For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್, ಇಳಯರಾಜಗಾಗಿ 'ಕೆಜಿಎಫ್ 2' ವಿಶೇಷ ಪ್ರದರ್ಶನ

  |

  ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ಅದ್ಭುತ ಚಮತ್ಕಾರವನ್ನು ಮಾಡಿದೆ. ಈಗಾಗಲೇ ಸುಮಾರು 950 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾ ಸಾವಿರ ಕೋಟಿ ಸನಿಹದಲ್ಲಿದೆ. ಕೇವಲ 15 ದಿನಗಳಲ್ಲಿ 950 ಕೋಟಿ ಲೂಟಿ ಮಾಡಿದ ಸಿನಿಮಾ ಮೇಲೆ ಸಿನಿ ಸ್ಟಾರ್‌ಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

  'ಕೆಜಿಎಫ್ 2' ಬಿಡುಗಡೆಯಾದಲ್ಲೆಲ್ಲಾ ಅದ್ಭುತ ಕಲೆಕ್ಷನ್ ಮಾಡಿದೆ. ಅದರಲ್ಲೂ ತಮಿಳುನಾಡಿನಲ್ಲಿ ಸುಮಾರು 75 ಕೋಟಿಗೂ ಅಧಿಕ ಗಳಿಕೆ ಕಂಡಿರುವುದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದೇ ವೇಳೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾವನ್ನು ತಮಿಳು ಚಿತ್ರರಂಗದ ಇಬ್ಬರು ಲೆಜೆಂಡ್‌ಗಳು ಸಿನಿಮಾ ವೀಕ್ಷಿಸಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  15ನೇ ದಿನದಲ್ಲೂ ನಿಲ್ಲದ 'KGF 2' ಓಟ: ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ?15ನೇ ದಿನದಲ್ಲೂ ನಿಲ್ಲದ 'KGF 2' ಓಟ: ಇದೇ ವೀಕೆಂಡ್‌ನಲ್ಲಿ ದಾಟುತ್ತಾ 1000 ಕೋಟಿ?

  ಕಮಲ್ ಹಾಸನ್-ಇಳಯರಾಜರಿಂದ ವೀಕ್ಷಣೆ

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಬಿಡುಗಡೆಯಾಗಿ ಇಂದಿಗೆ(ಏಪ್ರಿಲ್ 29) 16ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿವರೆಗೂ 'ಕೆಜಿಎಫ್ 2' ಸಿನಿಮಾದ ಅಕ್ಕ-ಪಕ್ಕನೂ ಯಾರೂ ಸುಳಿದಿರಲಿಲ್ಲ. ಮೂರನೇ ವಾರದಿಂದ 'ಕೆಜಿಎಫ್ 2' ಎದುರು ಟಕ್ಕರ್ ಕೊಡಲು ನಾಲ್ಕೈದು ಸಿನಿಮಾಗಳು ರಿಲೀಸ್ ಆಗಿವೆ. ಇಂತಹ ಸಂದರ್ಭದಲ್ಲಿ ತಮಿಳು ಚಿತ್ರರಂಗದ ಲಿವಿಂಗ್ ಲೆಜೆಂಡ್ ಕಮಲ್ ಹಾಸನ್ ಹಾಗೂ ಇಳಯರಾಜ 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಿಸಿದ್ದಾರೆ.

  ಕಮಲ್ ಹಾಸನ್ ಹಾಗೂ ಇಳಯರಾಜ ಇಬ್ಬರಿಗೂ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿತ್ತು. ತಮಿಳು ವಿತರಕರು ಇಬ್ಬರು ದಿಗ್ಗಜರಿಗೆ ನಿನ್ನೆ( ಏಪ್ರಿಲ್ 28) ಚೆನ್ನೈನಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಆಯೋಜನೆ ಮಾಡಿದ್ದರು. ಇದೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  ಒಟ್ಟಿಗೆ ಕೂತು ಸಿನಿಮಾ ವೀಕ್ಷಿಸಿದ ದಿಗ್ಗಜರು

  ಕಮಲ್ ಹಾಸನ್ ಹಾಗೂ ಇಳಯರಾಜ ಇಬ್ಬರೂ ತಮಿಳು ಚಿತ್ರರಂಗದ ದಿಗ್ಗಜರು. ತಮ್ಮದೇ ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದರೂ, ಇಬ್ಬರೂ ಲೆಜೆಂಡ್‌ ಒಟ್ಟಿಗೆ ಕೂತು ಸಿನಿಮಾವನ್ನು ನೋಡಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ 'ಕೆಜಿಎಫ್ 2' ಚಿತ್ರಕ್ಕೆ ಮತ್ತಷ್ಟು ಬೆಂಬಲ ಬಂದಿದೆ.

  ತಮಿಳುನಾಡಿನಲ್ಲಿ ದಳಪತಿ ವಿಜಯ್ 'ಬೀಸ್ಟ್' ಸಿನಿಮಾಗೆ ಟಕ್ಕರ್ ಕೊಟ್ಟು ಗೆದ್ದು 'ಕೆಜಿಎಫ್ 2' ಸಹಜವಾಗಿಯೇ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಭಾರತೀಯ ಚಿತ್ರರಂಗದ ದಿಗ್ಗಜರೇ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಜನಿಕಾಂತ್‌ರಿಂದ ಹಿಡಿದು, ರಾಮ್‌ಚರಣ್, ಅಲ್ಲು ಅರ್ಜುನ್ ಸೇರಿದಂತೆ ಸ್ಟಾರ್ ನಟರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

  'ಕೆಜಿಎಫ್' ಎರಡು ಚಾಪ್ಟರ್‌ಗಳಲ್ಲಿ ಯಶ್ ಬಳಸಿದ ವಿಂಟೇಜ್ ಕಾರುಗಳ ವಿಶೇಷತೆ ಏನು?'ಕೆಜಿಎಫ್' ಎರಡು ಚಾಪ್ಟರ್‌ಗಳಲ್ಲಿ ಯಶ್ ಬಳಸಿದ ವಿಂಟೇಜ್ ಕಾರುಗಳ ವಿಶೇಷತೆ ಏನು?

  ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ದಿಗ್ಗಜರೇ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದನ್ನು ಇನ್ನೂ ನಿಲ್ಲಿಸಿಲ್ಲ. ಸದ್ಯ 950 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ, ಸಾವಿರ ಕೋಟಿ ಕ್ಲಬ್ ಯಾವಾಗ ಸೇರುತ್ತೋ ಎಂದು ಎದುರು ನೋಡುತ್ತಿದ್ದಾರೆ.

  English summary
  Yash Starrer KGF Chapter 2 Movie Special Screening For Kamal Haasan And Ilaiyaraja. Know More.
  Saturday, April 30, 2022, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X