ನಟಿಸಿದ ಮೊದಲ 3 ಚಿತ್ರಗಳು ₹100 ಕೋಟಿ ಗಳಿಸಿ ದಾಖಲೆ; ಇಂಡಸ್ಟ್ರಿಗೆ ಹೊಸ ಹ್ಯಾಟ್ರಿಕ್ ಹೀರೊ

ಚಿತ್ರರಂಗಕ್ಕೆ ಹೀರೊ ಆಗಿ ಬಂದು ಮೊದಲ ಚಿತ್ರದಲ್ಲೇ ಗೆದ್ದವರು ಸಾಕಷ್ಟು ಜನ ಇದ್ದಾರೆ. ಆದರೆ ಬಳಿಕ ಸಕ್ಸಸ್ ರೇಟ್ ಅದೇ ರೀತಿ ಇರುತ್ತಾ ಅಂತ ಹೇಳುವುದು ಕಷ್ಟ. ಮೊದಲ ಸಿನಿಮಾ ಹಿಟ್ ಆಗಿ ಬಳಿಕ ಮೂಲೆ ಗುಂಪಾದವರು. ಪ್ರಥಮ ಪ್ರಯತ್ನದಲ್ಲಿ ಗೆದ್ದು ಬಳಿಕ ಸೋತು ನಿಧಾನವಾಗಿ ಗೆಲುವಿನ ಹಾದಿ ಹಿಡಿದವರು ಇದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ನಟಿಸಿದ 3 ಚಿತ್ರಗಳು ಹಿಟ್ ಆಗಿತ್ತು. ಆ ಮೂಲಕ ಹ್ಯಾಟ್ರಿಕ್ ಹೀರೊ ಎಂಬ ಬಿರುದು ಅವರಿಗೆ ಸಿಕ್ಕಿತ್ತು. 'ಆನಂದ್' ಚಿತ್ರದ ಮೂಲಕ ಶಿವಣ್ಣ ಹೀರೊ ಆಗಿ ಎಂಟ್ರಿ ಕೊಟ್ಟಿದ್ದರು. ಬಳಿಕ 'ರಥಸಪ್ತಮಿ' ಹಾಗೂ 'ಮನಮೆಚ್ಚಿದ ಹುಡುಗಿ' ಚಿತ್ರಗಳು ಕೂಡ ಭರ್ಜರಿಯಾಗಿ ಗೆದ್ದಿದ್ದವು. ಆ ಬಳಿಕ ಬೇರೆ ನಟರು ಆ ಸಾಧನೆ ಮಾಡಲಿಲ್ಲ ಎಂದು ಹೇಳಬಹುದು.

Pradeep Ranganathan Becomes Kollywood s New Hat-Trick Hero with Three Consecutive 100 Crore Hits

ಸದ್ಯ ಇಲ್ಲೊಬ್ಬ ನಟ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹೀರೊ ಆಗಿ ನಟಿಸಿದ ಮೊದಲ 3 ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿದೆ. ನಿರ್ದೇಶಕನಾಗಿ ಬಂದ ಅವರು ಬಳಿಕ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡು ಗೆದ್ದವರು. ಮುಂದಿನ ಸೂಪರ್ ಸ್ಟಾರ್ ಎಂದೇ ಅವರನ್ನು ಅಭಿಮಾನಿಗಳು ಕರೆಯುತ್ತಿದ್ದಾರೆ. ಅಂದಹಾಗೆ ಅವರು ಬೇರೆ ಯಾರು ಅಲ್ಲ, ತಮಿಳು ನಟ, ನಿರ್ದೇಶಕ ಪ್ರದೀಪ್ ರಂಗನಾಥನ್.

6 ವರ್ಷಗಳ ಹಿಂದೆ 'ಕೋಮಲಿ' ಎಂಬ ಚಿತ್ರಕ್ಕೆ ಪ್ರದೀಪ್ ಆಕ್ಷನ್ ಕಟ್ ಹೇಳಿ ಕಮಾಲ್ ಮಾಡಿದ್ದರು. ಬಳಿಕ 'ಲವ್ ಟುಡೇ' ಎಂಬ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಮೊದಲ ಪ್ರಯತ್ನದಲ್ಲೇ ಹೀರೊ ಆಗಿ ಗೆಲುವಿನ ಬಾವುಟ ಹಾರಿಸಿದ್ದರು. ಮೊದಲ ಸಿನಿಮಾ ಹಿಟ್ ಆದಾಗ ಅದೃಷ್ಟ ಎಂದೇ ಕೆಲವರು ಭಾವಿಸಿದ್ದರು. ಇದೇ ವರ್ಷ ಬಂದ 'ಡ್ರ್ಯಾಗನ್' ಚಿತ್ರದಲ್ಲಿ ಮತ್ತೊಮ್ಮೆ ಪ್ರದೀಪ್ ದರ್ಬಾರ್ ನಡೆಸಿದ್ದರು. ಅಶ್ವಥ್ ಮಾರಿಮುತ್ತು ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.

Pradeep Ranganathan Becomes Kollywood s New Hat-Trick Hero with Three Consecutive 100 Crore Hits

ಇದೀಗ 'ಡ್ಯೂಡ್' ಎಂಬ ಸಿನಿಮಾ ಮೂಲಕ ಪ್ರದೀಪ್ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾರೆ. ಅಕ್ಟೋಬರ್ 17ರಂದು ಬಿಡುಗಡೆಯಾಗಿದ್ದ ಸಿನಿಮಾ 2 ವಾರಕ್ಕೆ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿರಸಿಕರ ಹುಬ್ಬೇರಿಸಿದೆ. ಕೆಲವರು ಕಾಲಿವುಡ್ ಹ್ಯಾಟ್ರಿಕ್ ಹೀರೊ ಪ್ರದೀಪ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಆರಡಿ ಹೈಟ್ ಇಲ್ಲ, ಸಿಕ್ಸ್‌ ಪ್ಯಾಕ್ ಬಾಡಿ ಇಲ್ಲ. ಬಹಳ ತೆಳ್ಳಗೆ ಇರುವ ಪ್ರದೀಪ್ ಮೈಬಣ್ಣದ ಕಾರಣಕ್ಕೆ ಚಿಕ್ಕಂದಿನಿಂದಲೂ ಬಾಡಿ ಶೇಮಿಂಗ್ ಎದುರಿಸಿರುವುದು ಇದೆ. ಆದರೆ ಅದನ್ನೆಲ್ಲಾ ಮೀರಿ ಇವತ್ತು ಹೀರೊ ಆಗಿ ಸಕ್ಸಸ್ ಕಂಡಿದ್ದಾರೆ. ರಜನಿಕಾಂತ್‌ಗೆ ವಯಸ್ಸಾಗ್ತಾ ಬಂತು, ಕಮಲ್, ವಿಜಯ್ ಪಾಲಿಟಿಕ್ಸ್ ಕಡೆ ಮುಖ ಮಾಡಿದ್ದಾರೆ. ಅಜಿತ್ ಸಿನಿಮಾ ಜೊತೆಗೆ ಕಾರ್‌ ರೇಸ್ ಗುಂಗಿನಲ್ಲಿದ್ದಾರೆ. ಇದು ತಮಿಳು ಚಿತ್ರರಂಗದಲ್ಲಿ ಪ್ರದೀಪ್ ಸ್ಟಾರ್ ನಟರಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸರಿಯಾದ ಸಮಯ ಎನ್ನುವ ಚರ್ಚೆ ಶುರುವಾಗಿದೆ.

'ಲವ್ ಇನ್ನುರೆನ್ಸ್ ಕಂಪನಿ' ಎಂಬ ಮತ್ತೊಂದು ಚಿತ್ರದಲ್ಲಿ ಪ್ರದೀಪ್ ನಟಿಸುತ್ತಿದ್ದಾರೆ. ವಿಘ್ನೇಶ್ ಶಿವನ್ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ಡಿಸೆಂಬರ್ 18ಕ್ಕೆ ಈ ಸೈನ್ಸ್ ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕೂಡ ತೆರೆಗೆ ಬರಲಿದೆ. ಆ ಮೂಲಕ ಒಂದೇ ವರ್ಷದಲ್ಲಿ ಪ್ರದೀಪ್ ನಟನೆಯ 3 ಸಿನಿಮಾ ತೆರೆಗೆ ಬಂದಂತಾಗುತ್ತದೆ.

More from Filmibeat

Read more about: kollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X