ಯಶ್- ಕೆವಿಎನ್ ಜಾಕ್‌ಪಾಟ್; 'ಟಾಕ್ಸಿಕ್' ಸಿನಿಮಾ ಬ್ಯುಸಿನೆಸ್ ಲೆಕ್ಕ ಕೊಟ್ಟ ತಮಿಳು ನಿರ್ಮಾಪಕ
ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಬಳಿಕ 'ತಬಾಹಿ' ಸಾಂಗ್ ಬಂದು ಹಿಟ್ ಆಗಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ತಯಾರಿ ಶುರುವಾಗಿದೆ. ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ಕಿದೆ.
ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ಸ್ಟಾರ್ ನಟ, ನಟಿಯರು ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಸಿನಿಮಾ ಬಗ್ಗೆ ಚಿತ್ರತಂಡ ಬಹಳ ಕಾನ್ಫಿಡೆಂಟ್ ಆಗಿದೆ. ಓಟಿಟಿ ರೈಟ್ಸ್, ಥ್ರಿಯೇಟ್ರಿಕಲ್ ರೈಟ್ಸ್, ಆಡಿಯೋ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಚಿತ್ರದ ಬ್ಯುಸಿನೆಸ್ ಬಗ್ಗೆ ತಮಿಳು ನಿರ್ಮಾಪಕ, ವಿತರಕ ಧನಂಜಯನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈಗಾಗಲೇ 'ಟಾಕ್ಸಿಕ್' ಸಿನಿಮಾ 600 ಕೋಟಿ ರೂ. ಬ್ಯುಸಿನೆಸ್ ಮಾಡಿಬಿಟ್ಟಿದೆ ಎಂದು ಧನಂಜಯನ್ ಹೇಳಿದ್ದಾರೆ. "ನಿಮಗೆ ನಯನತಾರಾ, ರುಕ್ಮಿಣಿ ವಸಂತ್, ಮಲಯಾಳಂನಿಂದ ಟೋವಿನೋ ಥಾಮಸ್ ಅದೇರೀತಿ ಅಮಿತ್ ಕರ್ವಾಲ್‌ರಂತನ ಕಲಾವಿದ್ದಾರೆ. ಅಷ್ಟು ಸಾಕಲ್ವಾ" ಎಂದಿದ್ದಾರೆ. ನಿರ್ದಿಷ್ಟ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಸಿನಿಮಾ ಮಾರ್ಕೆಟಿಂಗ್ ಚೆನ್ನಾಗಿ ಮಾಡಬಹುದು. 'ಜವಾನ್' ಸಿನಿಮಾ ಮಾಡಿ ನಯನತಾರಾ ಬಹಳ ಜನಪ್ರಿಯತೆ ಗಳಿಸಿದ್ದಾರೆ. 'ಕಾಂತಾರ-1' ಚಿತ್ರದ ಬಳಿಕ ರುಕ್ಮಿಣಿ ವಸಂತ್ ಎಲ್ಲರಿಗೂ ಗೊತ್ತು" ಹೀಗೆ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ಚಿತ್ರತಂಡ ಅರ್ಧ ಗೆದ್ದಿತ್ತು ಎಂದು ಅವರು ವಿಶ್ಲೇಷಿಸಿದ್ದಾರೆ.
"ಸುಮ್ನೆ ಎಲ್ಲಾ ಭಾಷೆಗೆ ಡಬ್ ಮಾಡಿಬಿಟ್ಟರೆ ಅದು ಪ್ಯಾನ್ ಇಂಡಿಯಾ ಸಿನಿಮಾ ಅನಿಸಿಕೊಳ್ಳಲ್ಲ. ಇಡೀ ಭಾರತವನ್ನೇ ಆಕರ್ಷಿಸುವ ರೀತಿಯಲ್ಲಿ ಸಿನಿಮಾಹೊರಬಂದಾಗ ಮಾತ್ರ ಅದು ಪ್ಯಾನ್-ಇಂಡಿಯಾ ಚಿತ್ರವಾಗಿ ಕಾಣುತ್ತದೆ. ಅದು ಬಿಟ್ಟು ಯಾರೋ ಒಬ್ಬರನ್ನು ತೋರಿಸಿ ಪ್ಯಾನ್ ಇಂಡಿಯಾ ಎಂದು ಕರೆದರೆ ಪ್ರಯೋಜನವಿಲ್ಲ. ಅದು ಪ್ರೇಕ್ಷಕರಿಗೆ ಅನುಮಾನ ಮೂಡಿಸಬಹುದು" ಎಂದು ಧನಂಜಯನ್ ತಿಳಿಸಿದ್ದಾರೆ. 'ಧುರಂಧರ್'-2 ಎದುರು 'ಟಾಕ್ಸಿಕ್' ಸಿನಿಮಾ ರಿಲೀಸ್ ಬಗ್ಗೆ ಕೂಡ ಮಾತನಾಡಿದ್ದಾರೆ. "ಚಿತ್ರತಂಡದ ನಡೆ ಸರಿಯಾಗಿದೆ. ಮಾರ್ಚ್ 19ಕ್ಕೆ 'ಧುರಂಧರ್'-2 ಎದುರು ಸಿನಿಮಾ ತೆರೆಗೆ ತರ್ತಿದ್ದಾರೆ. ಇದರಿಂದ 'ಟಾಕ್ಸಿಕ್' ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ವಿಶ್ವಾಸ ಬರುವಂತಾಗಿದೆ" ಎಂದಿದ್ದಾರೆ.

'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬೆಂಗಳೂರಿನಲ್ಲಿ ಈವೆಂಟ್ ಮಾಡಿ ಟ್ರೈಲರ್ ಪ್ರದರ್ಶನ ಮಾಡುವ ಪ್ರಯತ್ನ ಶುರುವಾಗಿದೆ. ಬೇರೆ ಭಾಷೆಗಳ ಪತ್ರಕರ್ತರು ಸುದ್ದಿಗೋಷ್ಠಿಗೆ ಹಾಜರಾಗುವ ನಿರೀಕ್ಷೆಯಿದೆ. ಹಾಗಾಗಿ ಅಭಿಮಾನಿಗಳು ಭಾಗವಹಿಸಲು ಅವಕಾಶ ಸಿಗುವುದು ಅನುಮಾನ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.
ಒಳ್ಳೆ ಕಲಾವಿದರ ತಂಡ ಮಾತ್ರವಲ್ಲ ಅದ್ಭುತ ತಂತ್ರಜ್ಞರನ್ನು ಯಶ್ ಆಯ್ಕೆ ಮಾಡಿಕೊಂಡಿದ್ದಾರೆ. ಸೆಟ್, ಸಾಂಗ್, ಕಾಸ್ಟ್ಯೂಮ್ ಹೀಗೆ ಪ್ರತಿಯೊಂದು ವಿಚಾರದಲ್ಲಿ ಯಶ್ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆ ತಿದ್ದಿ ತೀಡಿದ್ದಾರೆ. 'KGF- 2' ಬಳಿಕ ಮುಂದೇನು ಎನ್ನುವವರಿಗೆ ಖಡಕ್ ಉತ್ತರ ನೀಡಲು ಮುಂದಾಗಿದ್ದಾರೆ.
ಓವರ್‌ಸೀಸ್, ಆಂಧ್ರ-ತೆಲಂಗಾಣ, ತಮಿಳುನಾಡು, ಉತ್ತರ ಭಾರತ, ಕೇರಳ ಹೀಗೆ ಎಲ್ಲಾ ಭಾಗಗಳ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆ ಸಿನಿಮಾ ಬಿಡುಗಡೆ ಮಾಡಲಿದೆ.


Click it and Unblock the Notifications











