ನಾಲ್ಕನೇ ಬಾರಿಗೆ ಒಂದಾಗುತ್ತಾ ವಿಜಯ್ ಮತ್ತು ಅಟ್ಲಿ ಜೋಡಿ?: ನಿರ್ದೇಶಕ ಹೇಳಿದ್ದೇನು?

ತಮಿಳು ನಿರ್ದೇಶಕ ಅಟ್ಲಿ ಚೊಚ್ಚಲ ಬಾಲಿವುಡ್ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಶಾರುಖ್ ಖಾನ್‌ಗೆ ಆಕ್ಷನ್ ಕಟ್ ಹೇಳಿದ್ದ ಜವಾನ್ ಸಿನಿಮಾ ವಿಶ್ವದಾದ್ಯಂತ 750 ಕೋಟಿಗೂ ಹೆಚ್ಚು ಗಳಿಸಿ ನಾಗಾಲೋಟ ಮುಂದುವರೆಸಿದೆ. ಅವರ ನಿರ್ದೇಶನದ ಐದು ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ.

ಇನ್ನು ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಮತ್ತು ಅಟ್ಲಿ ತಮಿಳು ಅತ್ಯಂತ ಯಶಸ್ವಿ ನಟ - ನಿರ್ದೇಶಕ ಜೋಡಿಗಳಲ್ಲಿ ಒಂದು. ವಿಜಯ್ ಮತ್ತು ಅಟ್ಲಿ ಕಾಂಬಿನೇಷನ್‌ನಲ್ಲಿ ಬಂದ ಥೆರಿ, ಮೆರ್ಸಲ್ ಮತ್ತು ಬಿಗಿಲ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿವೆ. ಹೀಗಾಗಿ ಈ ಜೋಡಿ ಮತ್ತೆ ಒಂದಾಗುತ್ತಾ ಎಂಬ ಪ್ರಶ್ನೆ ಪದೇ ಪದೇ ಕೇಳಿಬರುತ್ತಿದೆ.

Will Vijay and Atlee reunite for fourth time? what Atlee says

ನಾಲ್ಕನೇ ಬಾರಿ ಒಂದಾಗುತ್ತಾ ವಿಜಯ್ - ಅಟ್ಲಿ ಜೋಡಿ?

ಮನರಂಜನೆಯ ಮತ್ತು ಸಾಮಾಜಿಕ ಸಂದೇಶವನ್ನು ಹೊತ್ತು ತರುವ ವಿಜಯ್ - ಅಟ್ಲಿ ಜೋಡಿಗೆ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಇವರಿಬ್ಬರು ಮತ್ತೆ ನಾಲ್ಕನೇ ಬಾರಿಗೆ ಒಂದಾಗಲಿ ಎಂದು ಬಯಸುತ್ತಿದ್ದು, ಅದಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಗ್ಗೆ 'ಪಿಂಕ್ವಿಲ್ಲಾ' ಜೊತೆಗಿನ ಸಂದರ್ಶನದಲ್ಲಿ ಜವಾನ್ ನಿರ್ದೇಶಕ ಅಟ್ಲಿ ಮಾತನಾಡಿದ್ದಾರೆ.

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಯಶಸ್ಸಿನ ನಂತರ ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ "ವಿಜಯ್ ಅವರ ಜೊತೆಗೆ ನಾಲ್ಕನೇ ಸಿನಿಮಾ ಖಂಡಿತ ಮಾಡುತ್ತೇವೆ. ಅದರಲ್ಲೇಕೆ ಅನುಮಾನ..? ನಾನು ಕೇವಲ 5 ಚಿತ್ರಗಳನ್ನು ಮಾಡಿದ್ದೇನೆ ಅದರಲ್ಲಿ 3 ವಿಜಯ್ ಅವರೊಂದಿಗೆ. ಹಾಗಾಗಿ, ಸರಿಯಾದ ಸಮಯವಿದ್ದಾಗ, ನಾವು ಮುಂದಿನ ಸಿನಿಮಾ ಕೂಡ ಮಾಡಲಿದ್ದೇವೆ" ಎಂದು ಅಟ್ಲಿ ಖಚಿತಪಡಿಸಿದ್ದಾರೆ.

ಅಟ್ಲಿ ಮತ್ತು ದಳಪತಿ ವಿಜಯ್ ಸಿನಿಮಾ ಜೊತೆ ಜೊತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಪರಸ್ಪರರ ತಮ್ಮ ಐಡಿಯಾಗಳನ್ನು ಹಂಚಿಕೊಳ್ಳುವ ಜೊತೆಗೆ ಅಟ್ಲಿಗೆ ವಿಜಯ್ ಸಾಥ್ ನೀಡುತ್ತಾರೆ. ಇನ್ನೊಂದು ವಿಷಯವೆಂದರೇ, ಎಲ್ಲರಿಗೂ 'ಜವಾನ್' ಬಗ್ಗೆ ವಿವರಗಳು ತಿಳಿಯುವ ಮೊದಲೇ ವಿಜಯ್ ಅವರಿಗೆ ಎಲ್ಲಾ ಮಾಹಿತಿಯೂ ಇತ್ತು ಎಂದು ಅಟ್ಲಿ ಹೇಳಿದ್ದಾರೆ. ನಾನು ಸಿನಿಮಾ ಬಗ್ಗೆ ಪ್ರತಿ ವಿಷಯವನ್ನು ಹಂಚಿಕೊಂಡ ಏಕೈಕ ವ್ಯಕ್ತಿ ವಿಜಯ್ ಎಂದಿದ್ದಾರೆ.

Will Vijay and Atlee reunite for fourth time? what Atlee says

ಸ್ಕ್ರಿಪ್ಟ್‌ನಿಂದ ಶೂಟಿಂಗ್‌ವರೆಗೆ ವಿಜಯ್ ಜೊತೆಯಿದ್ದರು!

"ಜವಾನ್ ಸಿನಿಮಾವನ್ನು ಶಾರುಖ್ ಖಾನ್‌ಗಾಗಿ ಮಾಡಲಾಗಿತ್ತು. ಅದನ್ನು ಬೇರೆ ಯಾರಾದರೂ ಮಾಡಬಹುದು ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ಮೊದಲ ದಿನದಿಂದ, ಸ್ಕ್ರಿಪ್ಟ್‌ನಿಂದ ಶೂಟಿಂಗ್‌ವರೆಗೆ, ನಾನು ಸಂವಾದ ನಡೆಸಿದ ಏಕೈಕ ವ್ಯಕ್ತಿ ವಿಜಯ್ ಸರ್" ಎಂದು ಹೇಳಿದ್ದಾರೆ.

"ವಿಜಯ್ ಸರ್ ನನಗೆ ಸಹೋದರನಂತಿದ್ದಾರೆ. ನಮ್ಮ ಜೀವನದಲ್ಲಿ ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ನಾವು ಸೀರಿಯಸ್ ಆಗಿ ಯೋಚಿಸುತ್ತೇವೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಿದ್ದರು ಮತ್ತು ನಾನು ಅವರಿಗೆ ಜವಾನ್ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆ ನೀಡಿದ್ದಾರೆ. ಯಾವಾಗಲೂ ನನಗೆ ಬೆನ್ನೆಲು" ಎಂದು ಅಟ್ಲಿ ಬಹಿರಂಗಪಡಿಸಿದ್ದಾರೆ.

More from Filmibeat

English summary
Will Vijay and Atlee reunite for fourth time?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X