For Quick Alerts
  ALLOW NOTIFICATIONS  
  For Daily Alerts

  '2.0' Vs 'ಪೊನ್ನಿಯಿನ್ ಸೆಲ್ವನ್': ಆ ದಾಖಲೆ ಮುರಿಯುತ್ತಾ ಮಣಿ ಡ್ರೀಮ್ ಪ್ರಾಜೆಕ್ಟ್?

  |

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್ ಆಗಿದೆ. ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದು, ಟಿಕೆಟ್ಸ್ ಭರ್ಜರಿಯಾಗಿ ಮಾರಾಟವಾಗ್ತಿದೆ. ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥಾಹಂದರದ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಾಲಿವುಡ್ ಸೂಪರ್‌ ಸ್ಟಾರ್‌ಗಳು ಚಿತ್ರದಲ್ಲಿ ನಟಿಸಿದ್ದಾರೆ.

  ಹೇಳಿ ಕೇಳಿ 'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಸಿನಿಮಾ. ಇನ್ನು ಮಣಿರತ್ನಂ ಸಿನಿಮಾಗಳಿಗೆ ಬೇರೆ ಭಾಷೆಗಳಲ್ಲೂ ಭಾರೀ ಕ್ರೇಜ್ ಇದೆ. 'ಬಾಹುಬಲಿ' ರೀತಿಯಲ್ಲೇ ಈ ಕಾಸ್ಟ್ಯೂಮ್ ಡ್ರಾಮಾನ ಬಹಳ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ ಹಾಗೂ ತ್ರಿಶಾರಂತಹ ಕಲಾವಿದರು ತಾರಾಗಣದಲ್ಲಿದ್ದಾರೆ. 400 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಈ ಹಿಂದಿನ ಎಲ್ಲಾ ತಮಿಳು ಸಿನಿಮಾಗಳ ದಾಖಲೆಯನ್ನು ಈ ಸಿನಿಮಾ ಅಳಿಸಿ ಹಾಕುತ್ತದೆ ಎನ್ನುವ ನಿರೀಕ್ಷೆ ಇದೆ.

  ಕಾಲಿವುಡ್‌ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆ ರಜಿನಿಕಾಂತ್ ಹಾಗೂ ಅಕ್ಷಯ್‌ಕುಮಾರ್ ನಟನೆಯ '2.0' ಸಿನಿಮಾ ಹೆಸರಿನಲ್ಲಿದೆ. 2018ರಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಶಂಕರ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ತ್ರಿಡಿ ಕನ್ನಡಕದಲ್ಲಿ ಮಗದಷ್ಟು ಮಜಾ ಕೊಟ್ಟಿದ್ದು ಸುಳ್ಳಲ್ಲ. ಸಿನಿಮಾ ಬಾಕ್ಸಾಫೀಸ್‌ನಲ್ಲಿ 730 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಆ ದಾಖಲೆಯನ್ನು 'ಪೊನ್ನಿಯಿನ್ ಸೆಲ್ವನ್' ಮುರಿಯುತ್ತೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

  ಈಗಾಗಲೇ 'ಪೊನ್ನಿಯಿನ್ ಸೆಲ್ವನ್' ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬುಕ್ಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಭಾರತದಲ್ಲಿ 1 ಕೋಟಿ ರೂ. ಮೊತ್ತದ ಟಿಕೆಟ್‌ಗಳು ಮಾರಾಟವಾಗಿದೆ. ಚಿತ್ರತಂಡ ದೇಶದ ವಿವಿಧ ನಗರಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡ್ತಿದೆ. ಇತ್ತೀಚೆಗೆ ಬೆಂಗಳೂರಿಗೂ ತಂಡ ಬಂದು ಹೋಗಿತ್ತು. ಇನ್ನು ಬೆಂಗಳೂರಿನಲ್ಲೂ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ರೆಸ್ಪಾನ್ಸ್ ಸೂಪರ್ ಎನ್ನುವಂತಿದೆ. ಕೆಲ ಶೋಗಳ ಟಿಕೆಟ್ಸ್ ಈಗಾಗಲೇ ಸೋಲ್ಡ್ ಔಟ್ ಆಗೋಗಿದೆ.

  will-ponniyin-selvan-break-the-record-of-2point0-total-collection-of-730-crore

  ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್‌ ಸೆಲ್ವನ್' ಕಾದಂಬರಿ ಆಧರಿಸಿ ಸಿನಿಮಾ ನಿರ್ಮಿಸಲಾಗಿದೆ. ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಕಥೆಯನ್ನು ಎಳೆ ಎಳೆಯಾಗಿ ತೋರಿಸಲಾಗ್ತಿದೆ. 2 ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ಮತ್ತೊಂದು ಭಾಗ ಮುಂದಿನ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಕನ್ನಡ, ಹಿಂದೆ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ವಿದೇಶಗಳಲ್ಲೂ ಬಹಳ ಅದ್ಧೂರಿಯಾಗಿ ಈ ಪ್ರಿರಿಯಾಡಿಕಲ್ ಡ್ರಾಮಾ ತೆರೆಗೆ ಬರ್ತಿದೆ. 'ಪೊನ್ನಿಯಿನ್‌ ಸೆಲ್ವನ್' ಶಂಕರ್ '2. 0 ರೋಬೊ' ದಾಖಲೆ ಮುರಿತ್ತಾನಾ ಕಾದು ನೋಡಬೇಕು.

  English summary
  Will Ponniyin Selvan break the record of 2Point0 Total collection of 730 crore. Know More
  Sunday, September 25, 2022, 19:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X