳಿದ್ದಾರೆ. ಎಸ್. ತಮನ್ ಸಂಗೀತ 'ಸಿಗ್ಮಾ' ಚಿತ್ರಕ್ಕಿದೆ. ಜೂನ್ ಕೊನೆ ಅಥವಾ ಜುಲೈ ಆರಂಭದಲ್ಲಿ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಕೂಡ ಬಿಡುಗಡೆ ಆಗುತ್ತಾ ಕಾದು ನೋಡಬೇಕಿದೆ.

Read more about: vijay box office kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X