For Quick Alerts
  ALLOW NOTIFICATIONS  
  For Daily Alerts

  'ಕಬಾಲಿ' ನಿರ್ದೇಶಕನ ಜೊತೆ ಯೋಗಿ ಬಾಬು ಹೊಸ ಸಿನಿಮಾ!

  |

  ಪಾ ರಂಜಿತ್ ನಿರ್ಮಾಣದಲ್ಲಿ ತಮಿಳು ಹಾಸ್ಯ ನಟ ಯೋಗಿಬಾಬು ನಟಿಸುತ್ತಿರುವ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಈ ಚಿತ್ರಕ್ಕೆ ಬೊಮ್ಮಾಯಿ ನಾಯಗಿ ಎಂದು ಹೆಸರಿಟ್ಟಿದ್ದು, ಇಂದಿನಿಂದ ಸಿನಿಮಾ ಆರಂಭವಾಗಿದೆ.

  ನಿರ್ದೇಶನದಲ್ಲಿ ಸಕ್ಸಸ್ ಕಂಡಿದ್ದ ಪಾ ರಂಜಿತ್ ಈ ಹಿಂದೆ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪರಿಯೆರುಮ್ ಪೆರುಮಾಲ್ ಮತ್ತು ಇರಂಡಮ್ ಉಲಗಪೊರಿನ್ ಕಡೈಸಿ ಗುಂಡು ಎಂಬ ಚಿತ್ರವನ್ನ ತಮ್ಮದೇ ಪ್ರೊಡಕ್ಷನ್‌ನಲ್ಲಿ ನಿರ್ಮಿಸಿದ್ದು, ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

  ಹಸೆಮಣೆ ಏರಿದ ಖ್ಯಾತ ಕಾಮಿಡಿ ನಟ ಯೋಗಿ ಬಾಬು

  ಬೊಮ್ಮಾಯಿ ನಾಯಗಿ ಚಿತ್ರ ಜನವರಿ 22 ರಂದು ಶುರುವಾಗಿದ್ದು, ಹೊಸ ನಿರ್ದೇಶಕ ಶಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ, ಇದು ಅಪ್ಪ ಮತ್ತು ಮಗಳ ನಡುವಿನ ಸಂಬಂಧದ ಕಥೆ ಹೊಂದಿದ್ದು, ಇವರಿಬ್ಬರ ಜೀವನದಲ್ಲಿ ರಾಜಕೀಯ ಹಾಗೂ ವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದೇ ಕಥೆ.

  ಸದ್ಯ, ಧನುಶ್ ನಟನೆಯ ಕರ್ಣನ್ ಚಿತ್ರದಲ್ಲಿ ಯೋಗಿಬಾಬು ನಟಿಸುತ್ತಿದ್ದಾರೆ. ಮರಿ ಸೆಲ್ವರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಯೋಗಿಬಾಬು ಅವರದ್ದು ಪ್ರಮುಖ ಪಾತ್ರವಾಗಿದ್ದು, ಈಗಾಗಲೇ ಶೂಟಿಂಗ್ ಸಹ ಮುಗಿದಿದೆ.

  ಯೋಗಿಬಾಬು ಸದ್ಯ ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಹಾಗೂ ಹೆಚ್ಚು ಬ್ಯುಸಿಯಿರುವ ನಟ. ಹತ್ತಕ್ಕೂ ಹೆಚ್ಚು ಚಿತ್ರಗಳು ಯೋಗಿಬಾಬು ಅವರ ಕೈಯಲ್ಲಿದೆ.

  ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada

  ಇನ್ನು ಕಳೆದ ವರ್ಷ ಮಂಜು ಭಾರ್ಗವಿ ಎಂಬ ಯುವತಿಯ ಜೊತೆ ಸಪ್ತಪದಿ ತುಳಿದ ಯೋಗಿಬಾಬು, ಹೆಣ್ಣು ಮಗುವಿಗೆ ಜನ್ಮ ಸಹ ನೀಡಿದ್ದರು.

  English summary
  Tamil actor Yogibabu and Pa ranjith film starts from Today

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X