'ಮಿಷನ್ ಇಂಪಾಸಿಬಲ್'-14 ಚಿತ್ರದಲ್ಲಿ ಹೀರೊ ಯಶ್; 2040ರಲ್ಲಿ ಚಿತ್ರ ಬಿಡುಗಡೆ!

ರಾಕಿಂಗ್ ಯಶ್ ಈಗ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ನಟಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಮೂಲಕ ಮತ್ತಷ್ಟು ದಾಖಲೆಗಳನ್ನು ಬರೆಯಲು ಮುಂದಾಗಿದ್ದಾರೆ. ಯಶ್ ಸಿನಿಮಾಗಳಲ್ಲಿ ಹಾಲಿವುಡ್ ಖ್ಯಾತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಮುಂದೆ ಯಶ್ ಹಾಲಿವುಡ್ ಅಂಗಳಕ್ಕೆ ಅಡಿ ಇಟ್ಟರೂ ಅಚ್ಚರಿ ಪಡಬೇಕಿಲ್ಲ.

ಹಾಲಿವುಡ್ ಸೂಪರ್ ಹಿಟ್ ಸ್ಪೈ ಆಕ್ಷನ್ ಸರಣಿ 'ಮಿಷನ್ ಇಂಪಾಸಿಬಲ್'. ಟಾಮ್ ಕ್ರೂಸ್ ಈ ಸರಣಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಸಿನಿಮಾಗಳು ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿವೆ. ಇದೇ ಸರಣಿಯ 14ನೇ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೀರೊ ಆಗಿ ನಟಿಸಿದ್ರೆ, ಆ ಸಿನಿಮಾ 2040ರಲ್ಲಿ ಅಂದ್ರೆ 15 ವರ್ಷಗಳ ಬಳಿಕ ತೆರೆಗೆ ಬಂದ್ರೆ? ಸಖತ್ ಇಂಟ್ರೆಸ್ಟಿಂಗ್ ಅಲ್ವಾ? ಇದನ್ನೆಲ್ಲಾ ಊಹಿಸಿಕೊಂಡು ತಮಿಳು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

Yash s Mission Impossible 14 Poster Reference Steals Spotlight in Love Insurance Kompany Teaser

ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಆರಂಭದಲ್ಲೇ 'ಮಿಷನ್ ಇಂಪಾಸಿಬಲ್'-14 ಪೋಸ್ಟರ್ ದರ್ಶನವಾಗಿದೆ. ಪೋಸ್ಟರ್‌ನಲ್ಲಿ IMF ಏಜೆಂಟ್ ಅವತಾರದಲ್ಲಿ ಯಶ್ ಅವರನ್ನು ನೋಡಬಹುದು. ಸದ್ಯ ಅಭಿಮಾನಿಗಳು ಈ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ತಮಿಳು ಚಿತ್ರದಲ್ಲಿ ಯಶ್ ರೆಫರೆನ್ಸ್ ತಗೊಂಡಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

'ಲವ್ ಇನ್ಸುರೆನ್ಸ್ ಕಂಪನಿ' ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ಪತ್ನಿ ನಯನತಾರ ಜೊತೆ ಸೇರಿ ಬಂಡವಾಳ ಹೂಡಿದ್ದಾರೆ. ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಚಿತ್ರದಲ್ಲಿ ನಯನತರಾ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಯಶ್ ಅನುಮತಿ ಪಡೆದೇ ಈ ರೀತಿ ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಚೆನ್ನೈ ಹಿನ್ನೆಲೆಯಲ್ಲಿ ಕಥೆ ಹೇಳಲಾಗಿದೆ. 'ಲವ್ ಟುಡೇ', 'ಡ್ರ್ಯಾಗನ್' ನಟಿಸಿ ಗೆದ್ದ ಪ್ರದೀಪ್ ರಂಗನಾಥನ್ 'ಲವ್ ಇನ್ಸುರೆನ್ಸ್ ಕಂಪನಿ' ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಕೃತಿ ಶೆಟ್ಟಿ ನಾಯಕಿಯಾಗಿ ಮಿಂಚಿದ್ದು ಎಸ್‌. ಜೆ ಸೂರ್ಯ, ಯೋಗಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Yash s Mission Impossible 14 Poster Reference Steals Spotlight in Love Insurance Kompany Teaser

ಇದೊಂದು ಟೈಮ್ ಟ್ರಾವಲ್ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. 2040ರಲ್ಲಿ ಪ್ರಪಂಚ ಯಾವ ರೀತಿ ಇರಬಹುದು, ಅತ್ಯಾಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮನುಷ್ಯನ ಜೀವನ ಶೈಲಿ ಸಂಪೂರ್ಣ ಬದಲಾಗಿರುತ್ತದೆ. ಆ ರೋಬೊಟಿಕ್ ಯುಗದಲ್ಲಿ ಕೂಡ ಲವ್ ಅಟ್ ಫಸ್ಟ್ ಸೈಟ್ ಎನ್ನುವುದೆಲ್ಲಾ ಇದೆ ಎಂದು ನಾಯಕ ನಂಬಿರುತ್ತಾನೆ. ಹೀಗೆ ಮೊದಲ ನೋಟದಲ್ಲಿ ಆಕೆಯ ಮೇಲೆ ಆತನಿಗೆ ಲವ್ ಆಗುತ್ತದೆ. ಮುಂದೇನು? ಎನ್ನುವುದು ಇನ್ನುಳಿದ ಸಿನಿಮಾ ಕಥೆ ಅನ್ನೋದು ಟೀಸರ್ ನೋಡಿದರೆ ಗೊತ್ತಾಗುತ್ತದೆ.

'ಲವ್ ಇನ್ಸುರೆನ್ಸ್ ಕಂಪನಿ' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೀಸರ್ ಬಿಜಿಎಂ ಚೆನ್ನಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 3 ವರ್ಷಗಳ ಬಳಿಕ ವಿಘ್ನೇಶ್ ಶಿವನ್ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇನ್ನು 15 ವರ್ಷಗಳ ಬಳಿಕ 'ಮಿಷನ್ ಇಂಪಾಸಿಬಲ್'-14 ಚಿತ್ರದಲ್ಲಿ ಯಶ್ ನಟಿಸುತ್ತಾರೆ ಅನ್ನೋದು ಮಾತ್ರವಲ್ಲ, ರಜನಿಕಾಂತ್ 189ನೇ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ತೋರಿಸಲಾಗಿದೆ. ತಲೈವರ್ 189 ಎನ್ನುವ ಮತ್ತೊಂದು ಪೋಸ್ಟರ್ ಕೂಡ ಟೀಸರ್ ನಡುವೆ ಬರುವುದನ್ನು ನೋಡಬಹುದು.

ಸದ್ಯ 'ಲವ್ ಇನ್ಸುರೆನ್ಸ್ ಕಂಪನಿ' ಸಿನಿಮಾ ಟೀಸರ್ ನೋಡಿದವರು ನಿರ್ದೇಶಕರ ಕ್ರಿಯೇಟಿವಿಟಿ, ವಿಷನ್ ಎಲ್ಲವೂ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 60 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಅಕ್ಟೋಬರ್ 17ಕ್ಕೆ ತೆರೆಗೆ ಬರಲಿದೆ.

More from Filmibeat

English summary
Yash, Rajinikanth Posters Shine in Vignesh Shivan’s Futuristic Rom-Com Love Insurance Company Teaser
Read more about: yash nayanthara kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X