'ಯುವರತ್ನ' ಸಿನಿಮಾದ ನಟಿ ಸಯ್ಯೇಶಾ ಬಿಕಿನಿ ಫೋಟೋ ವೈರಲ್
ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಸಿನಿಸೆಲೆಬ್ರಿಟಿಗಳು ಯಾವಾಗಲು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಕೊರೊನಾ ಅಟ್ಟಹಾಸದ ಪರಿಣಾಮ ಕುಟುಂಬದ ಜೊತೆ ಕಾಲಕಳೆಯಲು ಅವಕಾಶ ಸಿಕ್ಕಿದೆ.
Recommended Video
ಆದರೆ ಅನೇಕರು ಈ ಲಾಕ್ ಡೌನ್ ನಲ್ಲಿ ಇಷ್ಟವಾದ ಪ್ರದೇಶ, ಪ್ರಯಾಣವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಿನಿಮಾ ಮಂದಿ ಆಗಾಗ ಇಷ್ಟವಾದ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು. ಆದರೀಗ ಕೊರೊನಾ ಹಾವಳಿಯ ಕಾರಣ ಎಲ್ಲಿಗೂ ಹೋಗಲು ಸಾಧ್ಯವಾಗದೆ ಮನೆಯಲ್ಲಿಯೆ ಲಾಕ್ ಆಗಿದ್ದಾರೆ. ಆದರೆ ಆಗಾಗ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಸಯ್ಯೇಶಾ ಸೈಗಲ್ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸಯ್ಯೇಶಾ ಬಿಕಿನಿ ಫೋಟೋ ವೈರಲ್
ಯುವರತ್ನ ಸಿನಿಮಾದ ನಾಯಕಿ ಸಯ್ಯೇಶಾ ಸೈಗಲ್ ಹಳೆಯ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಬಿಕಿನಿ ಧರಿಸಿರುವ ಸಯ್ಯೇಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ತಾರೆಯರು ಸಹ ಸಯ್ಯೇಶಾ ಫೋಟೋಗೆ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.

ಪ್ರಯಾಣವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ
ಬಾಲಿಯಲ್ಲಿ ತೆಗೆದಿರುವ ಫೋಟೋ ಇದಾಗಿದ್ದು, ಸಯ್ಯೇಶಾ ನೀಲಿ ಬಣ್ಣದ ಬಿಕಿನಿ ಧರಿಸಿದ್ದಾರೆ. ಫೋಟೋ ಜೊತೆಗೆ "ನಾನು ನೀರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ" ಎಂದು ಬರೆದುಕೊಂಡಿದ್ದಾರೆ. ರಜೆಯ ಪ್ರವಾಸವನ್ನು ಮಿಸ್ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವ ಸಯ್ಯೇಶಾ ಈ ಹಿಂದಿಯು "ನಾನು ಪ್ರಯಾಣವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ರಜಾದಿನಕ್ಕೆ ನನ್ನನ್ನು ಕರೆದೋಯ್ಯಿರಿ" ಎಂದು ಬರೆದುಕೊಂಡು ಪ್ರವಾಸದ ಫೋಟೋವನ್ನು ಹಂಚಿಕೊಂಡಿದ್ದಾರೆ.

2019ರಲ್ಲಿ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ
ನಟಿ ಸಯ್ಯೇಶಾ ಸೈಗಲ್ 2019ರಲ್ಲಿ ತಮಿಳು ಖ್ಯಾತ ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರ ಭಾರತದ ನಟಿ ಸಯ್ಯೇಶಾ ತಮಿಳು ನಟ ಆರ್ಯ ಅವರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

ಯುವರತ್ನ ಸಿನಿಮಾದಲ್ಲಿ ಸಯ್ಯೇಶಾ ಅಭಿನಯ
ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ನಟಿ ಸಯ್ಯೇಶಾ ಸೈಗಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಮೂಲಕ ಸಯ್ಯೇಶಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಮತ್ತು ಸಯ್ಯೇಶಾ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











