"ನಾನು ಮದ್ವೆನೇ ಆಗಲ್ಲ, ಮದ್ವೆ ಆದವರೆಲ್ಲಾ ಸಂತೋಷವಾಗಿದ್ದಾರಾ ಹೇಳಿ?": ಆಂಡ್ರಿಯಾ
ಸಿನಿಮಾ ಕಲಾವಿದರ ಪರ್ಸನಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಬಹಳ ಕುತೂಹಲ ಇರುತ್ತದೆ. ನೆಚ್ಚಿನ ನಟ-ನಟಿಯರ ಮದುವೆ, ಫ್ಯಾಮಿಲಿ, ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಬಹಳ ಉತ್ಸುಕರಾಗಿರುತ್ತಾರೆ. ಸಿನಿಮಾ ತಾರೆಯರ ಡೇಟಿಂಗ್, ಎಂಗೇಜ್‌ಮೆಂಟ್, ಮ್ಯಾರೇಜ್, ಡಿವೋರ್ಸ್ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.
ನಟ-ನಟಿಯರು ಕೆಲವೊಮ್ಮೆ ಸಹ ಕಲಾವಿದರನ್ನೇ ಪ್ರೀತಿಸಿ ಮದುವೆ ಆಗಿರುವುದು ಇದೆ. ಚಿತ್ರರಂಗಕ್ಕೆ ಸಂಬಂಧವೇ ಇಲ್ಲದವರ ಜೊತೆ ಹಸೆಮಣೆ ಏರುವುದು ಇದೆ. ಒಟ್ನಲ್ಲಿ ಸೆಲೆಬ್ರೆಟಿಗಳು ಮ್ಯಾರೇಜ್ ಬಗ್ಗೆ ಭಾರೀ ಚರ್ಚೆ ಅಂತೂ ನಡೆಯುತ್ತಲೇ ಇರುತ್ತದೆ. ಇನ್ನು ಸಣ್ಣ ವಯಸ್ಸಿನಲ್ಲೇ ಮದುವೆ ಆದವರು, ವಯಸ್ಸು 50 ದಾಟಿದರೂ ಮಾದುವೆ ಆಗದೇ ಉಳಿದಿರುವ ಸ್ಟಾರ್ ನಟ, ನಟಿಯರು ಇದ್ದಾರೆ.

ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ ಮದುವೆ. ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವವರು ಇದ್ದಾರೆ. ಮದುವೆ ಎನ್ನುವುದು ಜೀವನ ಪರ್ಯಂತ ಸಾಗುವ ಬಂಧ. ಈ ಸಂಬಂಧ ಶಾಶ್ವತವಾಗಿ ಸುಮಧುರವಾಗಿರಬೇಕು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕರಿಯರ್ ಕಡೆ ಗಮನ ಹರಿಸಿದ ಕೆಲವರು ಮದುವೆಯನ್ನು ಮುಂದೂಡುತ್ತಾರೆ. ಚಿತ್ರರಂಗದಲ್ಲೂ ಅಂತಹವರು ಬಹಳ ಜನ ಸಿಗುತ್ತಾರೆ. ಆದರೆ ಕೆಲವರು ಮಾತ್ರ ಈ ಜನ್ಮದಲ್ಲಿ ಮದುವೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿರುತ್ತಾರೆ.
ಇತ್ತೀಚೆಗೆ ಸಿಂಗಲ್ ಲೈಫ್ ಎಂಜಾಯ್ ಮಾಡಲು ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೀವನದ ಒಂದು ಹಂತದಲ್ಲಿ ಮದುವೆ ಆಗಲೇಬೇಕು ಎನ್ನುವುದನ್ನು ಮರೆತು ಮುಂದೆ ಸಾಗುತ್ತಿದ್ದಾರೆ. ಚಿತ್ರರಂಗದ ಕೆಲ ನಟಿಯರು ಮದುವೆಯಿಂದ ದೂರವಿರುವುದು ಉತ್ತಮ ಎನ್ನುತ್ತಾರೆ. ಅನುಷ್ಕಾ ಶೆಟ್ಟಿ, ತ್ರಿಷಾ ಸೇರಿದಂತೆ ಕೆಲವರು ವಯಸ್ಸು 40 ದಾಟಿದರೂ ಮದುವೆ ಬಗ್ಗೆ ಯೋಚಿದಂತೆ ಕಾಣುತ್ತಿಲ್ಲ. ಸದ್ಯ ತಮಿಳು ನಟಿ ಆಂಡ್ರಿಯಾ ಜೆರೆಮಿಯಾ ಮದುವೆಯೇ ಬೇಡ ಎನ್ನುತ್ತಿದ್ದಾರೆ.

ತಮಿಳು ನಟಿ ಆಂಡ್ರಿಯಾ ಹಿನ್ನೆಲೆ ಗಾಯಕಿಯಾಗಿಗೂ ಗಮನ ಸೆಳೆದಿದ್ದಾರೆ. ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಹಾಡಿಗೂ ದನಿಯಾಗಿದ್ದಾರೆ. ಈ ಚೆನ್ನೈ ಚೆಲುವೆ ಸಂದರ್ಶನದಲ್ಲಿವೊಂದರಲ್ಲಿ ಮಾತನಾಡಿದ್ದು ನಾನು ಜೀವನದಲ್ಲಿ ಮದುವೆ ಆಗುವುದೇ ಇಲ್ಲ ಎಂದಿದ್ದಾರೆ. "ನಾನು ಕೂಡ 20-25 ನೇ ವಯಸ್ಸಿನಲ್ಲಿ ಮದುವೆಯಾಗಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಅದು ಸಾಧ್ಯವಾಗಲಿಲ್ಲ. ಈಗ ಮದುವೆಯಾದರೆ ಖುಷಿಯಾಗಿರುತ್ತೇನೆ ಅಂತಲ್ಲ, ಮದುವೆ ಆಗದಿದ್ದರೂ ತುಂಬಾ ಖುಷಿಯಾಗಿರುತ್ತೇನೆ" ಎಂದಿದ್ದಾರೆ.
ಮದುವೆ ಆಗಿರುವ ಎಷ್ಟು ಜನ ಸಂತೋಷದಿಂದ ಇದ್ದಾರೆ ಹೇಳಿ? ಎಂದು ಮರುಪ್ರಶ್ನೆ ಹಾಕಿದ್ದಾರೆ ಆಂಡ್ರಿಯಾ. "ಮದುವೆಯಾದವರ ಬಗ್ಗೆ ಮಾತನಾಡಲು ನಾನು ತಯಾರಿಲ್ಲ. ಈ ಜೀವನಕ್ಕೆ ಒಗ್ಗಿಕೊಂಡಿದ್ದೇನೆ. ಮದುವೆಯ ಬಗ್ಗೆ ಈಗ ಅಥವಾ ಮುಂದೆಯೂ ಯೋಚಿಸುವುದಿಲ್ಲ. ಮದುವೆ ಆಗಲ್ಲ ಎಂದಿದ್ದಾರೆ. ಸದ್ಯ 'ಡೆವಿಲ್'- 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಥಿಯೇಟರ್‌ಗೆ ಬರಲಿದೆ. ತಮಿಳು ಮಾತ್ರವಲ್ಲದೇ ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಆಂಡ್ರಿಯಾ ಬಣ್ಣ ಹಚ್ಚಿದ್ದಾರೆ.
ನಟಿ ಆಂಡ್ರಿಯಾ ತಮ್ಮ ಬೋಲ್ಡ್ ಆಟಿಟ್ಯೂಡ್ ಹಾಗೂ ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಂಡು ಬಹಳ ಸುದ್ದಿ ಆದವರು. ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ನಿರ್ದೇಶಕ ಸೆಲ್ವಾ ಜೊತೆ ಆಂಡ್ರಿಯಾ ಹೆಸರು ತಳುಕು ಹಾಕಿಕೊಂಡಿತ್ತು. ಅನಿರುದ್ಧ ಜೊತೆ ಆಂಡ್ರಿಯಾ ಲಿಪ್‌ಲಾಕ್ ಫೋಟೊಗಳು ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು.
'ಆಯಿರತ್ತಿಲ್ ಒರುವನ್', 'ತಡಾಕ', 'ವಿಶ್ವರೂಪಂ', 'ಅರಣ್ಮನೈ-3', 'ಅವಳ್', 'ತುಪ್ಪಾರಿವಾಲನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ. ಕೊನೆಯದಾಗಿ ತೆಲುಗಿನ 'ಸೈಂಧವ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ನಾಲ್ಕೈದು ತಮಿಳು ಸಿನಿಮಾಗಳು ಈ ಬಿಂದಾಸ್ ಬೆಡಗಿ ಕೈಯಲ್ಲಿವೆ.


Click it and Unblock the Notifications











